ಕುಣಿಗಲ್ ಪುರಸಭೆಯಲ್ಲಿ ಆಕ್ರೋಶ, ಆವೇಶ

ಸಭೆಗೆ ಬರಬೇಡಿ ಎಂದಿದ್ದಕ್ಕೆ ಕಿಡಿ- ಬಿಜೆಪಿ ನಾಮಿನಿ ಸದಸ್ಯರ ಕೋಪ

233

Get real time updates directly on you device, subscribe now.

ಕುಣಿಗಲ್: ಬಿಜೆಪಿ ನಾಮಿನಿ ಸದಸ್ಯರನ್ನು ಸಭೆಯಿಂದ ಹೊರ ಹೋಗಿ ಎಂದು ಕಾಂಗ್ರೆಸ್ ಸದಸ್ಯ ಹೇಳಿದ್ದಾರೆಂದು ಆಕ್ಷೇಪಿಸಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯನೊಂದಿಗೆ ವಾಗ್ವಾದ ನಡೆಸಿ ಕೈಕೈ ಮಿಲಾಯಿಸಲು ಮುಂದಾದ ಘಟನೆ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸೋಮವಾರ ಪುರಸಭೆ ಅಧ್ಯಕ್ಷ ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ, ಜೆಡಿಎಸ್, ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಸಿಎಂ ನಗರೋತ್ಥಾನ ನಿಧಿ ಹಂಚಿಕೆಯಲ್ಲಿ ತಾರರಮ್ಯಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯ ಕೃಷ್ಣ, ನಾಗಣ್ಣ ನೇತೃತ್ವದಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರು ಅಧ್ಯಕ್ಷರ ಕುರ್ಚಿ ಮುಂದೆ ಧರಣಿ ಕುಳಿತರು, ಬಿಜೆಪಿ ನಾಮಿನಿ ಸದಸ್ಯರು ಧರಣಿ ಬೆಂಬಲಿಸಿ ಕೂರಲು ಮುಂದಾದರು, ಈವೇಳೆ ಕಾಂಗ್ರೆಸ್ ಸದಸ್ಯ ರಾಮು, ನಾಮಿನಿ ಸದಸ್ಯರು ಪ್ರತಿ`Àಟಿಸುವಂತಿಲ್ಲ ಎಂದು ಆಕ್ಷೇಪಿಸಿ ತಗಾದೆ ತೆಗೆದರು ಮಾತಿಗೆ ಮಾತು ಬೆಳೆದು ನಾಮಿನಿ ಸದಸ್ಯರನ್ನು ಕಾಂಗ್ರೆಸ್ ಸದಸ್ಯ ಹೊರಗಿ ಎಂದಿದ್ದು ಬಿಜೆಪಿ, ಜೆಡಿಎಸ್ ಸದಸ್ಯರ ಕೆರಳಿಸಿತು, ಧರಣಿ ಕುಳಿತಿದ್ದ ಎಲ್ಲಾ ಸದಸ್ಯರು ಕಾಂಗ್ರೆಸ್ ಸದಸ್ಯ ರಾಮು ಅವರೊಂದಿಗೆ ವಾಗ್ವಾದಕ್ಕೆ ಇಳಿದು ಏರು ಧ್ವವನಿಯಲ್ಲಿ ನಿಂದಿಸಲು ಪ್ರಾರಂಭಿಸಿ ಕೈಕೈ ಮಿಲಾಯಿಸುವ ಹಂತಕ್ಕೆ ತೆರಳಿದರು, ಅಧ್ಯಕ್ಷ ರಂಗಸ್ವಾಮಿ, ಪ್ರಭಾರ ಮುಖ್ಯಾಧಿಕಾರಿ ದೇವರಾಜು, ಇತರೆ ಸಿಬ್ಬಂದಿ, ಸದಸ್ಯರು ಹರಸಾಹಸ ಮಾಡಿ ಎರಡೂ ಕಡೆಯವರನ್ನು ಸಮಾಧಾನ ಮಾಡಿ ಸುಮ್ಮನಿರಿಸಿದರು.
ನಾಮಿನಿ ಸದಸ್ಯಗೋಪಿ, ಸರ್ಕಾರದಿಂದ ನೇಮಕವಾಗಿದ್ದೇವೆ, ನಮ್ಮ ಕೆಲಸದ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಮುಖ್ಯಾಧಿಕಾರಿ, ಅಧ್ಯಕ್ಷರು ಹೇಳಲಿ, ಅದು ಬಿಟ್ಟು ಸದಸ್ಯರು ನಮ್ಮನ್ನು ಹೊರ ಹೋಗುವಂತೆ ಹೇಳುವ ಅಧಿಕಾರ ಇಲ್ಲ ಎಂದರು.
ಸದಸ್ಯರಾಮು ಪುರಸಭೆ ನಿಯಮಾವಳಿ ಪುಸ್ತಕ ಓದಿ ಎಂಬ ಸಲಹೆ ನೀಡಿದರು. ಬಿಜೆಪಿ ಸದಸ್ಯ ಕೃಷ್ಣ, ನಗರೋತ್ಥಾನ ಅನುದಾನದಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರ ವಾರ್ಡ್ಗೆ 8- 10 ಲಕ್ಷ ಅನುದಾನ ಹಾಕಿ, ಬರಿ ಕಾಂಗ್ರೆಸ್ ಸದಸ್ಯರಿಗೆ ಮಾತ್ರ 20-25 ಲಕ್ಷ ಹಾಕಲಾಗಿದೆ, ಅಧ್ಯಕ್ಷರು ಈ ತಾರತಮ್ಯ ಸರಿಪಡಿಸುವವರೆಗೂ ಧರಣಿ ನಡೆಸುವುದಾಗಿ ಹೇಳಿದರು, ಅಧ್ಯಕ್ಷರು ಮಧ್ಯೆ ಪ್ರವೇಶಿಸಿ ಯಾವುದೇ ಕಾರಣಕ್ಕೂ ಯಾವುದೆ ಸದಸ್ಯರ ವಾರ್ಡ್ ಗೆ ಅನುದಾನ ತಾರತಮ್ಯ ಮಾಡುವುದಿಲ್ಲ, ಅಂದಾಜು ಪಟ್ಟಿ ಸಿದ್ಧ ಪಡಿಸಲು ವಿರೋಧ ಪಕ್ಷಗಳನ್ನು ಪರಿಗಣಿಸುವ ಭರವಸೆ ನೀಡಿದ ಮೇರೆಗೆ ಧರಣಿ ಹಿಂಪಡೆದರು.
ಪುರಸಭೆ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಕಟ್ಟಡ ಕಟ್ಟುತ್ತಿದ್ದರೂ ಇಂಜಿನಿಯರ್ ಬಿಂದುಸಾರ ಕ್ರಮ ಕೈಗೊಳ್ಳದೆ ಅಕ್ರಮ ಕಟ್ಟಡ ಕಟ್ಟಲು ಕುಮ್ಮಕ್ಕು ನೀಡುತ್ತಿದ್ದಾರೆ, ಈ ರೀತಿ ಆದರೆ ಹೇಗೆ, ಕಾನೂನು ಪಾಲನೆ ಬೇಡವೆ ಎಂದು ಸದಸ್ಯ ಸಮೀವುಲ್ಲಾ, ನಾಗಣ್ಣ ಆರೋಪಿಸಿ ತರಾಟೆಗೆ ತೆಗೆದುಕೊಂಡು ಅಕ್ರಮ ಕಟ್ಟಡ ನಿಲ್ಲಿಸುವಂತೆ ಆಗ್ರಹಿಸಿದ ಮೇರೆಗೆ ಅಧ್ಯಕ್ಷರು ಈನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿದರು.
ಪಟ್ಟಣದಲ್ಲಿ ಸಾಮಿಲ್ ಗಳಿಗೆ, ವಾಟರ್ ಸರ್ವಿಸ್ ಸ್ಟೇಷನ್ ಗಳಿಂದ ಯಾವುದೇ ತೆರಿಗೆ ವಸೂಲಾತಿ ಮಾಡದೆ ಇರುವ ಬಗ್ಗೆ ಸದಸ್ಯ ನಾಗಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ, ಸದಸ್ಯೆ ಮಂಜುಳಾ ಬಯೋಮೆಟ್ರಿಕ್ ಹಾಜರಾತಿ ಮಾಡುವಂತೆ ಆಗ್ರಹಿಸಿದರು. ಸದಸ್ಯ ಉದಯ, ಅಧಿಕಾರಿಗಳು ಕಚೇರಿಯಿಂದ ಹೊರ ಹೋಗುವಾಗ ಮೋಮೆಂಟ್ ರಿಜಿಸ್ಟರ್ಗೆ ಸಹಿ ಮಾಡಿ ಹೋಗುವಂತೆ ಆಗ್ರಹಿಸಿದರು. ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದು ಶೀಘ್ರದಲ್ಲೆ ನಾಲ್ಕು ಕೊಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಪುರಸಭೆ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸುವುದಾಗಿ ಅಧ್ಯಕ್ಷ ರಂಗಸ್ವಾಮಿ ಹೇಳಿದರು. ಪ್ರಭಾರ ಮುಖ್ಯಾಧಿಕಾರಿ ದೇವರಾಜು ಇತರೆ ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!