ತುಮಕೂರು: ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖಂಡ ಠಾಕ್ರೆ ಹೇಳಿರೋದು ನೂರಕ್ಕೆ ನೂರು ಸತ್ಯವಾಗಿದೆ, ದೇಶದಲ್ಲಿ ಮೈಕ್ ಗಳ ಹಾವಳಿ ವಿಪರೀತವಾಗಿದ್ದು, ಕಡಿವಾಣ ಹಾಕುವಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಸಚಿವನಾಗಿದ್ದಾಗ ಕಾನೂನಿಗೆ ಗೌರವ ಕೊಡುವಂತೆ ಮಸೀದಿಗಳ ಮೇಲಿನ ಮೈಕ್ ಗಳನ್ನ ತೆಗೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ, ಈ ಮೈಕ್ ಗಳ ಶಬ್ದದಿಂದಾಗಿ ಹಾರ್ಟ್ ಅಟ್ಯಾಕ್ ಮತ್ತು ವಿದ್ಯಾರ್ಥಿಗಳ ಓದಿಗೆ ತೊಡಕು ಆಗುತ್ತಿದೆ, ತುಮಕೂರು ನಗರದ ಸದಾಶಿವನಗರ, ಜಯಪುರದಲ್ಲಿ ಆಜಾನ್ ಕಾಟದಿಂದ ಹಿಂದೂಗಳು ಮನೆ ತೊರೆದಿದ್ದಾರೆ ಎಂದರು.
ತುಮಕೂರಿನ ಕೆಲ ಬಡಾವಣೆಗಳಲ್ಲಿ ಮನೆಗಳನ್ನ ಮಾರಾಟ ಮಾಡುತ್ತಿದ್ದಾರೆ, ಹಿಂದೂಗಳ ಸ್ಮಶಾನಕ್ಕೆ ಹೋಗಿ ನಮ್ಮ ಶಾಸ್ತ್ರ ವಿಧಿವಿಧಾನ ಮಾಡುವ ವೇಳೆ ಆಜಾನ್ನಿಂದ ನಮಗೆ ತೊಂದರೆ ಆಗುತ್ತಿದ್ದು, ಹಿಂದೆ ೭೦ ವರ್ಷ ಆಳಿದವರು ಪಾಪಿಗಳು, ಸಮಾಜದಲ್ಲಿ ಜಾತಿ ವಿಂಗಡಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಹಿಜಾಬ್ ಹಿಡಿದುಕೊಂಡಿದ್ದಾರೆ, ಸಿದ್ದರಾಮಯ್ಯ ಹಲಾಲ್ ಹಿಡ್ಕೊಂಡಿದ್ದಾರೆ, ಇನ್ನೊಬ್ಬರು ಮಾವಿನಹಣ್ಣು ಹಿಡ್ಕೊಂಡಿದ್ದಾರೆ, ಮೊದಲು ಶಬ್ಧ ಮಾಲಿನ್ಯ ತಡೆಗಟ್ಟಲಿ, ದೇವಸ್ಥಾನದಲ್ಲೂ ಮೈಕ್ ಗಳನ್ನ ಶಬ್ಧ ಮಾಲಿನ್ಯ ಆಗದಂತೆ ಹಾಕಿಕೊಳ್ಳಲಿ, ಸುಪ್ರೀಂ ಆದೇಶ ಯಥಾವತ್ತು ಪಾಲನೆ ಆಗಲಿ, ಇದು ಪಾಕಿಸ್ತಾನ ಅಲ್ಲ, ಹಿಂದೂ ರಾಷ್ಟ್ರ, ಇಲ್ಲಿ ಹಿಂದೂ ಕಾನೂನು ಇರಬೇಕು ಎಂದು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ದೇಶ ವಿಭಜನೆ ಮಾಡೋಕೆ ಹೊರಟಿದ್ದಾರೆ, ಮಾವಿನ ಹಣ್ಣನ್ನು ನಮ್ಮವರು ಬೆಳೆಯೋದು, ಮುಸಲ್ಮಾನರು ಅದನ್ನ ಮಾರಿ ಲಾಭ ಮಾಡಿಕೊಳ್ಳುವುದು ಎಷ್ಟು ಸರಿ? ಹೈಕೋರ್ಟ್ ತೀರ್ಪಿನ ವಿರುದ್ಧ ಇವರ ಅಂಗಡಿ ಬಂದ್ ಮಾಡಿದರು, ಇದರಿಂದ ನಮ್ಮವರಿಗೂ ಲಾಸ್ ಆಗಿದೆ, ರೇಷ್ಮೆ ಮಾರ್ಕೆಟ್ ಗಳೂ ಬಂದ್ ಆದವು, ಇದರಿಂದ ನಮ್ಮವರಿಗೆ ತುಂಬಾ ತೊಂದರೆ ಆಯ್ತು, ರೇಷ್ಮೆ ಗೂಡುಗಳು ನಾಶವಾಯಿತು, ಇದರಿಂದ ಎಷ್ಟು ತೊಂದರೆ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದರು.
ಮಾವಿನ ಹಣ್ಣನ್ನೂ ಕೂಡ ಇವರು ಮಾರಬಾರದು, ಅದನ್ನ ಬೆಳೆದ ರೈತರು ನಮ್ಮವರು ಮಾರಲಿ, ಮುಸಲ್ಮಾನರು ಮಾವಿನ ಹಣ್ಣನ್ನ ಖರೀದಿ ಮಾಡದೆ ಇದ್ರೆ ರೈತರು ಕಂಗಾಲು ಆಗಲ್ಲ, ರೈತರಿಂದ ನಮ್ಮವರೇ ಖರೀದಿ ಮಾಡಿ ಅದನ್ನ ಮಾರಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮುಸಲ್ಮಾನರು ಯಾಕೆ ಪೌರ ಕಾರ್ಮಿಕರ ಕೆಲಸ ಮಾಡಲ್ಲ, ನಮ್ಮವರೇ ಯಾಕೆ ಮಾಡ್ಬೇಕು, ನಮ್ಮವರು ಮುಸಲ್ಮಾನರ ಬೀದಿಗಳಲ್ಲಿ ಕಸ ಗುಡಿಸೋದು, ಶೌಚ ಕ್ಲೀನ್ ಮಾಡೋದು ಮಾಡ್ತಾರೆ, ಮುಸಲ್ಮಾನರು ಪೌರ ಕಾರ್ಮಿಕರ ತರ ಕೆಲಸ ಮಾಡಲಿ ಎಂದು ಹೇಳಿದರು.
ಮಸೀದಿಗಳ ಮೇಲಿನ ಮೈಕ್ ಗೆ ಕಡಿವಾಣ ಅಗತ್ಯ: ಸೊಗಡು
Get real time updates directly on you device, subscribe now.
Prev Post
Next Post
Comments are closed.