ಕುಣಿಗಲ್ ನಲ್ಲಿ ಕುರಿ, ಮೇಕೆಗೆ ಸಖತ್ ಬೇಡಿಕೆ

ಯುಗಾದಿ ಹೊಸ ತೊಡಕಿಗೆ ವಿಶೇಷ ಮಾಂಸಾಹಾರ

182

Get real time updates directly on you device, subscribe now.

ಕುಣಿಗಲ್: ಯುಗಾದಿ ಹಬ್ಬದ ಮರುದಿನ ಬರುವ ಹಬ್ಬ ವರ್ಷದ ತೊಡಕು ಈ ಬಾರಿ ಭಾನುವಾರ ಬಂದಿದ್ದು, ವರ್ಷದ ತೊಡಕಿನ ಹಬ್ಬ ವಿಶೇಷ ಮಾಂಸಾಹಾರಕ್ಕೆ ಬುಧುವಾರ ಕುರಿ, ಮೇಕೆ ಸಂತೆ ಆರ್ಎಂಸಿ ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು ನಡೆಯಿತು.
ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕುರಿ, ಮೇಕೆ ಮಾಲೀಕರು ಮಾರಾಟ ಮಾಡಲು ಆಗಮಿಸಿದರು, ಹಬ್ಬದ ಆಚರಣೆ ಖರೀದಿಗೆ ಖರೀದಿದಾರರು ಸಹ ಅತ್ಯುತ್ಸಾಹದಿಂದ ಆಗಮಿಸಿದ್ದರು, ಹಬ್ಬಕ್ಕೆ ಮಾಂಸದ ಚೀಟಿ ವ್ಯವಸ್ಥೆ ಮಾಡಿರುವವರು, ಗುಡ್ಡೆಬಾಡು ವ್ಯವಸ್ಥೆ ಮಾಡುವವರು ಸಹ ಖರೀದಿಯಲ್ಲಿ ತೊಡಗಿದ್ದರು, ಹತ್ತರಿಂದ ಹದಿನೈದು ಸಾವಿರ ವಿವಿಧ ಜಾತಿಯ ಕುರಿ, ಮೇಕೆ ಮಾರುಕಟ್ಟೆಗೆ ಆಗಮಿಸಿದ್ದವು, ಇವುಗಳ ಜೊತೆಯಲ್ಲಿ ಅಲ್ಪ ಪ್ರಮಾಣದ ನಾಟಿಕೋಳಿ ಸಹ ಮಾರಾಟಕ್ಕಿದ್ದವು.
ಕನಿಷ್ಟ ಹನ್ನೆರಡು ಕೆಜಿ ಮೇಲ್ಪಟ್ಟ ಮರಿಗಳಿಗೆ ಬೇಡಿಕೆ ಹೆಚ್ಚಿದ್ದು, ಕುರಿ, ಮೇಕೆಗಿಂತ ಓತಗೆ ಹೆಚ್ಚು ಬೇಡಿಕೆ ಇದ್ದು ಕಳೆದ ಸಾಲಿಗಿಂತ ಈಬಾರಿ ಹೆಚ್ಚು ದರಕ್ಕೆ ಮಾರಾಟವಾಗಿದ್ದು ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿತ್ತು, ಆರ್ಎಂಸಿ ಸುಂಕ ಎಂದು ರೈತರಿಂದ ಮನಬಂದಂತೆ ಶುಲ್ಕ ವಸೂಲು ಮಾಡಲೆತ್ನಿಸಿದ ವ್ಯಕ್ತಿಯ ಹಿಡಿದ ರೈತರು ಥಳಿಸಲು ಮುಂದಾದಾಗ ಆತ ಕಾಲಿಗೆ ಬುದ್ಧಿ ಹೇಳಿದ.
ರೈತ ಸುನಿಲ್ ಸುಂಕ ಪ್ರಕಟಣೆಯ ಬಗ್ಗೆ ನಿಖರ ಪ್ರಚಾರ ಮಾಡದ ಆರ್ಎಂಸಿ ಕಾರ್ಯದರ್ಶಿಯೊಂದಿಗೆ ವಾಗ್ವಾದ ನಡೆಸಿ ಅಗತ್ಯ ಕ್ರಮಕ್ಕೆ ಆಗ್ರಹಿಸಿದರು. ಕಳೆದ ಎರಡು ವರ್ಷಗಳ ಕೊವಿಡ್ ನೆರಳಿನಿಂದ ಹಬ್ಬಾಚರಣೆ ಮಂಕು ಕವಿದಿದ್ದರೆ ಈ ಬಾರಿ ಬೆಲೆ ಏರಿಕೆಯ ಸಮಸ್ಯೆ ಕಾಡುತ್ತಿದೆ, ಹನ್ನೆರಡು ಕೆಜಿ ತೂಕದ ಮರಿ ಕನಿಷ್ಟ ಒಂಭತ್ತರಿಂದ ಗರಿಷ್ಟ ಹದಿಮೂರು ಸಾವಿರ ಇತ್ತು, ಕಳೆದ ಬಾರಿ ಇದೆ ಮರಿಗಳು ಎಂಟರಿಂದ ಒಂಭತ್ತು ಸಾವಿರಕ್ಕೆ ಮಾರಾಟವಾಗಿದ್ದವು.

Get real time updates directly on you device, subscribe now.

Comments are closed.

error: Content is protected !!