ತುಮಕೂರು: ಯಾವುದೇ ದೇಶದ ಅಭಿವೃದ್ಧಿಯಾಗಬೇಕಾದರೆ ಸಮಾನತೆ ಕಲ್ಪನೆ ಎಲ್ಲರಲ್ಲು ಮೂಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಏರ್ಪಡಿಸಲಾಗಿದ್ದ ಮಾಜಿ ಉಪ ಪ್ರ`Áನಿ, ಸಮಾನತೆ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರತಿ ವರುಷ ಏಪ್ರಿಲ್ 5 ರಂದು ದೇಶ- ವಿದೇಶಗಳಲ್ಲಿ ಜಗಜೀವನರಾಂ ಅವರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ, ಜಗಜೀವನರಾಂ ಅವರು ತಮ್ಮ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಅನಿಷ್ಟಗಳಲ್ಲೊಂದಾದ ಅಸ್ಪಶ್ಯತೆ ಅನುಭವಿಸಿ ದೌರ್ಜನ್ಯ ಎದುರಿಸಿ ದೇಶದ ಉನ್ನತ ಸ್ಥಾನ ಅಲಂಕರಿಸಿದ ಮಹಾನ್ ವ್ಯಕ್ತಿ ಎನಿಸಿಕೊಂಡಿದ್ದರು, ಅವರ ಆದರ್ಶ, ವಿಚಾರಧಾರೆ ಅರಿತು ಜೀವನದಲ್ಲಿ ನಾವೆಲ್ಲ ಅಳವಡಿಸಿಕೊಳ್ಳುವ ಮೂಲಕ ಸಮಾನತೆ ಸಮಾಜಕ್ಕಾಗಿ ಶ್ರಮಿಸಬೇಕೆಂದರು.
ದೇಶದಲ್ಲಿ 1965ರಲ್ಲಿದ್ದ ಭೀಕರ ಬರಗಾಲದ ಸಂದರ್ಭದಲ್ಲಿ ಜಗಜೀವನರಾಂ ಅವರು ನಡೆಸಿದ ಹಸಿರು ಕ್ರಾಂತಿಯಿಂದ ಅಗತ್ಯಕ್ಕಿಂತ ಹೆಚ್ಚು ಆಹಾರ ಉತ್ಪಾದನೆ ಮಾಡಲು ಸಾಧ್ಯವಾಯಿತು, ಕಾರ್ಮಿಕರ ಆಶೋತ್ತರ ಈಡೇರಿಸುವ ಉದ್ಧೇಶದಿಂದ ಕಾರ್ಮಿಕ ಕಲ್ಯಾಣ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ, ತಿದ್ದುಪಡಿ ತಂದರು, ಆರ್ಥಿಕ ಸಂಕಷ್ಟಗಳ ನಡುವೆಯೂ ಎದುರಾಳಿ ದೇಶಗಳಾದ ಪಾಕಿಸ್ತಾನ, ಬಾಂಗ್ಲಾ, ಚೀನಾ ದೇಶಗಳಿಂದ ರಕ್ಷಣೆ ಪಡೆಯಲು ಭದ್ರ ಬುನಾದಿ ಹಾಕಿಕೊಟ್ಟ ಉತ್ತಮ ನಾಯಕರಾಗಿದ್ದರು ಎಂದು ತಿಳಿಸಿದರಲ್ಲದೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಸಾಧನೆ, ಸಾಮಾಜಿಕ ಪರಿಶ್ರಮ, ತತ್ವಾದರ್ಶ, ಜೀವನ ಚರಿತ್ರೆಯ ಬಗ್ಗೆ ಮುಂದಿನ ಪೀಳಿಗೆ ಮಕ್ಕಳಿಗೆ ತಿಳಿಯಪಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ಈ ಸದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಾಹಪೂರ್ವಾಡ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್ ಮೋಹನ್ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ, ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಹೆಚ್.ಶ್ರೀನಿವಾಸ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬಾಲಕೃಷ್ಣಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ದಲಿತ ಮುಖಂಡರು ಮತ್ತಿತರರು ಹಾಜರಿದ್ದರು.
ಎಲ್ಲರಲ್ಲು ಸಮಾನತೆ ಕಲ್ಪನೆ ಮೂಡಲಿ: ಡೀಸಿ
Get real time updates directly on you device, subscribe now.
Prev Post
Next Post
Comments are closed.