ಕೊರಟಗೆರೆ: ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ, ಬ್ರಾಹ್ಮಣ, ಕುರುಬ, ಒಕ್ಕಲಿಗ ಸಮುದಾಯದಿಂದ ಈಗಾಗಲೇ ಸಿಎಂ ಆಗಿ ರಾಜ್ಯದ ಆಡಳಿತ ನಡೆಸಿದ್ದಾರೆ, ಕರ್ನಾಟಕ ರಾಜಕೀಯ ರಂಗದಲ್ಲಿ ಡಾ.ಜಿ.ಪರಮೇಶ್ವರ್ ಅಜಾತಶತ್ರು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಲಿತ ಸಿಎಂ ಆದರೆ ಸಾಮಾಜಿಕ ನ್ಯಾಯದೊರೆಯುವ ಕನಸು ನನಸಾಗಲಿದೆ ಎಂದು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದ ಶ್ರೀರೇವಣ್ಣ ಸಿದ್ಧೇಶ್ವರ ಕನಕಗುರು ಶ್ರೀಮಠದಲ್ಲಿ ಜಿಪಂ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ೩ ಕೋಟಿ ೩೫ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸದಾ ಜನತೆಯ ಮಧ್ಯೆ ಇರುವಂತಹ ಸರಳತೆಯ ರಾಜಕಾರಣಿ ಮತ್ತೆ ಕೊರಟಗೆರೆ ಕ್ಷೇತ್ರದಿಂದ ಜಯಗಳಿಸಿ ರಾಜ್ಯದ ಸಿಎಂ ಆಗಲಿ ಎಂದರು.
ಕರ್ನಾಟಕದಲ್ಲಿ ಸಂಘಟನೆಯ ಹೆಸರಿನಲ್ಲಿ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ, ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುದೇ ಯಕ್ಷ ಪ್ರಶ್ನೆ, ರಾಜ್ಯದ ಎಲ್ಲಾ ಮಠಾಧೀಶರು ಒಂದಾಗಿ ರಾಜ್ಯ ಸರಕಾರ ಮತ್ತು ಸಂಘಟನೆಗಳಿಗೆ ಬುದ್ಧಿವಾದ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕನಕಗುರು ಮಠದಲ್ಲಿ ಜಯಂತಿ ಆದರೆ ಅಲ್ತಾಪ್ ತೋರಣ ಕಟ್ತಾನೇ, ಕ್ರಿಶ್ಚಿಯನ್ ಹುಡುಗ ಭಕ್ತರಿಗೆ ಊಟ ಬಡಿಸ್ತಾನೇ, ಯುಗಾದಿ ಹಬ್ಬದ ಊಟದ ವಿಚಾರದಲ್ಲಿ ಸಂಘಟನೆಯಿಂದ ಒಂದು ವರ್ಗದ ಜನರನ್ನು ದೂರುವಿಡುವ ಹುನ್ನಾರ ನಡೆಯುತ್ತಿದೆ, ರಾಜ್ಯದಲ್ಲಿ ಹಿಂದು ಮುಸ್ಲಿಂ ಸಮುದಾಯದ ನಡುವೆ ಗೊಂದಲ ಮೂಡಿಸುವ ಪ್ರಯುತ್ನ ನಡೆಯುತ್ತೀದೆ, ರಾಜ್ಯ ಸರಕಾರ ಮಧ್ಯೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಆಗ್ರಹ ಮಾಡಿದರು.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ಕೊರಟಗೆರೆ ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ತಲಾ ಎರಡು ಮಠಗಳಿವೆ, ಮಠಮಂದಿರ ಹೆಚ್ಚಾದಂತೆ ಸಾಮರಸ್ಯ ಹೆಚ್ಚಾಗಿ ಸಮಾಜದಲ್ಲಿ ಶಾಂತಿ ನೆಲೆಸಲಿದೆ, ಸಿದ್ದರಬೆಟ್ಟದ ಕನಕ ಶ್ರೀಮಠಕ್ಕೆ ಈಗಾಗಲೇ ೧೦ ಲಕ್ಷದ ಕಾಂಪೌಂಡು ಮತ್ತು ಕೊಳವೆಬಾವಿಗೆ ಅನುದಾನ ನೀಡಿದ್ದಾನೆ, ಶ್ರೀಮಠಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಎಸ್.ನಾಗಣ್ಣ, ತಹಶೀಲ್ದಾರ್ ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಜಿಪಂ ಎಇಇ ರವಿಕುಮಾರ್, ಸಿದ್ದರಬೆಟ್ಟ ಗ್ರಾಪಂ ಅಧ್ಯಕ್ಷೆ ವಿನೋದ, ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ರಂಗಧಾಮಯ್ಯ, ಲಕ್ಷ್ಮೀಕಾಂತ, ರಂಗರಾಜು ಇತರರು ಇದ್ದರು.
Get real time updates directly on you device, subscribe now.
Next Post
Comments are closed.