ತುಮಕೂರು: ಗೋಕುಲ ಬಡಾವಣೆಯ ಆಟೋ ಚಾಲಕರು ಸ್ವಯಂ ಪ್ರೇರಿತವಾಗಿ ನೀಡಲು ಹೊರಟಿರುವ ಗರ್ಭೀಣಿಯರು ಮತ್ತು ಅಂಗವಿಕಲರಿಗೆ ಉಚಿತ ಸೇವೆ ನೀಡುವ ಆಟೋಗಳಿಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಚಾಲನೆ ನೀಡಿದರು.
ಗೋಕುಲ ಬಡಾವಣೆಯಲ್ಲಿ ಆಟೋಚಾಲಕರಾಗಿರುವ ಶಿವಕುಮಾರ್ ಮತ್ತು ನಾರಾಯಣ್ ಎಂಬುವವರು ಬಡಾವಣೆಯ ಮುಖಂಡರಾದ ರಘು, ಬ್ಲಾಕ್ ಕಾಂಗ್ರೆಸ್ ೨ರ ಅಧ್ಯಕ್ಷ ಆಟೋ ರಾಜು ಅವರ ಸಹಕಾರದೊಂದಿಗೆ ಬಡಾವಣೆ ಗರ್ಭೀಣಿಯರು ಮತ್ತು ವಿಕಲಚೇತನರಿಗೆ ಉಚಿತ ಸೇವೆ ಒದಗಿಸಲು ಮುಂದಾಗಿದ್ದಾರೆ.
ಗರ್ಭೀಣಿಯರು ಮತ್ತು ಅಂಗವಿಕಲರಿಗೆ ಉಚಿತ ಸೇವೆ ನೀಡುವ ಆಟೋ ರೀಕ್ಷಾ ಸೇವೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಡಾ.ಎಸ್.ರಫಿಕ್ ಅಹಮದ್, ಇಂತಹ ಸೇವೆಗೆ ಆಟೋಚಾಲಕರು ಮುಂದಾಗಿರುವುದು ಶ್ಲಾಘನೀಯ, ಇಂದು ಈ ಸೇವೆ ಆ ಎರಡು ಸಮುದಾಯಗಳಿಗೆ ಸೇವೆ ಅಗತ್ಯವಿದೆ, ಇದೇ ಮಾದರಿಯಲ್ಲಿ ನಗರ ಎಲ್ಲಾ ಬಡಾವಣೆಗಳ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಇಂತಹ ಸೇವೆಗಳಿಗೆ ಮುಂದಾದರೆ, ಗರ್ಭೀಣಿಯರು ಮಾಸಿಕ ಪರಿಶೀಲನೆಗೆ ಸರಾಗವಾಗಿ ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಬರಲು ಅನುಕೂಲವಾಗುತ್ತದೆ.ಅಂಗವಿಕಲರು ಸಹ ದಾರಿಯಲ್ಲಿ ನಿಂತು ಕಾಯುವುದುಉ ತಪ್ಪಲಿದೆ ಎಂದರು.
ಗೋಕುಲ ಬಡಾವಣೆಯ ಕಾಂಗ್ರೆಸ್ ಮುಖಂಡರು ಹಾಗೂ ನಾಗರಿಕರ ಸಹಕಾರದೊಂದಿಗೆ ಆರಂಭವಾಗಿರುವ ಈ ಸೇವೆ ಪಡೆಯಲು ನಾಗರಿಕರು ಸದರಿ ಆಟೋಗಳ ಹಿಂದೆ ದೂರವಾಣಿ ಸಂಖ್ಯೆ ಹಾಕಲಾಗಿದೆ. ನಾರಾಯಣ್ ೯೯೧೬೫೦೭೫೪೧, ಶಿವಕುಮಾರ್ ೯೦೬೦೮೦೯೧೭೧ ಅವರಿಗೆ ಕರೆ ಮಾಡಿ ಉಚಿತ ಸೇವೆ ಪಡೆಯಬಹುದಾಗಿದೆ. ಇಡೀ ನಗರಕ್ಕೆ ಈ ಸೇವೆ ಲಭ್ಯವಾಗಲಿದೆ, ನಾಗರಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಜಿ ಶಾಸಕ ಡಾ.ಎಸ್.ರಫಿಕ್ ಅಹಮದ್ ಮನವಿ ಮಾಡಿದರು.
ಗರ್ಭಿಣಿಯರು, ವಿಶೇಷಚೇತನರಿಗೆ ಉಚಿತ ಆಟೋ ಸೇವೆ
Get real time updates directly on you device, subscribe now.
Prev Post
Comments are closed.