ಹಿರೇಮಠ ಶ್ರೀಗಳ 61ನೇ ಜನ್ಮವರ್ಧಂತಿ ಆಚರಣೆ

110

Get real time updates directly on you device, subscribe now.

ತುಮಕೂರು: ನಗರದ ಚಿಕ್ಕಪೇಟೆಯಲ್ಲಿರುವ ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಸಾರ್ಥಕ 60 ವಸಂತ ಪೂರೈಸಿ 61ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡಿದ್ದು, ಭಕ್ತವೃಂದ ಶ್ರೀಗಳ 61ನೇ ಜನ್ಮವರ್ಧಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಭಕ್ತಿ ಸಮರ್ಪಣೆ ಮಾಡಿದರು.

ಇಲ್ಲಿನ ಚಿಕ್ಕಪೇಟೆಯಲ್ಲಿರುವ ಹಿರೇಮಠದಲ್ಲಿ ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿದವು.
ಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಮುಂಜಾನೆಯೇ ದೇವರ ಪೂಜೆ ಮುಗಿಸಿ ಶ್ರೀಮಠಕ್ಕೆ ಬಂದ ಭಕ್ತಾದಿಗಳನ್ನು ಆಶೀರ್ವದಿಸಿ ಹಿತವಚನ ನೀಡಿದರು.
ಹಿರೇಮಠಕ್ಕೆ ಬೆಳಗ್ಗೆಯಿಂದ ಭಕ್ತಾದಿಗಳ ದಂಡು ಹರಿದು ಬಂದಿದ್ದು, ಶ್ರೀಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
ಶಾಸಕ ಜ್ಯೋತಿಗಣೇಶ್, ಟಿ.ಬಿ. ಶೇಖರ್, ಚಂದ್ರಮೌಳಿ, ಬಸವರಾಜ ಹಿರೇಮಠ್, ಮೇಯರ್ ಬಿ.ಜಿ.ಕೃಷ್ಣಪ್ಪ, ಕೊಂಡವಾಡಿ ಚಂದ್ರಶೇಖರ್, ಮಹಾನಗರ ಪಾಲಿಕೆ ಸದಸ್ಯರಾದ ದೀಪಶ್ರೀ ಮಹೇಶ್ಬಾಬು, ಮಹೇಶ್ ಬಾಬು, ಚಿದಾನಂದ, ಸಿ.ವಿ.ಮಹದೇವಯ್ಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಿರೇಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಹುಟ್ಟುಹಬ್ಬದ ಶುಭಕೋರಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಭಕ್ತರನ್ನು ಉದ್ಧೇಶಿಸಿ ಮಾತನಾಡಿದ ಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, 60 ವರ್ಷ ಪೂರೈಸಿ 61ನ ಸಂವತ್ಸಕ್ಕೆ ಪಾದಾರ್ಪಣೆ ಮಾಡಿದ್ದೆನೆ, ಇಂದಿಗೆ 60 ವರ್ಷದ ಸುದೀರ್ಘ ಜೀವನದ ಯಾತ್ರೆ ಮುಗಿದಿದೆ, ನನ್ನ 60 ವರ್ಷ ಜೀವನದಲ್ಲಿ ಸಾಧ್ಯವಾದಷ್ಟು ಯಾರಿಗೂ ನೋವಾಗದಂತೆ ಬದುಕು ನಡೆಸಿದ್ದೇನೆ ಅಂದುಕೊಂಡಿದ್ದೇನೆ ಎಂದರು.
ಮನುಷ್ಯನಿಗೆ 60 ವರ್ಷ ವಯಸ್ಸಾದ ಮೇಲೆ ಇನ್ನು ಮುಂದೆ ಸಿಗುವ ಆರೋಗ್ಯ, ಅಧಿಕಾರ ಏನೇ ಸಿಕ್ಕಿದರೂ ಅದೆಲ್ಲಾ ಬೋನಸ್ ಎಂದುಕೊಳ್ಳಬೇಕು, ಭಗವಂತನ ಕೃಪೆಯಿಂದ, ಜನರ ಶುಭಾ ಹಾರೈಕೆಯಿಂದ ಮುಂದಿನ ಬದುಕನ್ನು ಜನ ಕಲ್ಯಾಣ, ಭಕ್ತರ ಕಲ್ಯಾಣಕ್ಕಾಗಿ ಮುಡುಪಾಗಿಡುತ್ತೇನೆ ಎಂದರು.
ಸರಸ್ವತಿ ಸೇವೆ ಮಾಡುತ್ತಾ ಬರವಣಿಗೆ ಮುಂದುವರೆಸುವುದಾಗಿ ತಿಳಿಸಿದ ಶ್ರೀಗಳು, ಭಾರತ ಸುಂದರವಾದ ದೇಶ, ನಾವೆಲ್ಲಾ ಬಹಳ ಪ್ರೀತಿ ವಿಶ್ವಾಸದಿಂದ ಬಾಳ್ವೆ ನಡೆಸಬೇಕಾಗಿದೆ, ಸೌಹಾರ್ದತೆ ಮತ್ತು ಪ್ರೀತಿ, ನೆಮ್ಮದಿಯಿಂದ ಬಾಳಬೇಕಾಗಿದೆ, ಈ ನಿಟ್ಟಿನಲ್ಲಿ ಭಗವಂತ ನಮ್ಮೆಲ್ಲರಿಗೂ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಶ್ರೀಗಳು ತಮ್ಮ ಮೊನಚಾದ ಬರವಣಿಗೆಯಿಂದ ಇಡೀ ಸಮಾಜವನ್ನು ಎಚ್ಚರಿಸುತ್ತಿದ್ದಾರೆ. ಶ್ರೀಗಳು ನೀಡುವ ಸಂದೇಶದ ಬರವಣಿಗೆ ಮನುಕುಲ ಉದ್ಧಾರದ ಸಂಕೇತವಾಗಿದೆ. ಇದು ಹೀಗೆ ಮುಂದುವರೆಯಲಿ, ಶ್ರೀಗಳ ಮಾರ್ಗದರ್ಶನ ನಮ್ಮೆಲ್ಲರಿಗೂ ಅತ್ಯಗತ್ಯ ಎಂದರು.
ಪ್ರತಿಯೊಬ್ಬರಿಗೂ ಆರೋಗ್ಯ ಬಹುಮುಖ್ಯ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಜಾಗತಿ ಮೂಡಿಸುವ ಕೆಲಸಗಳನ್ನು ಮಠಮಾನ್ಯಗಳು ನಿರಂತರವಾಗಿ ಮಾಡುತ್ತಾ ಸಾಗಿವೆ, ಸಮಾಜವನ್ನು ತಿದ್ದಿ ತೀಡುವ ಕೆಲಸಗಳು ಸಹ ಮಠಾಧೀಶರಿಂದ ನಡೆಯುತ್ತಿದೆ, ನಮಗೆ ಮಠಗಳು ಮತ್ತು ಮಠಾಧೀಶರ ಮಾರ್ಗದರ್ಶನ ಬದುಕಿನುದ್ದಕ್ಕೂ ಅತ್ಯವಶ್ಯವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಕೊಂಡವಾಡಿ ಚಂದ್ರಶೇಖರ್ ಅವರು ತಮ್ಮ 54ನೇ ಹುಟ್ಟುಹಬ್ಬವನ್ನು ಶ್ರೀಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದು ಆಚರಿಸಿಕೊಂಡಿದ್ದು ಸಹ ವಿಶೇಷವಾಗಿತ್ತು.

Get real time updates directly on you device, subscribe now.

Comments are closed.

error: Content is protected !!