ಕುಣಿಗಲ್: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಲು ಬೈಕ್ ನಲ್ಲಿ ಬರುತ್ತಿದ್ದ ಮೂವರು ವಿದ್ಯಾರ್ಥಿಗಳಿದ್ದ ಬೈಕ್ ಆಯ ತಪ್ಪಿ ಬಿದ್ದ ಕಾರಣ ಓರ್ವ ವಿದ್ಯಾರ್ಥಿ ಮೃತಪಟ್ಟು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ಬೆಳಗ್ಗೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮೃತೂರು ಹೋಬಳಿಯ ಸಣಬಘಟ್ಟದ ಬಾಬುರಾಜೇಂದ್ರ ಪ್ರಸಾದ್ ಫ್ರೌಢಶಾಲೆಯ ವಿದ್ಯಾರ್ಥಿಗಳಾದ ಸಣಬಘಟ್ಟದ ನವೀನ್(೧೬), ಶರತ್(೧೫) ಹಾಗೂ ಹಾಲಗೆರೆಯ ದರ್ಶನ್(೧೫) ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರವಾದ ಅಮೃತೂರಿಗೆ ಬರಲು ನವೀನ್ಮನೆಯಲ್ಲಿದ್ದ ಪಲ್ಸರ್ ಬೈಕ್ ನಲ್ಲಿ ಹೊರಟಿದ್ದರು, ಸಣಬಘಟ್ಟದಿಂದ ಅಮೃತೂರಿಗೆ ಬರುವ ಮಾರ್ಗ ಮಧ್ಯೆದ ಹಂದಲಗೆರೆಯ ತಿರುವಿನಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ನವೀನ್ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಚರಂಡಿಗೆ ಬಿದ್ದು ಪಕ್ಕದಲ್ಲಿದ್ದ ಗೋಡೆಗೆ ಬಿದ್ದ ಕಾರಣ ಬೈಕ್ನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡರು. ಕೂಡಲೇ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು ನವೀನ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿದ್ದ ಶರತ್, ದರ್ಶನ್ ಅವರನ್ನು ಆದಿಚುಂಚನಗಿರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವೆಂಕಟೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಷಯ ತಿಳಿದ ಬಿಇಒ ತಿಮ್ಮರಾಜಯ್ಯ, ಡಿಡಿಪಿಐ ನಂಜಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು, ಮೃತ ವಿದ್ಯಾರ್ಥಿಗಳ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಬಂದಿದ್ದರೆ ಘಟನೆ ಆಗುತ್ತಿರಲಿಲ್ಲ ಎಂದು ಮೃತರ ಸಂಬAಧಿಕರು ಆರೋಪಿಸಿದರೆ, ಸಣಬಘಟ್ಟ ಶಾಲೆಯ ೨೫ ವಿದ್ಯಾರ್ಥಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಬಸ್ನಲ್ಲಿ ತೆರಳಿದ್ದು ಈ ವಿದ್ಯಾರ್ಥಿಗಳು ಮಾತ್ರ ಬೈಕ್ನಲ್ಲಿ ಏಕೆ ಹೋದರು ಎಂಬುದು ತನಿಖೆಯ ನಂತರ ತಿಳಿಯಲಿದೆ. ಘಟನೆಗೆ ಸಂಬಂಧಿಸಿದಂತೆ ಸಿಪಿಐ ಗುರುಪ್ರಸಾದ್ ಮಾತನಾಡಿ, ಪೋಷಕರು ಅಪ್ರಾಪ್ತ ವಯಸಿನ ಮಕ್ಕಳಿಗೆ ಬೈಕ್ ಚಾಲನೆ ನೀಡಬಾರದೆಂದು ಈ ಹಿಂದೆ ನಡೆದ ಹಲವು ಕಾನೂನು ಅರಿವು, ಅಪರಾಧತಡೆ ಮಾಸಾಚರಣೆಯ ಕಾರ್ಯಕ್ರಮಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗಿತ್ತು. ಆದರೆ ಪೋಷಕರು ಈ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕು, ಮುಂದಿನ ದಿನಗಳಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಬೈಕ್ ಚಾಲನೆ ಮಾಡಲು ನೀಡದಂತೆ, ಒಂದು ವೇಳೆ ನೀಡಿದಲ್ಲಿ ಯಾವುದೇ ಅಪಘಾತ ಸಂಭವಿಸಿದಲ್ಲಿ ಪೋಷಕರ ಮೇಲೂ ಪ್ರಕರಣ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ.
ಅಪಘಾತದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಾವು
ಪರೀಕ್ಷೆ ಬರೆಯಲು ಬೈಕ್ ನಲ್ಲಿ ತೆರಳುವಾಗ ದುರ್ಘಟನೆ- ಇಬ್ಬರಿಗೆ ತೀವ್ರ ಗಾಯ
Get real time updates directly on you device, subscribe now.
Prev Post
Next Post
Comments are closed.