ಕೊರಟಗೆರೆ: ಕೊರಟಗೆರೆ ಪಟ್ಟಣ ಪಂಚಾಯಿತಿಯ ೨೦೨೨-೨೩ ನೇ ಸಾಲಿನ ೧೭,೪೯,೬೩,೮೧೪ ಕೋಟಿ ಮೊತ್ತದ ಆಯವ್ಯಯವನ್ನು ಅಧ್ಯಕ್ಷೆ ಕಾವ್ಯಶ್ರೀ ರಮೇಶ್ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್ ಮಂಡಿಸಿದರು.
ಬುಧವಾರ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ೧೭,೪೯,೬೩,೮೧೪ ಕೋಟಿ ರೂ. ಗಳ ಆದಾಯ ನಿರೀಕ್ಷೆ ೧೭,೪೭,೫೮,೦೯೯ ಕೋಟಿ ಖರ್ಚು ಸೇರಿ ಒಟ್ಟು ೨,೦೫,೭೧೫ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು. ಪಟ್ಟಣ ಪಂಚಾಯತಿ ಆದಾಯದಲ್ಲಿ ಕಂದಾಯ ನಿರೀಕ್ಷೆ ೧,೦೬,೨೩,೦೦೦ ಕೋಟಿ ಬಿಟ್ಟರೆ ಉಳಿದ ೧೨ ಮೂಲ ಆದಾಯ ೧,೧೦,೪೦,೮೧೪ ಕೋಟಿ ಸೇರಿ ೨,೧೬,೬೩,೮೧೪ ಕೋಟಿ ಪಪಂ ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದ ಅನುದಾನ ನಿರೀಕ್ಷೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಕೋರಿಕೆಯ ಸರ್ಕಾರದ ಎಸ್ಎಷ್ಸಿ, ಅನುದಾನ ೬,೦೦,೦೦,೦೦೦ ಕೋಟಿ ಸೇರಿ ಸರ್ಕಾರದ ನಿರೀಕ್ಷೆಯ ವಿವಿಧ ೯ ಮೂಲಗಳ ಅನುದಾನ ೯,೩೩,೦೦,೦೦೦ ಕೋಟಿ ಒಟ್ಟು ೧೫,೩೩,೦೦,೦೦೦ ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ, ಖರ್ಚಿನಲ್ಲಿ ೪,೨೦,೦೦,೦೦೦ ಕೋಟಿ ಬೀದಿ ದೀಪ, ನೀರು ಸರಬರಾಜು ವಿದ್ಯುಚ್ಛಕ್ತಿ ಬಿಲ್ ೪,೨೦,೦೦,೦೦೦ ಕೋಟಿ ಹೆಚ್ಚಿನದಾಗಿದೆ. ಈ ಬಾರಿ ಬಜೆಟ್ನಲ್ಲಿ ೨,೫೦,೬೪,೦೦೦ ಕೋಟಿ ರಸ್ತೆ ಫುಟ್ಪಾತ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಉಳಿದ ೧೫ ಯೋಜನೆ ಖರ್ಚು ೧೪,೯೨,೭೪,೦೯೯ ನಿರೀಕ್ಷೆ ಮಾಡಲಾಗಿದೆ, ಪಟ್ಟಣದ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಲಾಗಿದೆ ಎಂದರು.
ಬಜೆಟ್ ನಂತರ ಸದಸ್ಯ ಎ.ಡಿ.ಬಲರಾಮಯ್ಯ ಪಟ್ಟಣ ಪಂಚಾಯತಿಯಲ್ಲಿ ಅಂಗಡಿ ಮಳಿಗೆಗಳ ಆದಾಯ ಕಡಿಮೆಯಾತ್ತಿದ್ದು ಕೂಡಲೆ ಹೆಚ್ಚು ಅಂಗಡಿ ಮಾಳಿಗೆಗಳ ನಿರ್ಮಾಣಕ್ಕೆ ಮತ್ತು ಬಾಕಿ ಇರುವ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಆಯವ್ಯಯ ಸಭೆಯಲ್ಲಿ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಸದಸ್ಯರಾದ ಪುಟ್ಟನರಸಯ್ಯ, ಕೆ.ಆರ್.ಓಬಳರಾಜು, ಕೆ.ಎನ್.ಲಕ್ಷೀನಾರಾಯಣ, ನಾಗರಾಜು, ಪ್ರದೀಪ್ ಕುಮಾರ್, ನಂದೀಶ್, ಹೆಮಲತಾ, ಮಂಜುಳ, ಅನಿತಾ, ನಾಮಿನಿ ಸದಸ್ಯ ಗೋವಿಂದರಾಜು, ರಂಗನಾಥ್, ಆರ್ಐ ವೀರಭದ್ರಚಾರ್, ಸಿಬ್ಬಂದಿ ಮಹೇಶ್ವರಿ, ಮಹೇಶ್, ನಾಗರತ್ನಮ್ಮ, ಶೈಲೇಂದ್ರ, ಜಗದೀಶ್, ಸಾವಿತ್ರಮ್ಮ, ನರಸಿಂಹಮೂರ್ತಿ ಇತರರು ಹಾಜರಿದ್ದರು.
ಕೊರಟಗೆರೆ ಪಟ್ಟಣ ಪಂಚಾಯಿತಿ ಬಜೆಟ್ ಮಂಡನೆ
Get real time updates directly on you device, subscribe now.
Comments are closed.