ತುಮಕೂರು: ಏ.1ನೇ ತಾರೀಕಿನಂದು ಅದ್ದೂರಿಯಾಗಿ ಪರಮಪೂಜ್ಯ ಲಿಂಗೈಕ್ಯ ಡಾ.ಶಿವಕುಮಾರ 115 ನೇ ವರ್ಷದ ಜನ್ಮ ದಿನಾಚರಣೆ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ವಿಜಯೇಂದ್ರ ತಿಳಿಸಿದರು.
ಸಿದ್ದಗಂಗಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಸಿದ್ದಗಂಗಾ ಮಠ ಎಂದರೆ ಕೇವಲ ಅದೊಂದು ಮಠವಾಗಿರದೆ ಧಾರ್ಮಿಕ ಕ್ಷೇತ್ರವಾಗಿ ಪ್ರತಿದಿನವೂ ಇಲ್ಲಿಗೆ ಬರುವ ಭಕ್ತರಿಗೆ, ಜನಸಾಮಾನ್ಯರಿಗೆ ಸಾಂಪ್ರದಾಯಿಕ ಅನ್ನ ದಾಸೋಹ ಕಲ್ಪಿಸುವ ಅಕ್ಷಯ ಪಾತ್ರೆಯಾಗಿದೆ ಎಂದರು.
ಸಾವಿರಾರು ಸಂಖ್ಯೆಯಲ್ಲಿನ ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ಕರುಣಿಸುತ್ತಿರುವ ಜ್ಞಾನ ದೇಗುಲವಾಗಿದೆ, ಹಾಗಾಗಿ ಏಪ್ರಿಲ್ 1 ರಂದು ನಡೆಯುವ ಪೂಜ್ಯರ ಹುಟ್ಟು ಹಬ್ಬದ ಧಾರ್ಮಿಕ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಿಂದ ಪೂಜ್ಯರ ಹುಟ್ಟಿದ ದಿನ ಆಚರಿಸಲು ಸಾಧ್ಯವಾಗಿರಲಿಲ್ಲ, ಈಗ ವ್ಯವಸ್ಥಿತವಾಗಿರುವುದರಿಂದ ತುಂಬಾ ವಿಜೃಂಭಣೆಯಿಂದ ಆಚರಿಸುವ ಸಕಲ ಸಿದ್ಧತೆ ನಡೆಯುತ್ತಿವೆ, ಕಾರ್ಯಕ್ರಮದಂದು ಮಠದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಸೇರಲಿದೆ ಎಂದು ತಿಳಿಸಿದರು.
ಅಂದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ, ವಿಜಯ್ ಪ್ರಕಾಶ್, ಹಂಸಲೇಖ ನೇತೃತ್ವದಲ್ಲಿ ನಡೆದಾಡುವ ಬಸವ ಭಾರತ ಎಂಬ ವೆಬ್ ಸೀರಿಸ್ ಕೂಡ ಬಿಡುಗಡೆಯಾಲಿದೆ, ಕಾರ್ಯಕ್ರಮಕ್ಕೆ ಬರುವ ವಾಹನಗಳು ಬಟವಾಡಿ, ದೇವರಪುರದ ಮೂಲಕ ಮಠಕ್ಕೆ ಬರುವ ವ್ಯವಸ್ಥೆ ಮಾಡಲಾಗುವುದು, ರೈಲ್ವೆ ಗೇಟ್ ಬಳಿಯಿಂದ ಸಾರ್ವಜನಿಕರಿಗೆ ಮಾತ್ರ ಅವಕಾಶ ಇರುತ್ತದೆ, ಬಿಟ್ಟರೆ ವಾಹನಗಳು ಪ್ರವೇಶಿಸಲು ವ್ಯವಸ್ಥೆ ಇರುವುದಿಲ್ಲ, ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಇನ್ನೊಮ್ಮೆ ವ್ಯವಸ್ಥೆಗೊಳಿಸಿ ಮಾಹಿತಿ ನೀಡುತ್ತೇವೆ, ಪ್ರತಿ ವರ್ಷದಂತೆ ಈ ವರ್ಷವೂ ಪೂಜ್ಯರ ಜನ್ಮದಿನದಂದು ವಿಶೇಷ ಭೋಜನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಭಾರತ ರತ್ನ ಪ್ರಶಸ್ತಿಯನ್ನು ಡಾ.ಶಿವಕುಮಾರ ಸ್ವಾಮೀಜಿಯವರಿಗೆ ನೀಡಬೇಕೆನ್ನುವ ಒತ್ತಾಯದ ಮನವಿ ಮಾಡಲಾಗುವುದು, ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯಯ ವಹಿಸುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದಾರೆ. ಸುಮಾರು ಎರಡು ಗಂಟೆ ಕಾಲ ನಡೆಯುವ ವೇದಿಕೆ ಕಾರ್ಯಕ್ರಮ 10.30 ಕ್ಕೆ ಆರಂಭವಾಗಲಿದ್ದು, ಬೆಳಗ್ಗೆ 10.45 ಕ್ಕೆ ಮಠಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ವೇಳೆ ರಾಜ್ಯದ ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ, ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಜ್ಞಾನೇಂದ್ರ ಆರಗ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಮಾಧುಸ್ವಾಮಿ, ವಿ.ಸೋಮಣ್ಣ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು, ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜ್ಯೋತಿಗಣೇಶ್, ಶಿರಾ ಶಾಸಕ ರಾಜೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್, ನೆಲಮಂಗಲ ಮಾಜಿ ಶಾಸಕ ನಾಗಣ್ಣ, ಹೆಬ್ಬಾಕ ರವಿ, ಶ್ರೀನಿವಾಸ್ ಇತರರು ಇದ್ದರು.
ಶಿವಕುಮಾರ ಶ್ರೀಗಳ ಅದ್ದೂರಿ ಜನ್ಮ ದಿನಾಚರಣೆ
ಏ.1ಕ್ಕೆ ತುಮಕೂರಿಗೆ ಅಮಿತ್ ಶಾ ಆಗಮನ- ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
Get real time updates directly on you device, subscribe now.
Prev Post
Comments are closed.