ಟಿಪ್ಪು ಸುಲ್ತಾನ್ ಅಪ್ಪಟ ದೇಶ ಭಕ್ತ

ಚುನಾವಣೆ ಗಿಮಿಕ್ ಗಾಗಿ ಹಿಜಾಬ್, ಹಲಾಲ್ ವಿವಾದ ಸೃಷ್ಟಿ: ಕೆ.ಎನ್.ಆರ್

135

Get real time updates directly on you device, subscribe now.

ತುಮಕೂರು: ಇಂದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ, ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ ಹೆಸರಿನಲ್ಲಿ ಇಂದು ಸಮುದಾಯವನ್ನು ದ್ವೇಷಿಸುವ ಕೆಲಸವಾಗುತ್ತಿರುವುದು ಬೇಸರದ ಸಂಗತಿ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಜಾಬ್ ಸಂಬಂಧ ಕೋರ್ಟ್ ತೀರ್ಪು ನೀಡಿದೆ, ಅದನ್ನು ಗೌರವಿಸುವುದು ನಮ್ಮ ಧರ್ಮ, ಆದರೆ ಸರ್ಕಾರಕ್ಕೆ ಆದೇಶ ಹೊರಡಿಸುವ ಮುಂಚಿತವಾಗಿ ಸರಿ ತಪ್ಪುಗಳನ್ನು ಪರಿಗಣಿಸಬೇಕಿತ್ತು, ಈಗ ಹಿಜಾಬ್ ವಿವಾದದಿಂದ ಎಷ್ಟೋ ಮಕ್ಕಳ ಭವಿಷ್ಯ ಹಾಳಾಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲಾಲ್ ಕಟ್ಗೆ ವಿರೋಧ ಮಾಡುವ ಮೂಲಕ ಜನರಲ್ಲಿ ದೊಡ್ಡ ಗೊಂದಲ ಮೂಡಿಸುವ ಕೆಲಸ ಆಯಿತು, ಜಟ್ಕಾ ಕಟ್ ಎಂಬ ಶಬ್ದವನ್ನು ನಾನು ಎಂದು ಕೇಳಿರಲಿಲ್ಲ, ಈಗ ಅದು ಈಗ ಮುಂಚೂಣಿಗೆ ಬಂದಿದೆ, ಹಲಾಲ್ ಕಟ್ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಹಲಾಲ್ ಸರ್ಟಿಫಿಕೇಟ್ ಇದ್ದತೆ ಮಾತ್ರ ವಿದೇಶದಲ್ಲಿ ಮಾಂಸ ಕೊಳ್ಳೋದು, ನಮ್ಮ ದೇಶದಿಂದ ಬೇರೆ ದೇಶಗಳಿಗೆ ಮಾಂಸ ಮಾರಾಟವಾಗುತ್ತಿದೆ, ಇದು ಸರ್ಕಾರಕ್ಕೆ ಅರ್ಥ ಆಗಬೇಕು, ಸಮಾಜದ ಸಾಮರಸ್ಯ ಹಾಳು ಮಾಡಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದರು.
ಮೇಕೆ ಕುರಿ ಸಾಕೋರು ಹಿಂದುಗಳು, ಅದರಲ್ಲೂ ಕುರುಬರು, ಗೊಲ್ಲರು ಹೆಚ್ಚು ಕುರಿ ಮೇಕೆ ಸಾಕುತ್ತಾರೆ, ಆದರೆ ಕೊಳ್ಳೋರು ಮುಸ್ಲಿಂಮರು, ನಾವು ಇನ್ನು ಮುಂದೆ ಕೊಳ್ಳಲ್ಲ ಅಂತ ಮುಸ್ಲಿಂಮರ ಹೇಳಿದ್ರೆ ಪರಿಸ್ಥಿತಿ ಏನು ಆಗುತ್ತದೆ ಎಂಬುದನ್ನು ಯೋಚಿಸಬೇಕಿದೆ, ರೈತರ ಜೀವನದ ಜೊತೆ ಚೆಲ್ಲಾಟ ಆಡಬಾರದು ಎಂದರು.
ಮುಸ್ಲಿಂಮರಿಗೆ ಎಲ್ಲಾ ಕಡೆ ನಿರ್ಬಂಧ ವಿಧಿಸಲು ಹೊರಟಿಎಉವುದು ಹಾಸ್ಯಾಸ್ಪದ, ಅಜೀಂ ಪ್ರೇಮ್ಜಿ ದೇಶದ ದೊಡ್ಡ ಉದ್ಯಮಿ, ಅವರ ಕಂಪನಿಯಲ್ಲಿ ಹಿಂದುಗಳು ಯಾಕೆ ಕೆಲಸ ಮಾಡುತ್ತಾರೆ, ಮುಸ್ಲಿಂ ವ್ಯಕ್ತಿಯ ಕಂಪೆನಿಗಳಲ್ಲಿ ಕೆಲಸ ಮಾಡುವುದು ಬಿಡಲಾಗುತ್ತಾ, ಅನಗತ್ಯ ಗೊಂದಲ ಸೃಷ್ಟಿಸಿ ಸಮಾಜವನ್ನು ಕೆಟ್ಟ ದಾರಿಯಲ್ಲಿ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಟಿಪ್ಪು ಸುಲ್ತಾನ್ ಬಗ್ಗೆ ಇಲ್ಲದ ಅಪಪ್ರಚಾರ ಮಾಡಲಾಗುತ್ತಿದೆ, ಟಿಪ್ಪು ಅಪ್ಪಟ ದೇಶ ಪ್ರೇಮಿ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಅವರ ಬಗ್ಗೆ ತಪ್ಪು ಸಂದೇಶ ಸಾರಲಾಗುತ್ತಿದೆ, ಬೆಂಗಳೂರಿನ ಟಿಪ್ಪು ಅರಮನೆ ಆವರಣದಲ್ಲಿ ವೆಂಕಟೇಶ್ವರ ಸ್ವಾಮಿ ದೇಗುಲ ಇದೆ, ಟಿಪ್ಪು ಹಿಂದು ವಿರೋಧಿಯಾಗಿದ್ದರೆ ಅಲ್ಲಿ ದೇವಸ್ಥಾನ ಯಾಕೆ ಕಟ್ಟಿಸುತ್ತಿದ್ದ ಎಂದು ಪ್ರಶ್ನಿಸಿದರು.
ದೇಶಕ್ಕೆ ರೇಷ್ಮೆ ತಂದವನು ಟಿಪ್ಪು ಮೊದಲಿಗ, ಸುಲ್ತಾನ್ ಕಡ್ಡಿ ಪರಿಚಯಿಸಿದ್ದು ಟಿಪ್ಪು, ಟಿಪ್ಪು ಯಾವತ್ತು ಹಿಂದು ಧರ್ಮವನ್ನು ದ್ವೇಷಿಸಲಿಲ್ಲ, ಅವನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ, ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿರುವವರು ದೇಶ ದ್ರೋಹಿಗಳು ಎಂದರು.
ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಧೈರ್ಯ ತೋರಿ ಕರಪತ್ರ ಹಂಚುವವರ ಬಗ್ಗೆ ಮಾತನಾಡಿ ಅವರ ಕೃತ್ಯ ಖಂಡಿಸಿದ್ದಾರೆ, ಅವರನ್ನು ಅಭಿನಂದಿಸುವೆ, ಆದರೆ ನಮ್ಮ ಕಾಂಗ್ರೆಸ್ ನವರು ಮಾತನಾಡಲಿಲ್ಲ, ಎಲ್ಲಾ ವಿವಾದ ಮಾಡಿಸುತ್ತಿರುವುದು ಬಿಜೆಪಿ ಸರ್ಕಾರ, ಚುನಾವಣೆ ಉದ್ದೇಶ ಇಟ್ಟುಕೊಂಡು ಬಿಜೆಪಿ ಈ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮುಖಂಡರಾದ ಕಲ್ಲಳ್ಳಿ ದೇವರಾಜï, ಗಂಗಣ್ಣ, ಶಶಿ ಹುಲಿಕುಂಟೆ ಮಠ್ ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!