ರಕ್ತಹೀನತೆಯಿಂದ ದೈಹಿಕ ಬೆಳವಣಿಗೆ ಕುಂಠಿತ

159

Get real time updates directly on you device, subscribe now.

ತುಮಕೂರು: ರಕ್ತಹೀನತೆಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಯೂನಿಸೆಫ್ ವಿಭಾಗದ ಮುಖ್ಯ ಪ್ರತಿನಿಧಿ ಕೆ.ವಿಶ್ವನಾಥ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಸ್ಪತ್ರೆಯ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ರಕ್ತ ಹೀನತೆ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮಕ್ಕಳು, ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ತಾಯಂದಿರು ಹೆಚ್ಚಾಗಿ ರಕ್ತಹೀನತೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಪರಿಸರ ಸ್ವಚ್ಛತೆ ಇಲ್ಲದಿರುವುದು, ಮಹಿಳೆಯರಲ್ಲಾಗುವ ರಕ್ತಸ್ರಾವ, ಆಹಾರ ಸೇವನೆಯ ಬಗ್ಗೆ ಸರಿಯಾದ ಅರಿವಿಲ್ಲದಿದ್ದರೆ ರಕ್ತಹೀನತೆ ಕಂಡು ಬರುವುದಲ್ಲದೆ ಮಲೇರಿಯಾ, ಜಂತುಹುಳು, ಪೌಷ್ಠಿಕ ಆಹಾರದ ಕೊರತೆ ಮತ್ತಿತರ ಕಾರಣಗಳಿಂದಲೂ ರಕ್ತ ಹೀನತೆ ಉಂಟಾಗುವ ಸಾಧ್ಯತೆ ಇದೆ ಎಂದರು.
ರಕ್ತ ಮುಕ್ತ ಭಾರತವನ್ನಾಗಿಸಲು ಸರಿಯಾದ ಪೌಷ್ಟಿಕಾಂಶ ಸೇವನೆ, ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲವುಳ್ಳ ರೋಗ ಪ್ರತಿಬಂಧಕ ಮಾತ್ರೆ ಸೇವನೆ, ನವಜಾತ ಶಿಶುವಿನ ಒಕ್ಕಳ ಬಳ್ಳಿಯನ್ನು ತಡವಾಗಿ ಕತ್ತರಿಸುವುದು, ವರ್ಷದಲ್ಲಿ ೨ ಬಾರಿ ಮಕ್ಕಳು, ಹದಿಹರೆಯದವರು, ಸಂತಾನೋತ್ಪತ್ತಿ ಅವಧಿಯ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಜಂತುಹುಳು ನಿವಾರಕ ಮಾತ್ರೆ ಸೇವನೆಯಿಂದ ರಕ್ತಹೀನತೆ ತಡೆಗಟ್ಟಬಹುದು.
ಕಾರ್ಯಾಕ್ರಮದಲ್ಲಿ ಯುನಿಸೆಫ್ ಸಂಸ್ಥೆಯ ಪ್ರತಿನಿಧಿ ಮನೋಜ್, ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಪ್ರಭಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕುಲಕರ್ಣಿ, ಆರ್ಸಿಎಚ್ ಅಧಿಕಾರಿ ಡಾ.ಕೇಶವ್ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಧರ್, ಡಿಡಿಪಿಐ ನಂಜಯ್ಯ, ಮಕ್ಕಳ ತಜ್ಞ ವಿಭಾಗದ ಡಾ.ಮುಕ್ತಾಂಬ, ತಾಲ್ಲೂಕು ಟಿಎಚ್ಓಗಳು, ಆರ್ಬಿಎಸ್ಕೆ ಅಧಿಕಾರಿಗಳು ಹಾಗೂ ಆಶಾ ಕಾರ್ಯ ಕರ್ತೆಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!