ಪುರಸಭೆಯ ವಾರ್ಷಿಕ ಸುಂಕ ಹರಾಜು ಪ್ರಕ್ರಿಯೆ

110

Get real time updates directly on you device, subscribe now.

ಕುಣಿಗಲ್: ಕೊವಿಡ್ ಅವಧಿಯಲ್ಲಿನ ಸುಂಕ ಪಾವತಿಯ ಜಟಾಪಟಿಯ ನಡುವೆ 2022- 23ನೇ ಸಾಲಿಗೆ ಪುರಸಭೆ ವಾರ್ಷಿಕ ಸುಂಕ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು.
2022- 23ನೇ ಸಾಲಿಗೆ ಪುರಸ`É ಸಂತೆ ಮೈದಾನ, ಬಸ್ನಿಲ್ದಾಣ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳುವ ಕಾರಣ ಕೇವಲ ಒಂದು ತಿಂಗಳಿಗೆ ಹಾಗೂ ಬಸ್ನಿಲ್ದಾಣದ ಸಾರ್ವಜನಿಕ ಶೌಚಾಲಯ ಸುಂಕ ವಸೂಲಾತಿ ವಾರ್ಷಿಕ ಹರಾಜು ಕಾರ್ಯ ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ತಬಸ್ಸುಮ್ ಸದಾಖತ್, ಪ್ರಭಾರ ಮುಖ್ಯಾಧಿಕಾರಿ ದೇವರಾಜು ಹಾಗೂ ಹಾಜರಿದ್ದ ಪುರಸಭೆ ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಹರಾಜು ಪ್ರಕ್ರಿಯೆಗು ಮುನ್ನ 2021- 22ನೇ ಸಾಲಿಗೆ ಪುರಸಭೆ ಬಸ್ನಿಲ್ದಾಣ ಹಾಗೂ ಶೌಚಾಲಯ ನಿರ್ವಹಣೆ ವಾರ್ಷಿಕ ಸುಂಕ ವಸೂಲಾತಿ ಹರಾಜು ನಡೆಸಲಾಗಿದ್ದು ಕೊವಿಡ್ ನಿಯಮಾವಳಿ ಪ್ರಕಾರ ಹರಾಜು ಗುತ್ತಿಗೆ ಪಡೆದವರು ಪುರಸಭೆಗೆ ನಿಯಮಾನುಸಾರ ಗುತ್ತಿಗೆ ಹಣ ನೀಡಲಾಗದೆ ಪುರಸಭೆ ಆದಾಯಕ್ಕೂ ಖೊತಾ ಆಗಿತ್ತು, ಗುತ್ತಿಗೆದಾರರು ತಗಾದೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಕಳೆದ ಸಾಲಿನ ಸುಂಕ ವಸೂಲಾತಿ ಗುತ್ತಿಗೆ ಪಡೆದಿದ್ದವರಿಗೆ 60 ದಿನಗಳ ಅವಧಿಯ ಸುಂಕ ಕಡಿತಗೊಳಿಸಿ ಮಿಕ್ಕ ಹಣ ಪಾವತಿಸುವ ಬಗ್ಗೆ ಸೂಚನೆ ನೀಡಲಾಗಿದೆ, ಅವರು ಕಟ್ಟದೆ ಇದ್ದಲ್ಲಿ ಪುರಸ`É ನಿಯಮನುಸಾರ ಕ್ರಮ ಕೈಗೊಳ್ಳದೆ ಎಂದರು.
ಸುಂಕ ಹರಾಜು ಪ್ರಕಿಯೆ ನಡೆದು, ಸಂತೇಮೈದಾನ ಸುಂಕ 9.11ಲಕ್ಷಕ್ಕೆ, ಬಸ್ನಿಲ್ದಾಣ ಶೌಚಾಲಯಸುಂಕ 5.12 ಲಕ್ಷಕ್ಕೆ ಹಾಗೂ ಒಂದು ತಿಂಗಳ ಮಟ್ಟಿಗೆ ಬಸ್ನಿಲ್ದಾಣ ಸುಂಕ 47 ಸಾವಿರ ರೂ.ಗಳಿಗೆ ಹರಾಜಾಯಿತು. ಸದರಿ ಸುಂಕದ ಮೊತ್ತವು ಕಳೆದ ಸಾಲಿನ ಒಟ್ಟಾರೆ ಸುಂಕಕ್ಕಿಂತ ಕಡಿಮೆಯಾಗಿರುವುದರಿಂದ ಕೆಲವು ಸದಸ್ಯರ ಆಕ್ಷೇಪಕ್ಕೆ ಕಾರಣವಾಯಿತು. ಈ ಮಧ್ಯೆಯ ಬಹುತೇಕ ಸದಸ್ಯರು ಕೊವಿಡ್ನಿಂದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಕಾರಣ ಒಂದು ವರ್ಷದ ಮಟ್ಟಿಗೆ ಪುರಸಭೆ ಯಾವುದೇ ಸುಂಕ ವಸೂಲು ಮಾಡದಿರುವುದೆ ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯರ ಸಭೆ ಕರೆದು ಒಮ್ಮತದ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!