ಮಧುಗಿರಿ: ಜೋಡಿ ಕೊಲೆ ಆರೋಪಿಗೆ ಮಧುಗಿರಿಯ ೪ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ್ ಅವರು ಬುಧವಾರ ಜೀವಾವಧಿ ಶಿಕ್ಷೆ ಮತ್ತು ೧ ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ಮೃತರ ವಾರಸುದಾರರಿಗೆ ೯೦ ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಮಂಜುನಾಥ ಜೀವಾವಧಿ ಶಿಕ್ಷೆಗೊಳಗಾದ ಆರೋಪಿ.
ಏನಿದು ಪ್ರಕರಣ: ೨೦೧೮, ಏ. ೦೪ ರಂದು ರಾತ್ರಿ ಸುಮಾರು ೭.೩೦ ರ ಸಮಯದಲ್ಲಿ ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ನಾಗರಾಜಪ್ಪ ಅವರ ಮನೆಯ ಮುಂಭಾಗದ ಸಿಸಿ ರಸ್ತೆಯಲ್ಲಿ ಆರೋಪಿ ಮಂಜುನಾಥನು ಅವರ ಹೆಂಡತಿ ರಂಜಿತಾರೊಂದಿಗೆ ಚಂದ್ರಶೇಖರ ಎಂಬುವವರು ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾನೆ ಅದು ಅನುಮಾನಪಟ್ಟು ನಾಗರಾಜಪ್ಪ ಅವರ ಮನೆಯಲ್ಲಿದ್ದ ರಾಮಾಂಜಿನಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಏಕಾಏಕಿ ಗಲಾಟೆ ಮಾಡಿ ಮನೆಯ ಮುಂದಿನ ಖಾಲಿ ಜಾಗದಲ್ಲಿ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ರಾಮಾಂಜಿನಮ್ಮರವರ ಎಡ ಕಪಾಳಕ್ಕೆ ಹೊಡೆದು ತೀವ್ರ ರಕ್ತ ಗಾಯಗೊಳಿಸಿದ್ದು, ನಂತರ ಇನ್ನೊಂದು ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದು, ಜಗಳ ಬಿಡಿಸಲು ಬಂದ ರಾಂಮಾಂಜಿನಮ್ಮನ ಮಗಳು ನಾಗಮಣಿಗೂ ಸಹ ಮತ್ತೊಂದು ಕಟ್ಟಿಗೆಯಿಂದ ತಲೆಗೆ ಮುಖಕ್ಕೆ ಬಲವಾಗಿ ಹೊಡೆದಿದ್ದರಿಂದ ರಾಮಾಂಜಿನಮ್ಮ ಮತ್ತು ನಾಗಮಣಿ ತೀವ್ರ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುವುದು ತನಿಖೆಯಿಂದ ದೃಢಪಟ್ಟಿರುತ್ತದೆ. ಅಂದಿನ ತನಿಖಾಧಿಕಾರಿ ೩೦೨ ಐಪಿಸಿ ಅಡಿಯಲ್ಲಿ ಅಂತಿಮ ವರದಿ ಸಲ್ಲಿಸಿದ್ದು, ತದನಂತರ ತನಿಖೆ ವಹಿಸಿಕೊಂಡ ವೃತ್ತ ನಿರೀಕ್ಷಕರು ಗೌಡೇಟಿ ಗ್ರಾಮದಲ್ಲಿದ್ದ ಈತನನ್ನು ಪತ್ತೆ ಮಾಡಿ ಬಂದಿಸಿದ್ದರು. ವಿಚಾರಣೆ ನಡೆಸಿದ ಮಧುಗಿರಿಯ ನ್ಯಾಯಮೂರ್ತಿಗಳು ಆರೋಪಿಗೆ ಕಲಂ ೩೦೨ ಐಪಿಸಿ ಅಡಿಯಲ್ಲಿ ಮೇಲ್ಕಂಡಂತೆ ತೀರ್ಪು ನೀಡಿ, ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದಾರೆ.
ಜೋಡಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
Get real time updates directly on you device, subscribe now.
Prev Post
Comments are closed.