ಕುಣಿಗಲ್: ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿಯೊಬ್ಬ ತನ್ನ ಜಮೀನಿನಲ್ಲಿದ್ದ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಿಮರಿಪಾಳ್ಯದಲ್ಲಿ ನಡೆದಿದೆ.
ಅಕ್ಕಿಮರಿಪಾಳ್ಯದ ಶಂಕರಪ್ಪ (48) ನೇಣಿಗೆ ಶರಣಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ, ಈತ ಕಳೆದ ಆರು ತಿಂಗಳ ಹಿಂದೆ ತನಗಿಂತಲೂ ಕಿರಿಯ ವಯಸಿನ ಯುವತಿಯೊಂದಿಗೆ ವಿವಾಹವಾಗುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಕಳೆದ ಕೆಲ ದಿನಗಳಿಂದಲೂ ಮೃತನ ತಾಯಿ ಹಾಗೂ ಮೃತನ ಪತ್ನಿಯ ನಡುವೆ ಜಗಳ ನಡೆಯುತ್ತಿದ್ದು, ಇದರಿಂದ ಬೇಸತ್ತ ಮೃತನು ಇಬ್ಬರಿಗೂ ಬುದ್ಧಿ ಹೇಳಲಾಗದೆ ನೊಂದಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ ದೇವಾಲಯಕ್ಕೆ ಹೋಗಿ ಬಂದಿದ್ದ ಶಂಕರಪ್ಪ, ಮನೆಗೆ ಬಂದಾಗ ಅತ್ತೆ, ಸೊಸೆಯ ನಡುವೆ ಕ್ಲುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿದ್ದು ಮನೆಯಿಂದ ಹೊರ ಹೋಗಿದ್ದರು. ಮಂಗಳವಾರ ಬೆಳಗ್ಗೆ ಅವರದೆ ಜಮೀನಿನಲ್ಲಿನ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪಕ್ಕದ ಜಮೀನಿನವರು ನೋಡಿ ಮನೆಗೆ ವಿಷಯ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಮೃತನ ತಾಯಿ ರಂಗಮ್ಮ, ತನ್ನ ಸೊಸೆ ದಿನಾಲೂ ಜಮೀನು ಮಾರಿ ಬೆಂಗಳೂರಿಗೆ ಹೋಗೋಣ ಎಂದು ಪೀಡಿಸುತ್ತಿದ್ದ ಕಾರಣ ಮಗ ನೇಣಿಗೆ ಶರಣಾಗಿದ್ದಾನೆ, ಮಗನ ಸಾವಿಗೆ ಸೊಸೆ ಕಾರಣ ಎಂದು ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಮದುವೆ ಮೂಲಕ ಗಮನ ಸೆಳೆದಿದ್ದ ಶಂಕರಪ್ಪ ಸೂಸೈಡ್
Get real time updates directly on you device, subscribe now.
Prev Post
Next Post
Comments are closed.