ತುಮಕೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು ೨೦೫ ಜಾತಿಗಳು,ಅದಕ್ಕೆ ಸಂಬಂಧಿಸಿದ ೮೦೫ ಉಪಜಾತಿಗಳು ಸೇರಿ ಶೇ. ೬೦ರಷ್ಟು ಜನಸಂಖ್ಯೆಯನ್ನು ಈ ಸಮುದಾಯ ಹೊಂದಿದೆ. ಅಲ್ಲದೆ ರಾಜ್ಯದ ಬಹುತೇಕ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಮತದಾರರು ನಿರ್ಣಯಪಾತ್ರ ವಹಿಸುವುದರಿಂದ ಎಲ್ಲಾ ಓಬಿಸಿ ಮತದಾರರನ್ನು ಬಿಜೆಪಿ ಪಕ್ಷದತ್ತ ಸೆಳೆಯುವ ಉದ್ದೇಶದಿಂದ ರಾಜ್ಯದ ೩೧೨ ಮಂಡಳಗಳಲ್ಲಿಯೂ ಓಬಿಸಿ ಮೋರ್ಚಾ ಸಭೆ ನಡೆಸಿ, ಬಿಜೆಪಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದರು.
ನಗರದ ಕುಣಿಗಲ್ ರಸ್ತೆಯ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಮುಂಬರುವ ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯ ಉದ್ದೇಶದಿಂದ ಈ ಸಭೆ ಮಹತ್ವದ್ದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಓಬಿಸಿಗೆ ಹೆಚ್ಚಿನ ಅನುಕೂಲಗಳಾಗಿವೆ. ಇದುವರೆಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗಕ್ಕೆ ಇದ್ದ ಸಂವಿಧಾನಿಕ ಮಾನ್ಯತೆಯನ್ನು ಓಬಿಸಿ ಅಯೋಗಕ್ಕೂ ನೀಡಿದ್ದಾರೆ. ಅಲ್ಲದೆ ನೀಟ್ ಜೊತೆಗೆ ಶೈಕ್ಷಣಿಕವಾಗಿ ಶೇ.೨೧ರಷ್ಟು ಮೀಸಲಾತಿಯನ್ನು ಕಲ್ಪಿಸಿ, ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಿದೆ ಎಂದು ನೆ.ಲ.ನರೇಂದ್ರಬಾಬು ನುಡಿದರು.
ಸ್ವಾತಂತ್ರ ನಂತರದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರದ ಸಚಿವ ಸಂಪುಟದಲ್ಲಿ ೨೭ ರಿಗೆ ಹಿಂದುಳಿದ ವರ್ಗದ ಸಂಸದರನ್ನು ಸಚಿವರನ್ನಾಗಿಸಿರುವುದಲ್ಲದೆ, ಹಲವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಅಭಿವೃದ್ದಿ ನಿಗಮಗಳಿಲ್ಲದ ಹಿಂದುಳಿದ ಸಮುದಾಯಗಳ ಸಣ್ಣ ಜಾತಿಗಳನ್ನು ಗುರುತಿಸಿ, ಅವರಿಗೆ ಬಜೆಟ್ನಲ್ಲಿ ಅನುದಾನ ಮೀಸಲಿಡುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಓಬಿಸಿ ಸಮುದಾಯದವರಿಗೆ ನ್ಯಾಯಾಂಗ, ಕಾರ್ಯಾಂಗದಲ್ಲಿ ಉನ್ನತ ಹುದ್ದೆಗಳು ದೊರೆಯಬೇಕೆಂಬುದು ನಮ್ಮ ಕನಸಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ದಿಗೆ ಪೂರಕ ವಾತಾವರಣ ಸೃಷ್ಟಿ, ರಾಜಕೀಯವಾಗಿ ಇಲ್ಲದ ಜಾತಿಗಳ ಜನರನ್ನು ಎಂಎಲ್ಸಿ, ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಬಿಜೆಪಿ ಪಕ್ಷಕ್ಕೆ ಬಲ ತುಂಬಬೇಕಿದೆ.ಮುAಬರುವ ವಿಧಾನಸಭೆ ಚುನಾವಣೆಯಲ್ಲಿ ೧೫೦ ಸೀಟುಗಳನ್ನು ಗೆಲ್ಲಿಸಿ ,ಓಬಿಸಿ ಪರವಾದ ಕಾಯ್ದೆಗಳು ಜಾರಿಯಾಗುವಂತೆ ಮಾಡಲು ನಾವೆಲ್ಲರೂ ಪರಸ್ವರ ಕೈಜೋಡಿಸಿ ಬಿಜೆಪಿ ಪಕ್ಷದ ಪರ ಕೆಲಸ ಮಾಡಬೇಕೆಂದು ನೆ.ಲ.ನರೇಂದ್ರಬಾಬು ಕರೆ ನೀಡಿದರು.
ಶಾಸಕ ಜೋತಿಗಣೇಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಓಬಿಸಿ ಸಂಘಟನೆ ಬಲವಾಗಿದೆ. ೧೧ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಓಬಿಸಿ ಮತದಾರರು ನಿರ್ಣಾಯಕರಾಗಿದ್ದು, ಇವೆರಲ್ಲರನ್ನು ಸಂಘಟಿಸುವ ಕೆಲಸ ಆಗಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಶಂಕರಪ್ಪ ವಹಿಸಿದ್ದರು. ಸಂಯೋಜಕ ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ಗೋಕುಲ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಜಾತಿ-ವರ್ಗಗಳ ಆಯೋಗಕ್ಕಿದ್ದ ಮಾನ್ಯತೆ `ಓಬಿಸಿ’ಗಿದೆ
ಹಿಂದುಳಿದ ಸಣ್ಣ ಜಾತಿಗೂ ಸವಲತ್ತು ಸಿಗಲಿ: ನೆ.ಲ.ನರೇಂದ್ರಬಾಬು
Get real time updates directly on you device, subscribe now.
Prev Post
Next Post
Comments are closed.