ಕೊರಟಗೆರೆ: ವಿದೇಶದಲ್ಲಿ ಮಹಿಳೆಗೆ ಸಮಾನತೆ ಕಾನೂನಿನ ಪುಸ್ತಕದಲ್ಲಿ ಮಾತ್ರ ಸಿಮೀತ, ಭಾರತ ದೇಶದಲ್ಲಿ ಎಲ್ಲಾ ರಂಗದಲ್ಲಿಯು ಮಹಿಳೆಗೆ ವಿಶೇಷ ಸ್ಥಾನಮಾನ ದೊರೆತಿದೆ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಮಹಿಳಾ ಪ್ರಧಾನಿಯಾಗಿ ೧೬ ವರ್ಷ ಸೇವೆ ಸಲ್ಲಿಸಿದ ಕೀರ್ತಿ ಇಂದಿರಾಗಾಂಧಿಗೆ ಸಲ್ಲಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ತಾಪಂ ಮತ್ತು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಾ ಹಾಗೂ ೨೪ ಗ್ರಾಪಂಗಳ ಸ್ವಚ್ಛ ವಾಹಿನಿ ವಾಹನಗಳ ಲೋಕಾರ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದ ಸ್ವತಂತ್ರ ಪೂರ್ವದಲ್ಲಿ ಮಹಿಳೆ ಮನೆಗೆ ಮಾತ್ರ ಸಿಮೀತ, ಆದರೆ ನಮ್ಮ ದೇಶಕ್ಕೆ ಸ್ವತಂತ್ರ ಬಂದ ನಂತರ ಮಹಿಳೆಗೆ ವಿಶೇಷ ಸ್ಥಾನಮಾನ ಲಭಿಸಿದೆ, ಭಾರತ ದೇಶದ ಮಹಿಳೆ ಇಂದು ಗಡಿಭಾಗದ ಕಾವಲು ಸೇರಿದಂತೆ ಯುದ್ಧ ಭೂಮಿಯಲ್ಲಿ ಹೋರಾಡುವ ಸಾಮರ್ಥ್ಯ ಪಡೆದಿದ್ದಾಳೆ, ಹೆಣ್ಣು ಮಕ್ಕಳನ್ನು ಯಾರು ಕುರಿ ಮೇಕೆ ಕಾಯಲು ಕಳಿಸಬೇಡಿ, ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಬೇಕಿದೆ ಎಂದು ಆಗ್ರಹ ಮಾಡಿದರು.
ನಮ್ಮ ಭಾರತ ದೇಶದ ಪ್ರತಿಯೊಂದು ಕುಟುಂಬದ ಗೌರವವೇ ಹೆಣ್ಣು, ಯುದ್ಧ ಭೂಮಿಯಲ್ಲಿ ಮಹಿಳಾ ಪತ್ರಕರ್ತರು ಸಹ ಸೇವೆ ಸಲ್ಲಿಸುತ್ತಿದ್ದಾರೆ, ಭಾರತ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ, ನಮ್ಮ ಕೊರಟಗೆರೆ ತಾಲೂಕಿನಲ್ಲಿ ಸುಮಾರು ೧ ಕೋಟಿ ೨೦ ಲಕ್ಷ ವೆಚ್ಚದಲ್ಲಿ ೨೪ ಗ್ರಾಪಂಗೆ ೨೪ ಸ್ವಚ್ಛತಾ ವಾಹಿನಿಗಳನ್ನು ಹಸ್ತಾಂತರ ಮಾಡಲಾಗಿದೆ, ಸ್ವಚ್ಛತಾ ವಾಹಿನಿಗಳ ನಿರ್ವಹಣೆಯನ್ನು ಮಹಿಳೆಯರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಅಥಿಕ್ ಪಾಷ, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ತಾಪಂ ಆಡಳಿತಾಧಿಕಾರಿ ದೀಪಶ್ರೀ, ಪಪಂ ಅಧ್ಯಕ್ಷೆ ಕಾವ್ಯರಮೇಶ್, ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್, ತಾಪಂ ಇಓ ದೊಡ್ಡಸಿದ್ದಪ್ಪ, ಕೃಷಿ ನಿರ್ದೇಶಕ ನಾಗರಾಜು, ಸಿಡಿಪಿಓ ಅಂಬಿಕಾ, ೨೪ ಗ್ರಾಪಂನ ಪಿಡಿಓ, ಕಾರ್ಯದರ್ಶಿ, ಮಹಿಳಾ ಸಂಘದ ಸದಸ್ಯರು ಇದ್ದರು.
Comments are closed.