ಪಿನ್ಹೋಲ್ ಎಂಟ್ರಿ ಮೂಲಕ ಗರ್ಭ ಕೋಶ ಚಿಕಿತ್ಸೆ

181

Get real time updates directly on you device, subscribe now.

ತುಮಕೂರು: ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ನಲ್ಲಿ ಸಾಮಾನ್ಯ ರೋಗಗಳಿಗೆ ನಿಖರವಾದ ಚಿಕಿತ್ಸೆಗಾಗಿ ಅತ್ಯಂತ ಸುಲ`À ರೇಡಿಯೊಲಜಿ ಪ್ರಕ್ರಿಯೆ ಪರಿಚಯಿಸಿದ ಗರ್ಭಾಶಯದ ಫೈಬ್ರಾಯ್ಡ್ಗಳು, ಉಬ್ಬಿರುವ ರಕ್ತನಾಳಗಳು, ಕ್ಯಾನ್ಸರ್ ಪ್ರಾಸ್ಟೇಟ್ ಹಿಗ್ಗುವಿಕೆ, ಥೈರಾಯ್ಡ್ ಗಂಟು, ಮೆದುಳಿನ ಪಾರ್ಶ್ವವಾಯು, ಲಿವರ್ ಸಿರೋಸಿಸ್ ಮತ್ತು ಇನ್ನೂ ಹಲವಾರು ರೋಗಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೇ ಗುಣಪಡಿಸಬಹುದು ಎಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ನ ಇಂಟರ್ವೆನ್ಷನಲ್ ರೇಡಿಯಾಲಾಜಿಸ್ಟ್ ವಿಭಾಗದ ಕನ್ಸಲ್ಟೆಂಟ್ ಹೆಡ್ ಡಾ.ರೋಹಿತ್ ಮಧುಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು, ಗರ್ಭಾಶಯವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕದೇ ಯೂಟೆರಿನ್ ಫೈಬ್ರಾಯ್ಡ್ಸ್ ಎಂಬೋಲೈಸೇಶನ್ ನೊಂದಿಗೆ ಯೂಟೆರಿನ್ ಫೈಬ್ರೋಯ್ಡ್ಸ್ ಅನ್ನು ಚಿಕಿತ್ಸೆಗೆ ಒಳಪಡಿಸಬಹುದಾಗಿದೆ. ಅಲ್ಲಿ ಫೈಬ್ರಾಯ್ಡ್ಗೆ ರಕ್ತ ಪೂರೈಕೆಯು ಸ್ಥಗಿತಗೊಳ್ಳುತ್ತದೆ ಮತ್ತು ಸಾಮಾನ್ಯ ಗರ್ಭಾಶಯದ ಕಾರ್ಯವನ್ನು ಉಳಿಸಿಕೊಂಡು ಫೈಬ್ರಾಯ್ಡ್ ಕುಗ್ಗುತ್ತದೆ ಹಾಗೂ ಅದರ ರೋಗ ಲಕ್ಷಣ ತೊಡೆದು ಹಾಕುತ್ತದೆ, ಅತಿಯಾದ ಮುಟ್ಟಿನ ರಕ್ತಸ್ರಾವ ಆಗಾಗ್ಗೆ ಮೂತ್ರ ವಿಸರ್ಜನೆ, ತೀವ್ರ ಮುಟ್ಟಿನ ನೋವು ಮತ್ತು ಇತರ ಸಮಸ್ಯೆ ಕಾಣಿಸಿಕೊಳ್ಳುತ್ತವೆ, ಹತ್ತು ಮಹಿಳೆಯರಲ್ಲಿ ಮೂವರು ಗರ್ಭಾಶಯದ ಫೈಬ್ರಾಯ್ಡ್ಗಳಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಯುಎಫ್ಇ ಅತ್ಯಂತ ಪ್ರಯೋಜನಕಾರಿ ಚಿಕಿತ್ಸೆಯಾಗಿದೆ ಎಂದು ಹೇಳಿದರು.
ವೆರಿಕೋಸ್ ವೇಯ್ನ್: ವೆರಿಕೋಸ್ ವೇಯ್ನ್ ಎಂದರೆ ಉಬ್ಬಿರುವ ರಕ್ತನಾಳದಲ್ಲಿ ಕಾಲಿನ ಅಸಹಜ ರಕ್ತನಾಳಗಳನ್ನು ಸೂಪರ್ ಗ್ಲೂ, ಲೇಸರ್ ಬಳಸಿ ಅತ್ಯಾಧುನಿಕ ವಿಧಾನಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ, ಸ್ಥಳೀಯ ಅರವಳಿಕೆ ಅಡಿಯಲ್ಲಿ ಮತ್ತು ಸಂಪೂರ್ಣ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾರ್ಗದರ್ಶನದಲ್ಲಿ ಕಾರ್ಯವಿಧಾನದ ನಂತರ ತಕ್ಷಣವೇ ಕೆಲಸ ಪುನರಾರಂಭಿಸಬಹುದು ಎಂದರು.
ದೇಹದಲ್ಲಿ ಪ್ರಮುಖವಾಗಿ ಲಿವರ್, ಮೂತ್ರಪಿಂಡದಲ್ಲಿರುವ ಗಡ್ಡೆಗಳಿಗೆ ಸೂಜಿಯನ್ನು ಹಾಕಿ ಸುಡುವ ಮೂಲಕ ಚಿಕಿತ್ಸೆಯನ್ನು ನೀಡಬಹುದಾಗಿದೆ. ಈ ಟ್ಯೂಮರ್ಗೆ ರಕ್ತ ಪೂರೈಕೆಯನ್ನು ಸ್ಥಗಿತಗೊಳಿಸಬಹುದು ಎಂದು ತಿಳಿಸಿದರು.
ಬ್ರೈನ್ ಸ್ಟ್ರೋಕ್ ಯಾವಾಗಲೂ ಪ್ರಮುಖ ಆರೋಗ್ಯದ ಕಾಳಜಿಯಾಗಿದೆ. ಮೆದುಳಿನಲ್ಲಿರುವ ನಿರ್ಬಂಧಿಸಲಾದ ರಕ್ತನಾಳಗಳನ್ನು ತೆರೆಯಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದು ಹಾಕಿ ಸಾಮಾನ್ಯ ರಕ್ತದ ಹರಿವನ್ನು ಸ್ಥಾಪಿಸಲು ಪ್ರಯತ್ನಿಸಬಹುದಾಗಿದೆ. ಇದು ರೋಗಿಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ. ರೋಗಿಯು ಬಹುಬೇಗನೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರೆ ಜೀವಮಾನರೋಗದಿಂದ ನರಳುವುದು ತಪ್ಪುತ್ತದೆ ಎಂದರು.
ವಿಸ್ತರಣೆ ಹೊಂದಿದ ಅಥವಾ ಹಿಗ್ಗಿದ ಪ್ರಾಸ್ಪೇಟ್ ಗ್ರಂಥಿ (ಬಿಪಿಎಚ್) ಹೊಂದಿರುವ ಪುರುಷರಲ್ಲಿ ಮೂತ್ರ ವಿಸರ್ಜನೆಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಅಂದರೆ ಪದೇಪದೆ ಮೂತ್ರವಿಸರ್ಜನೆ ಮಾಡುವುದು, ಕಡಿಮೆ ಮೂತ್ರ ವಿಸರ್ಜನೆ ಮತ್ತು ರಾತ್ರಿಯಲ್ಲಿ ಪದೇ ಪದೇ ನಿದ್ದೆಯಿಂದ ಎಚ್ಚರವಾಗುವುದು. ಇದಕ್ಕೆ ಪ್ರಾಸ್ಟೇಟ್ ಆರ್ಟರಿಎಂಬೋಲೈಸೇಷನ್ (ಪಿಎಐ)ಯೊಂದಿಗೆ ಕ್ಯಾತಿಟರ್ ಮಾಡದೆಯೇ ದಿನದ ಆರೈಕೆಯ ಆ`Áರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲಿ ಗ್ರಂಥಿಗೆರಕ್ತ ಪೂರೈಕೆಯು ಕಡಿಮೆಯಾಗುತ್ತದೆ. ಮತ್ತು ಗ್ರಂಥಿಯ ಗಾತ್ರವನ್ನು ಕುಗ್ಗಿಸುತ್ತದೆ. ಈ ಮೂಲಕ ರೋಗಲಕ್ಷಣವನ್ನು ಮುಕ್ತಗೊಳಿಸುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ವಿಭಾಗದ ಮಂಜುನಾಥ್, ನವೀನ್ ಕುಮಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!