ಅಡಿಕೆ ಗೋಡಾನ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ

334

Get real time updates directly on you device, subscribe now.

ಹುಳಿಯಾರು: ಅಡಿಕೆ ಗೋಡಾನ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದಲ್ಲಿ ಭಾನುವಾರ ರಾತ್ರಿ ಜರುಗಿದೆ.

ಹೊನ್ನಯ್ಯನಪಾಳ್ಯ ಗ್ರಾಮದ ತೋಟದಮನೆ ವಾಸಿ ಕಾಡಿನರಾಜ ನಾಗರಾಜು ಎಂಬುವವರಿಗೆ ಸೇರಿದ ಗೋಡಾನ್ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ. ಇವರು ಕಾಮಶೆಟ್ಟಿಪಾಳ್ಯದ ಶಿವನಂಜಪ್ಪನವರ ಜಮೀನಿನಲ್ಲಿ ಬಾಡಿಗೆ ಆದಾರದಲ್ಲಿ ಅಡಿಕೆ ತಟ್ಟೆ ತಯಾರಿಕಾ ಘಟಕವನ್ನು ಕಳೆದ ಒಂದೂವರೆ ವರ್ಷಗಳಿಂದ ನಡೆಸುತ್ತಿದ್ದರು. ಇದರಲ್ಲಿ ತಯಾರಿಕಾ ಘಟಕದ ಕೋಣೆ ಮತ್ತು ಗೋಡಾನ್ ಬೇರೆ ಬೇರೆ ಇದು ಗೋಡನ್ಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.
ಅಡಿಕೆತಟ್ಟೆ ತುಂಬಿದ ಗೋಡಾನ್ಗೆ ಯಾರು ಇಲ್ಲದ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರುತ್ತದೆ, ಬೆಂಕಿಯ ಕೆನ್ನಾಲಿಗೆಗೆ ಸುಮಾರು 25 ಸಾವಿರ ಅಡಿಕೆ ತಟ್ಟೆ, 50 ಸಾವಿರ ಅಡಿಕೆ ಹಾಳೆಗಳು, 500 ಪ್ರಾಸ್ಮಿಕ್ ಚೀಲಗಳು, 1000 ಲೀಟರ್ ನ ನೀರಿನ ಪ್ರಾಸಿಕ್ ಟ್ಯಾಂಕ್, 88 ಕಲ್ಲು ಕಂಬಗಳು, ಮಳೆ ಕೊಯ್ಲಿಗೆ ಹಾಕಿದ ಪಿವಿಸಿ ಪೈಪುಗಳು ಮತ್ತು ಶೆಡ್ ಗೆ ಹಾಕಿದ 300 ಬಿದಿರು ಗಣಗಳು 1000 ಅಡಿಕೆ ದಬ್ಬೆ ಮತ್ತು ಸುಮಾರು 5000 ತೆಂಗಿನ ಗರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ಸುಮಾರು 3 ಲಕ್ಷ ರೂ ನಷ್ಟು ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಅಲ್ಲದೆ ಶೆಡ್ ಪಕ್ಕದಲ್ಲಿದ ಪ್ರಕಾಶ ಅವರ ಮನೆಯ 500 ಲೀಟರ್ ವಾಟರ್ ಟ್ಯಾಂಕ್ ಮತ್ತು ಅದರ ಪೈಪುಗಳು ಸುಟ್ಟು ಹೋಗಿವೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!