ತುಮಕೂರು: ತಾಲ್ಲೂಕು ಆಫೀಸ್ನ ಭೂ ದಾಖಲೆಗಳ ವಿಭಾಗದ ಮೇಲ್ವಿಚಾರಕ ಲಕ್ಷ್ಮಯ್ಯ ಎಸಿಬಿ ಬಲೆಗೆ ಬಿದ್ದಿದ್ದಾನೆ.
ತುಮಕೂರು ತಾಲ್ಲೂಕು ಅಜ್ಜಿಪ್ಪನಹಳ್ಳಿ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಗೆ ಸಂಬಂಧಪಟ್ಟ ಭೂದಾಖಲೆಗಳ ನೀಡಲು ೫ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲಕ್ಷ್ಮಯ್ಯ.
ಅಕ್ರಮ ಗಣಿಗಾರಿಕೆ ವಿರುದ್ಧ ಲಕ್ಷ್ಮಯ್ಯ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರ ಅವರ ದೂರಿನ ಮೇರೆಗೆ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ೧೦೦೦ ಮುಂಗಡವಾಗಿ ಪಡೆದು ಇನ್ನುಳಿದ ೪೦೦೦ ಲಂಚ ಪಡೆಯುವಾಗ ಭ್ರಷ್ಟ ಅಧಿಕಾರಿ ಲಕ್ಷ್ಮಯ್ಯ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ರೆಕಾರ್ಡ್ ರೂಂ ಶಿರಸ್ತೇದಾರ ಮತ್ತು ತಹಸೀಲ್ದಾರ್ ಮೋಹನ್ ಕುಮಾರ್ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಈ ಭ್ರಷ್ಟಾಚಾರ ಅಕ್ರಮಗಳಿಗೆ ಕಾರಣ ಎಂದಿದ್ದಾರೆ, ಲಕ್ಷಕ್ಕೂ ಅಧಿಕ ಹಣ ಪಡೆದು ತಹಸೀಲ್ದಾರ್ ಕೋರ್ಟ್ನಲ್ಲಿ ಆದೇಶ ಮಾಡುತ್ತಿದ್ದಾರೆ, ಎಲ್ಲಾ ಅಧಿಕಾರಿಗಳು ಸೇರಿಯೇ ಇಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ, ಈ ಹಿಂದೆ ಕೂಡ ಸಾಮಾಜಿಕ ಕಾರ್ಯಕರ್ತ ಬೆಳಗುಂಬ ವೆಂಕಟೇಶ್ ಅವರು ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಿಚ್ಚಿಟ್ಟು ಹೋರಾಟಕ್ಕೂ ಮುಂದಾಗಿದ್ದರು, ಇದೀಗ ಅಲ್ಲಿನ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬೀಳುವ ಮೂಲಕ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರ ಹೊರ ಬಿದ್ದಿದೆ, ಇಲ್ಲಿನ ಎಲ್ಲಾ ಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು, ಇಲ್ಲವಾದಲ್ಲಿ ತಾಲ್ಲೂಕು ಕಚೇರಿ ಭ್ರಷ್ಟರ ಕೂಪವಾಗಲಿದೆ ಎಂದು ಬೆಳಗುಂಬ ವೆಂಕಟೇಶ್ ತಿಳಿಸಿದ್ದಾರೆ.
ಲಕ್ಷ್ಮಯ್ಯ ಎಸಿಬಿ ಬಲೆಗೆ
Get real time updates directly on you device, subscribe now.
Prev Post
Next Post
Comments are closed.