ಸಾರಿಗೆ ಪ್ರಾಧಿಕಾರದ ಆದೇಶ ಪಾಲನೆಗೆ ಡೀಸಿ ಸೂಚನೆ

335

Get real time updates directly on you device, subscribe now.

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಯು ಜಿಲ್ಲೆಯಲ್ಲಿ ಜಾತ್ರೆ, ಹಬ್ಬ ಹರಿದಿನಗಳಂತಹ ವಿಶೇಷ ಸಂದರ್ಭದ ದಿನಗಳಲ್ಲಿ ಮಾತ್ರ, ಸುತ್ತೋಲೆ ಹೊರಡಿಸಿ ಆ ದಿನಗಳಲ್ಲಿ ಫ್ಲೆಕ್ಸಿ ಫೇರ್ ದರಗಳನ್ವಯ ಬಸ್ ಓಡಿಸುವಂತೆ ಮತ್ತು ಇತರೆ ಸಾಮಾನ್ಯ ದಿನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ಗಳು ಏಕ ದರದಲ್ಲಿ ಓಡಿಸುವ ಸಂಬಂಧ ಹೊರಡಿಸಲಾಗಿರುವ ಸರ್ಕಾರದ ಆದೇಶ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಆದೇಶಗಳನ್ನು ಯಥಾವತ್ತಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ತುಮಕೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅ`À್ಯಕ್ಷ ವೈ.ಎಸ್.ಪಾಟೀಲ್ ಅವರು ಕರಾರಸಾ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಆರ್ಟಿಓ ಕಚೇರಿ ಆವರಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿನಾಂಕ 11-08-2021 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜಾರಿ ಮಾಡಿದ ಆದೇಶವನ್ನು ಕರಾರಸಾ ಸಂಸ್ಥೆಯು ಪಾಲಿಸಬೇಕಾಗುತ್ತದೆ. ಆದರೆ ಕರಾರಸಾ ಸಂಸ್ಥೆಯವರು ರಹದಾರಿ ಪಡೆಯದೆ ಅನಿಯಮಿತವಾಗಿ ಪ್ರಯಾಣ ದರ ವಿಧಿಸುತ್ತಿರುವುದಾಗಿ ತುಮಕೂರು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಗೆ ಕಾರಣ ಕೇಳೀ ನೋಟೀಸ್ ಜಾರಿಗೊಳಿಸುವಂತೆ ಮತ್ತು ಕರಾರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ಕಳುಹಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ಸೂಚಿಸಿದರು.
ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಕರಾರಸಾ ನಿಗಮವು ದರ ನಿಗದಿಪಡಿಸಿದ್ದಲ್ಲಿ ಮತ್ತು ದಿನಾಂಕ 11-8-2021 ರ ಪ್ರಾಧಿಕಾರದ ಆದೇಶ ಪಾಲಿಸಲು ನಿಗಮಕ್ಕೆ ಕಷ್ಟವಾದಲ್ಲಿ, ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಲು ನಿಗಮಕ್ಕೆ ಅವಕಾಶವಿದೆ ಎಂದರು.
ಕರಾರಸಾ ನಿಗಮ ವiತ್ತು ಖಾಸಗಿ ಬಸ್ ಮಾಲೀಕರ ಸಂಘದ ನಡುವೆ ಪರವಾನಗಿ, ಅನಿಯಮಿತ ಬಸ್ ಸಂಚಾರ ಮತ್ತು ಬಸ್ ಪ್ರಯಾಣ ದರ ಕುರಿತಂತೆ ಭಿನ್ನಾಭಿಪ್ರಾಯಗಳಿದ್ದು, ಉ`Àಯ ಸಂಸ್ಥೆಗಳ ಮುಖ್ಯಸ್ಥರು ಕುಳಿತು ಪರಸ್ಪರ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ನಂತರ ಆಟೋ ಚಾಲಕರ ಸಂಘದವರ ಸಮಸ್ಯೆ ಆಲಿಸಿದ ಜಿಲ್ಲಾದಿಕಾರಿಗಳು, ನಗರದಲ್ಲಿ ಸಂಚರಿಸುತ್ತಿರುವ ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಹಿಂದಿನ ಆರ್ಟಿಎ ಸಭೆಯಲ್ಲಿ ನಿರ್ಣಯಿಸಿದಂತೆ, ತುಮಕೂರು ನಗರ ವಾಣಿಜ್ಯ ಆಟೋ ರಿಕ್ಷಾಗಳಿಗೆ ಸ್ಮಾರ್ಟ್ ಡಿಸ್ಪ್ಲೇ ಕಾರ್ಡ್ ಕಡ್ಡಾಯವಾಗಿ ಜಾರಿಗೆ ತರುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖಾ ಮುಖ್ಯಸ್ಥರು, ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!