25 ಕುರಿ ಕದ್ದ ಕಳ್ಳರು

115

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಹಾಗೂ ಸಮೀಪದ ಗೊಲ್ಲರಹಟ್ಟಿಯ ಕೊಟ್ಟಿಗೆಗಳಿಂದ ಸುಮಾರು 25 ಕ್ಕೂ ಹೆಚ್ಚು ಕುರಿಗಳನ್ನು ಕಳೆದ ಬುಧವಾರ ರಾತ್ರಿಯಲ್ಲಿ ಹೊತ್ತೊಯ್ಯುವ ಮೂಲಕ ಕಳ್ಳರು ಕೈ ಚಳಕ ತೋರಿದ್ದಾರೆ.

ಸೊರವನಹಳ್ಳಿ ಗ್ರಾಮದ ತಮ್ಮಯ್ಯನವರಿಗೆ ಸೇರಿದ 20 ಕುರಿ ಹಾಗೂ ದೊಡ್ಡಯ್ಯನಿಗೆ ಸೇರಿದ 4 ಕುರಿಗಳು ಇದೇ ಗ್ರಾಮಕ್ಕೆ ಹೊಂದಿಕೊಂಡಂತಿರುವ ಸೊರವನಹಳ್ಳಿ ಗೊಲ್ಲರಹಟ್ಟಿಯ ಧನಂಜಯ ಎಂಬುವರಿಗೆ ಸೇರಿದ 2 ಕುರಿಗಳನ್ನು ಬುಧವಾರ ರಾತ್ರಿ ಹೊತ್ತೊಯ್ದಿರೆನ್ನಲಾಗಿದೆ. ಕುರಿಗಳ ಮಾಲೀಕರು ಎಂದಿನಂತೆ ಗುರುವಾರ ಬೆಳಗ್ಗೆ ಕುರಿ ಕೊಟ್ಟಿಗೆಗೆ ಬಂದು ನೋಡಿದಾಗ ಕುರಿಗಳು ಇಲ್ಲದ್ದನ್ನು ಕಂಡು ಗಾಬರಿಯಾಗಿದ್ದಾರೆ, ಕುರಿಗಳನ್ನು ಅರಸಿ ಗ್ರಾಮದ ಆಸುಪಾಸಿನಲ್ಲಿ ನಡೆಯುವ ಸಂತೆಗಳತ್ತ ಕುರಿಗಳ ಮಾಲೀಕರು ತೆರಳಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಸದರಿ ಘಟನೆಯಿಂದ ಆಸುಪಾಸಿನ ಗ್ರಾಮಗಳ ಕುರಿ ಮೇಕೆ ಸಾಕಾಣಿಕೆದಾರರು ಆತಂಕಕೊಳಗಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!