ಯುಗಾದಿಯಂದು ಹುತ್ತು ಸಿದ್ಧೇಶ್ವರ ಜಾತ್ರಾ ಮಹೋತ್ಸವ

147

Get real time updates directly on you device, subscribe now.

ತುರುವೇಕೆರೆ: ಏಪ್ರಿಲ್ ೨ ರ ಯುಗಾದಿ ಹಬ್ಬದಂದು ತಾಲೂಕಿನ ಮಾದಿಹಳ್ಳಿಯ ಶ್ರೀಹುತ್ತುಸಿದ್ಧೇಶ್ವರ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿಯ ಕೃಷ್ಣಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಜಾತ್ರಾ ಮಹೋತ್ಸವವನ್ನು ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬರುವ ನಿರೀಕ್ಷೆ ಇದೆ, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲಿಸಲಾಗಿದೆ ಎಂದರು.
ಯುಗಾದಿಯ ಬೆಳಗ್ಗೆ ಗಣಪತಿ ಸ್ಥಾಪನೆ, ಜ್ಯೋತಿ ಸ್ಥಾಪನೆ, ಧ್ವಜಾರೋಹಣ ನಡೆಯಲಿದೆ, ಮಹಾಮಂಗಳಾರತಿಯ ನಂತರ ಮುಡಿ ಸೇವೆ ಆರಂಭವಾಗುವುದು, ಸಾಯಂಕಾಲ ಲಿಂಗದ ವೀರರ ಕುಣಿತ, ಸೋಮನ ಕುಣಿತ, ಏರ್ಪಡಿಸಲಾಗಿದೆ. ಮಾದಿಹಳ್ಳಿ, ಮಾದಿಹಳ್ಳಿ ಪಾಳ್ಯ, ಸುಂಕಲಾಪುರ ಸೇರಿದಂತೆ ವಿವಿಧ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುವ ಹುತ್ತು ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಭಾಗವಹಿಸಬೇಕೆಂದು ಗುಡಿಗೌಡರಾದ ಹುಚ್ಚೇಗೌಡ, ಮುಖಂಡರಾದ ಕಾಂತರಾಜ್, ಮೂಡಲಪ್ಪ, ನಂಜುಂಡಪ್ಪ, ಶ್ರೀನಿವಾಸ್, ಸಿದ್ಧೇಗೌಡ, ಮೋಹನ್ ಕುಮಾರ್ ಮತ್ತು ಬ್ಯಾಂಕ್ ಮೂಡಲಗಿರಯ್ಯ ವಿನಂತಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!