ಸೇತುವೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ

818

Get real time updates directly on you device, subscribe now.

ಗುಬ್ಬಿ: ತಾಲೂಕಿನ ಹರೇನಹಳ್ಳಿ ಗ್ರಾಮದ ಬಳಿ ಎನ್.ಎಚ್.206 ರಸ್ತೆ ಕಾಮಗಾರಿ ನಡೆಯುತ್ತಿದ್ದು ಸಂಪೂರ್ಣವಾಗಿ ಇನ್ನೂ ಸಿದ್ಧಗೊಂಡಿಲ್ಲ, ಕಾಮಗಾರಿ ಮಾಡುತ್ತಿರುವ ಸಾಕಷ್ಟು ಭಾಗದಲ್ಲಿ ಸೇತುವೆ ಕಾಮಗಾರಿ ಹಾಗೂ ರಸ್ತೆ ರಿಪೇರಿ ನಿರಂತರವಾಗಿ ನಡೆಯುತ್ತಲೇ ಇದೆ, ಸರಿಯಾದ ನಾಮಫಲಕ ಸಹ ರಸ್ತೆಯಲ್ಲಿ ಕಾಣುತ್ತಿಲ್ಲ ಯಾವಾಗ ಎಲ್ಲಿ ರಸ್ತೆ ತಿರುವು ಬದಲಾವಣೆಯಾಗುತ್ತದೆ ಎಂಬುದೇ ಸವಾರರಿಗೆ ಸವಾಲಿನ ಕೆಲಸವಾಗಿದೆ, ಗುರುವಾರ ಸಂಜೆ ಕಡೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ಸೊಂದು ರಸ್ತೆ ಪಕ್ಕದಲ್ಲಿ ನಿರ್ಮಾಣದ ಹಂತದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಬಸ್ಸಿನಲ್ಲಿ ಸುಮಾರು 17 ಜನ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯಯವಾಗಿದ್ದು, ಸೇತುವೆ ಗಟ್ಟಿಯಾಗಿಲ್ಲದೆ ಹೋಗಿದ್ದರೆ ದೊಡ್ಡ ಅವಘಡವೇ ಸಂಭವಿಸಿ ಸಾವು ನೋವು ಸಂಭವಿಸುತ್ತಿತ್ತು.

ಸೇತುವೆಯ ಕೆಳಭಾಗವು ಸುಮಾರು 15 ಅಡಿ ಆಳದ ಪ್ರಪಾತವಿದ್ದು ಅಲ್ಲಿ ನೀರು ಸಹ ತುಂಬಿದೆ, ಆಕಸ್ಮಿಕವಾಗಿ ಕಂದಕಕ್ಕೆ ಬಸ್ಸು ಉರುಳಿದ್ದರೆ ಭಾರಿ ದುರಂತ ಸಂಭವಿಸಬೇಕಿತ್ತು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಸ್ಥಳಕ್ಕೆ ಗುಬ್ಬಿ ಫೊಲೀಸರು ತೆರಳಿ ಬಸ್ಸನ್ನು ಪಕ್ಕಕ್ಕೆ ತಳ್ಳುವ ಕೆಲಸ ಮಾಡಿದರು.

Get real time updates directly on you device, subscribe now.

Comments are closed.

error: Content is protected !!