ದೇಗುಲಗಳು ಶಾಂತಿ, ನೆಮ್ಮದಿಯ ತಾಣ

ವಿಜ್ಞಾನ, ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖ: ಸ್ವಾಮೀಜಿ

203

Get real time updates directly on you device, subscribe now.

ಕುಣಿಗಲ್: ವಿಜ್ಞಾನ, ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಎರಡೂ ಸಮಾನವಾಗಿ ಬೆಳೆದಾಗ ಮಾತ್ರ ಮನುಷ್ಯ ಮನುಷ್ಯನಾಗಿ ಸಮಗ್ರವಾಗಿ ಬೆಳೆದು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಬುಧವಾರ ತಾಲೂಕಿನ ನೊರಜನಕುಪ್ಪೆ ಗ್ರಾಮದಲ್ಲಿನ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ೨೭ ಅಡಿ ಗರುಗಡಗಂಬದ ಲೋಕಾರ್ಪಣೆಗೊಳಿಸಿ ಮಾತನಾಡಿ, ಮನುಷ್ಯ ಆಧುನಿಕ ತಂತ್ರಜ್ಞಾನ, ವಿಜ್ಞಾನದ ಸಹಕಾರದಿಂದ ಉತ್ತುಂಗಕ್ಕೆ ಬೆಳೆಯುತ್ತಿರುವ ನಡುವೆಯೆ ಆಧ್ಯತ್ಮಿಕವಾಗಿ ಹಿನ್ನಡೆ ಅನುಭವಿಸುತ್ತಾ ಹಲವು ಸಮಸ್ಯೆಗೆ ಸಿಲುಕುವಂತಾಗಿದೆ, ಪರಿಸರದ ಅಂಗವಾಗಿ ವಿಜ್ಞಾನ, ತಂತ್ರಜ್ಞಾನ ಬೆಳೆಯುತ್ತಿರುವ ನಡುವೆಯೆ ಪರಿಸರದ ಅಂಗವಾದ ಮನುಷ್ಯನೂ ಆಧ್ಯಾತ್ಮಿಕವಾಗಿ ಬೆಳೆಯುವ ಅಗತ್ಯತೆ ಇದೆ, ಗ್ರಾಮಾಂತರ ಪ್ರದೇಶದಲ್ಲಿ ಆಧ್ಯಾತ್ಮಿಕತೆ ವೃದ್ಧಿಗೆ ದೇವಾಲಯಗಳು ಮಹತ್ತರ ಪಾತ್ರ ವಹಿಸುತ್ತಿವೆ, ತಂತ್ರಜ್ಞಾನ, ವಿಜ್ಞಾನ ಅಡುಗೆಯಲ್ಲಿ ಉಪ್ಪಿದ್ದಂತೆ ಎಷ್ಟುಬೇಕೋ ಅಷ್ಟು ಬಳಕೆಯಾಗಬೇಕು, ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ, ಮನೆಯಲ್ಲಿ ಮಾತೆಯಂದಿರುವ ಸಂಸ್ಕಾರವAತರಾದರೆ ಕುಟುಂಬ ಸಂಸ್ಕಾರವAತವಾಗಿ ದೇಶವು ಸುಭೀಕ್ಷವಾಗಿರುತ್ತದೆ, ಬಾಹ್ಯಭಿವೃದ್ಧಿಯನ್ನು ರಾಜಕಾರಣಿಗಳು ಮಾಡಿದರೆ, ಮನುಷ್ಯರ ಅಂತರAಗದ ಆಧ್ಯಾತ್ಮ ಅಭಿವೃದ್ಧಿಯನ್ನು ಸನ್ಯಾಸಿಗಳು, ಪೋಷಕರು, ಸ್ವಾಮೀಜಿಗಳು ಮಾಡಬೇಕು, ಎರಡೂ ವರ್ಗದವರು ಪರಿಪೂರ್ಣವಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿದಾಗ ಜನರಲ್ಲಿ ಸಂಸ್ಕಾರ, ಆಧ್ಯಾತ್ಮಿಕತೆ ವೃದ್ಧಿಯಾಗಿ ನೆಮ್ಮದಿಯುತ ಜೀವನ ನಿರ್ವಹಿಸಲು ಸಾಧ್ಯ ಎಂದರು.
ಸಾನಿಧ್ಯ ವಹಿಸಿದ್ದ ಕಿತ್ತನಾಗಮಂಗಲ ಅರೆಶಂಕರ ಮಠಾಧೀಶ ಸಿದ್ದರಾಮ ಚೈತನ್ಯಸ್ವಾಮೀಜಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಲು ಇರುವ ಇಚ್ಛಾಶಕ್ತಿ ಬದ್ಧತೆ ದೇವಾಲಯ ನಿರ್ಮಾಣದ ನಂತರವೂ ಸರ್ವ ಕಾಲದಲ್ಲೂ ಸ್ವಚ್ಛತೆ, ಪೂಜೆಗಳು ನಡೆಯುವಂತೆ ನೋಡಿಕೊಳ್ಳಬೇಕು, ದೇವಾಲಯಗಳು ಶಾಂತಿ, ನೆಮ್ಮದಿ ನೀಡುವ ತಾಣವಾಗಿವೆ ಎಂಬುದ ಮರೆಯಬಾರದು ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಸಮಾಜ ಒಡೆದು ಆಳುವವರ ಕೃತ್ಯದಿಂದ ಹಲವು ಸಮಸ್ಯೆ ಸೃಷ್ಟಿಯಾಗಿದೆ, ಪೂಜ್ಯ ಶ್ರೀಗಳು ಇಂತಹ ವಾತಾವರಣ ನಿರ್ಮಾಣವಾಗದ ಹಾಗೆ ಮಾರ್ಗದರ್ಶನ ನೀಡಬೇಕು, ತಾಲೂಕಿನ ೪೦೦ ಹಳ್ಳಿಗಳಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರದ ನೆರವು ಸಮರ್ಪಕವಾಗಿ ಸಿಗುತ್ತಿಲ್ಲ, ಅದೇ ಸರ್ಕಾರ ನಗರ ಪ್ರದೇಶದಲ್ಲಿ ಸಾವಿರಾರು ಕೋಟಿ ವ್ಯಯ ಮಾಡುತ್ತಿದೆ, ಶ್ರೀಗಳು ಸರ್ಕಾರದ ಸಚಿವರಿಗೆ ಗ್ರಾಮಾಂತರ ಪ್ರದೇಶದ ಮೂಲ ಸೌಕರ್ಯ ವೃದ್ಧಿ ನಿಟ್ಟಿನಲ್ಲಿ ಗಮನ ಹರಿಸುವ ಬಗ್ಗೆ ಕಿವಿಮಾತು ಹೇಳಿ ಗ್ರಾಮಾಂತರ ಪ್ರದೇಶದ ಜನರ ಸಮಸ್ಯೆಗೆ ಸ್ಪಂದಿಸಲು ಸಹಕಾರ ನೀಡಬೇಕೆಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಆಧ್ಯಾತ್ಮಧಾರಿತ ವೈಜ್ಞಾನಿಕ ಮಾರ್ಗದರ್ಶನ ನೀಡುವಲ್ಲಿ ಚುಂಚನಗಿರಿ ಶ್ರೀಗಳು ವಿಶ್ವಮಾನ್ಯರಾಗಿದ್ದಾರೆ, ಕುಗ್ರಾಮದ ಭಕ್ತರ ಕೂಗಿಗೂ ಸ್ಪಂದಿಸಿ ಗ್ರಾಮದ ಜನರಲ್ಲಿ ಆಧ್ಯಾತ್ಮ, ವಿಜ್ಞಾನದ ಬಗ್ಗೆ ಜಾಗೃತಿ ಉಂಟು ಮಾಡಲು ಆಗಮಿಸಿದ್ದು ಗ್ರಾಮಸ್ಥರಿಗೆ ಸಂತಸವಾಗಿದೆ, ದೇವಾಲಯಕ್ಕೆ ಸೇರಿದ ಮೂರು ಎಕರೆ ಜಾಗದಲ್ಲಿ ವನಕಾಶಿ ನಿರ್ಮಿಸಲು ಶ್ರೀಗಳು ಮುನ್ನುಡಿ ಬರೆಯಬೇಕೆಂದರು.
ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿ, ತಾಲೂಕಿಗೆ ಸಮರ್ಪಕ ಹೇಮೆ ನೀರು ಹರಿಸಲು ಪೂಜ್ಯ ಶ್ರೀಗಳು ಸಹಕಾರ ನೀಡಬೇಕು ಎಂದರು.
ಬಿಜೆಪಿ ಮುಖಂಡ ಎಚ್.ಡಿ.ರಾಜೇಶಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಧಾರ್ಮಿಕತೆ ವೃದ್ಧಿ ನಿಟ್ಟಿನಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ದೇವಾಲಯದ ಪ್ರಮುಖ, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಪ್ರಮುಖರಾದ ಕಾಮನಹಳ್ಳಿ ರಾಮಣ್ಣ, ಬಿ.ಕೆ.ರಾಮಣ್ಣ, ಕೆಂಪೀರೇಗೌಡ, ರಮೇಶ, ಐ.ಎ.ವಿಶ್ವನಾಥ, ನಾರಾಯಣ, ನರಸೇಗೌಡ, ನಾರಾಯಣ, ರಾಜಣ್ಣ, ಆನಂದಯ್ಯ, ಶಾಮರಾವ್ ಸೂರ್ಯ ವಂಶೆ, ಲಲಿತಾ ಶಾನೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!