ಶಿವಕುಮಾರ ಶ್ರೀ ಜನ್ಮ ಜಯಂತಿಗೆ ಸಿದ್ಧತೆ

ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ- ತಯಾರಾಗ್ತಿದೆ ಸಿಹಿ ಬೂಂದಿ

196

Get real time updates directly on you device, subscribe now.

ತುಮಕೂರು: ಕಾಯಕ ಯೋಗಿ, ಅಭಿನವ ಬಸವಣ್ಣ, ಮಹಾ ಮಾನವತಾವಾದಿ, ತ್ರಿವಿಧ ದಾಸೋಹಿ ನಡೆದಾಡುವ ದೇವರೆಂದೆ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿವೆ.

ಕಳೆದ 2 ವರ್ಷಗಳಿಂದ ಕೊರೊನಾ ಸೋಂಕಿನ ಸಂಕಷ್ಟದ ದಿನಗಳು ಎದುರಾಗಿದ್ದರಿಂದ ಶ್ರೀಗಳ ಜನ್ಮ ಜಯಂತಿಯನ್ನು ಸರಳಾತಿ ಸರಳವಾಗಿ ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ಭಕ್ತರು, ಗಣ್ಯರಿಗೆ ಶ್ರೀಮಠಕ್ಕೆ ಆಹ್ವಾನ ಕೂಡ ಇರಲಿಲ್ಲ, ಆದರೆ ಈ ಬಾರಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಭಕ್ತವೃಂದ ಶ್ರೀಗಳ 115ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದೆ, ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶ್ರೀಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆದಿವೆ.
ಶ್ರೀಮಠದಲ್ಲಿ ಶ್ರೀಗಳ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಗೂ ಅತ್ಯಂತ ವೈಭವವಾಗಿ ಆಚರಿಸಲು ಭಕ್ತವೃಂದ ಸರ್ವ ಸನ್ನದ್ಧವಾಗಿದೆ.
ಶ್ರೀಗಳ 115ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಸಮಾರಂ`Àಕ್ಕೆ ಶ್ರೀಕ್ಷೇತ್ರ ಸಕಲ ರೀತಿಯಲ್ಲೂ ಅಣಿಯಾಗುತ್ತಿದ್ದು, ಲಿಂಗೈಕ್ಯ ಶ್ರೀಗಳ ಜಯಂತಿ ಕಣ್ತುಂಬಿಕೊಳ್ಳಲು ಲಕ್ಷಾಂತರ `Àಕ್ತ ಸಮೂಹ ಕಾತುರದಿಂದ ಕಾಯುತ್ತಿದೆ.
ಶ್ರೀಗಳ 115ನೇ ಜಯಂತಿಗೆ ಆಗಮಿಸಲಿರುವ ವಿವಿಧ ಮಠಾಧೀಶರು, ಹರಗುರು ಚರ ಮೂರ್ತಿಗಳು ಸೇರಿದಂತೆ ಗಣ್ಯಾತಿ ಗಣ್ಯರನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಶ್ರೀಕ್ಷೇತ್ರ ಸಜ್ಜಾಗುತ್ತಿದೆ.
ಗದ್ದುಗೆ ದರ್ಶನಕ್ಕೂ ವಿಶೇಷ ವ್ಯವಸ್ಥೆ
ಶ್ರೀಗಳು ಲಿಂಗೈಕ್ಯರಾಗಿರುವ ಗದ್ದುಗೆ ಮಂದಿರದಲ್ಲಿ ಗದ್ದುಗೆ ದರ್ಶನ ಮಾಡಲು ಬರುವ ಭಕ್ತಾದಿಗಳಿಗೆ ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಮಾಡಿದ ನಂತರ ಭಕ್ತಾದಿಗಳು ಸರತಿ ಸಾಲಿನಲ್ಲಿ ತೆರಳಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
8 ಕಡೆ ದಾಸೋಹ ವ್ಯವಸ್ಥೆ
ಏ.1 ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರಿಗಾಗಿ ಬೆಳಗ್ಗೆ ಮತ್ತು ಮಧ್ಯಾಹ್ನದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರೀಕ್ಷೇತ್ರದ ಆವರಣದಲ್ಲಿ 8 ಕಡೆ ನಿರ್ಮಿಸಲ್ಪಡುವ ಪ್ರಸಾದ ನಿಲಯಗಳಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆಗೂ ಭರದ ಸಿದ್ಧತೆ ನಡೆದಿದೆ, ಭಕ್ತಾದಿಗಳು ಪ್ರಸಾದ ಸೇವಿಸಲು ಟೇಬಲ್ ಮತ್ತು ಕುರ್ಚಿ ವ್ಯವಸ್ಥೆ ಮಾಡಲಾಗುತ್ತಿದೆ.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ 2 ಕೊಪ್ಪಲು, ಪ್ರಾರ್ಥನಾ ಮಂದಿರದಲ್ಲಿ 1, ಡಾ.ಶಿವಕುಮಾರ ಸ್ವಾಮೀಜಿ ದಾಸೋಹ ಮಂಟಪದಲ್ಲಿ 1, ಲಿಂಗಾಯತರ ಕೊಪ್ಪಲು 1, ಭಕ್ತಾದಿಗಳಿಗೆ ಊಟ ಬಡಿಸುವ ಕೊಪ್ಪಲು, ಸಾದರ ಕೊಪ್ಪಲು, ಮಠದ ಸಮುದಾಯದ ಭವನ, ಅತಿಥಿ ಗೃಹಗಳು ಸೇರಿದಂತೆ ಸುಮಾರು 8 ಕಡೆ ದಾಸೋಹಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.
ಈಗಾಗಲೇ ಕಳೆದ ನಾಲ್ಕೈದು ದಿನಗಳ ನೂರಾರು ಬಾಣಸಿಗರು ಬೂಂದಿ, ಮಾಲದಿ ಸೇರಿದಂತೆ ಸಿಹಿ ಖಾದ್ಯ ಹಾಗೂ ಬಗೆ ಬಗೆಯ ಖಾದ್ಯಗಳ ತಯಾರಿಯಲ್ಲಿ ತೊಡಗಿದ್ದಾರೆ.
ಏ.1 ರಂದು ಉಪ್ಪಿನಕಾಯಿ ಕೋಸಂಬರಿ, ಪಾಯಸ, ಬೂಂದಿ, ಚಿತ್ರಾನ್ನ, ಮಜ್ಜಿಗೆ ಅನ್ನ, ಅನ್ನ ಸಾಂಬರ್, ಕೇಸರಿ ಬಾತ್, ಖಾರಬಾತ್, ಖಾರ ಬೂಂದಿ ಸೇರಿದಂತೆ ವಿಶೇಷ ದಾಸೋಹ ವ್ಯವಸ್ಥೆ ಸಹ ಇರಲಿದೆ ಎಂದು ಶ್ರೀಮಠದ ಮೂಲಗಳು ಹೇಳಿವೆ.

Get real time updates directly on you device, subscribe now.

Comments are closed.

error: Content is protected !!