ಸಿದ್ದರಾಮಯ್ಯ ಹಿಂದೂ ಧರ್ಮ ವಿರೋಧಿ: ಸೊಗಡು

228

Get real time updates directly on you device, subscribe now.

ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೀರ್ ಸಾದಿಕ್ ರೀತಿ ಜಾತಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ, ಹಿಂದೂ ಧರ್ಮ ನಾಶ ಮಾಡಲು ಹೊರಟಿದ್ದಾರೆ, ಇಂತಹ ಎಷ್ಟು ಜನ ಮೀರ್ ಸಾಧಿಕ್ ಬಂದರೂ ಹಿಂದೂ ಧರ್ಮ ಒಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣ ಮಾಡುತ್ತ ಧರ್ಮ ಒಡೆಯುವ ಒಬ್ಬ ಸೈತಾನ್ ಎಂದರೆ ತಪ್ಪಾಗಲ್ಲ, ಕನಕದಾಸರು ಸರ್ವ ಸಮಾನರು, ಜಾತ್ಯತೀತತೆ ಧರ್ಮಗಳನ್ನು ಸಂಘಟಿಸುವ ಕಾರ್ಯ ಮಾಡಿದರೆ, ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಕನಕದಾಸರ ಹೆಸರು ಹೇಳಲು ಇವರಿಗೆ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
1940 ರ ಸ್ವಾತಂತ್ರ್ಯಪೂರ್ವದಲ್ಲಿನ ಜಿನ್ನಾ ಈಗಿನ ಸಿದ್ದರಾಮಯ್ಯ ಇಬ್ಬರು ಒಂದೇ, ಜಿನ್ನಾ ನಮಗೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಟ್ಟಿದ್ದರು, ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ನವರು ಮುಸಲ್ಮಾನ ಧರ್ಮದ ವಿರುದ್ಧ ಮಾತನಾಡಿದವರಲ್ಲ, ಆದರೆ ಈಗಿನ ಕಾಂಗ್ರೆಸ್ನವರು ತಮ್ಮ ವೈಯಕ್ತಿಕ ತೆವಲಿಗೆ ಮನಬಂದಂತೆ ಸಮಾಜಕ್ಕೆ ಕಂಟಕಪ್ರಾಯವಾಗಿ ನಡೆದುಕೊಳ್ಳಿತ್ತಿದ್ದಾರೆ, ಅದರಲ್ಲಿ ಸಿದ್ದರಾಮಯ್ಯ ಒಬ್ಬ ಹಿಂದೂ ಧರ್ಮ ವಿರೋಧಿಯಂತಿರುವ ಸೈತಾನ್ ಆಗಿದ್ದಾರೆ, ಇವರಿಗೆ ಸುಮಾರು ಜನರು ಸಂಘಟಿತರಾಗಿ ತಕ್ಕ ಶಾಸ್ತ್ರಿ ಮಾಡ್ತಾರೆ, ಮುಖ್ಯಮಂತ್ರಿ ಆಗುವುದು ಬರಿ ಕನಸಲ್ಲಿ ಮಾತ್ರ ಎಂದು ಲೇವಡಿ ಮಾಡಿದರು.
ಸ್ವಾಮಿಗಳ ಬಗ್ಗೆ ಮಾತಾಡೋಕೆ ಏನು ಯೋಗ್ಯತೆಯಿದೆ? ನಮ್ಮದೇ ರಕ್ತವನ್ನು ತೆಗೆದುಕೊಂಡು ಹೋಗಿ ಮೀರ್ ಸಾಧಿಕರಿಗೆ ಕೊಟ್ಟಿದ್ದಾರೆ, ವಕೀಲರ ವೃತ್ತಿ, ಧರ್ಮ, ಅವರ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ, ಸಮಾಜ ಒಡೆಯುವ ಕೆಲಸ ಅಷ್ಟು ಆರೋಗ್ಯಕರವಲ್ಲ ಎಂದರು.
ಇಂತಹ ಧರ್ಮ ವಿರೋಧಿ ಕಾರ್ಯಗಳ ಬಗ್ಗೆ ಮಾತನಾಡಿದರೆ ಬೆದರಿಕೆ ಹಾಕ್ತಾರೆ, ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಕಿವಿಕೊಡಲ್ಲ, ಬೆದರಿಕೆ ಹಾಕುವ ಕೆಲಸ ಬಿಡಬೇಕು, ಬೆದರಿಕೆ ಹಾಕುವವರಿಗೆ ಸೈಬರ್ ಮೂಲಕ ನಿಯಂತ್ರಿಸುವ ಕಾರ್ಯ ಮಾಡಬೇಕು ಎಂದರು.
ದೇವೇಗೌಡ ಧರ್ಮ ನಿಷ್ಠೆಯುಳ್ಳವರು, ಸಿದ್ದರಾಮಯ್ಯ ಆ ವರ್ಗದಿಂದ ಹೊರಗಿದ್ದಾರೆ, ಸಿದ್ದರಾಮಯ್ಯ ಬುದ್ಧಿ ಸುಟ್ಟರೂ ಹೋಗುವುದಿಲ್ಲ, ದೇಶ ಕಟ್ಟಬೇಕಾದರೆ ವಲ್ಲಭಬಾಯಿ ಪಟೇಲ್ ಅವರಂತೆ ಅಮಿತ್ ಶಾ ಕಾರ್ಯಗಳು ಮುಂದೆ ತಿಳಿಯುತ್ತವೆ,
ಕಾಂಗ್ರೆಸ್ಗೆ ಭವಿಷ್ಯವಿಲ್ಲ, ಮೂಲ ಕಾಂಗ್ರೆಸ್ ನಿಂದ ಮುಸ್ಲಿಂರಿಗೆ ಬೆಂಬಲ ನೀಡುತ್ತಿರಲಿಲ್ಲ, ನೆಹರೂ, ಗಾಂಧಿ ಯಾರೂ ಕೂಡ ಪ್ರತ್ಯೇಕ ರಾಷ್ಟ್ರಕ್ಕೆ ಬೆಂಬಲಿಸಲಿಲ್ಲ, ನಾನೇ ಮಾಡಿದ್ದು ಎಂದು ಯಾಕೆ ಹೇಳ್ಕೊಳ್ತಿರಾ ಎಂದರು.
2023 ರ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮುಖಂಡ ಜಯಸಿಂಹ ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!