ಪಾವಗಡ: ರೋಗಿಗಳ ಆಶಕ್ತರ ಅನಾಥರ ಸೇವೆ ಮಾಡುವುದು ದೇವರ ಪೂಜೆಗಿಂತಲೂ ದೊಡ್ಡದು ಎಂದು ಸಿದ್ದಗಂಗೆ ಶ್ರೀಸಿದ್ದಲಿಂಗೇಶ್ವರ ಸ್ವಾಮಿಗಳು ತಿಳಿಸಿದರು.
ಪಾವಗಡ ಎಸ್ಎಸ್ಕೆ ಸಮುದಾಯ ಭವನದಲ್ಲಿ ಆಸರೆ ಹೂಮ್ಯಾನುಟೇರಿಯನ್ ಸಂಸ್ಥೆ ಏರ್ಪಡಿಸಿದ್ದ ಉಚಿತ ಹೃದಯ ಆರೋಗ್ಯಶಿಬಿರ ಹಾಗೂ ವಿಕಲಚೇತನರಿಗೆ ಮೂರು ಚಕ್ರದ ಸೈಕಲ್ ವಿತರಣೆ ಹಾಗೂ ಕೊರೋನ ವಾರಿಯಸ್ ಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವೆ ಎಂಬುದು ಬದುಕಿನಲ್ಲಿ ಬರುವ ಸ್ಮರಣೀಯ ಕ್ಷಣ ಇದರ ನಿರಂತತೆಯನ್ನು ಉಳಿಸಿಕೊಳ್ಳುವುದು ಕಷ್ಠಕರ. ಅಸರೆ ಸಂಸ್ಥೆ ಆರೋಗ್ಯ ಸೇವೆಯನ್ನು ಮಾಡುವ ಹೆಬ್ಬಯಕೆಯಿಂದ ಕಾರ್ಯಕ್ರಮ ಪ್ರಾರಂಭಿಸಿದೆ ಈ ಭಾಗದ ಹೆಚ್ಚು ಜನ ರೋಗಿಗಳಿಗೆ ಆರೋಗ್ಯ ಸಿಗಲಿ ಎಂದು ಹಾರೈಸಿದರು.
ಇಂದಿನ ದಿನಗಳಲ್ಲಿ ಆರೋಗ್ಯವೇ ಮಹಾಭಾಗ್ಯ ಹಣ ಇದ್ದವ ಆರೋಗ್ಯ ವಂತನಲ್ಲಾ ಮೂರು ಹೊತ್ತು ಊಟಮಾಡಿ ಕೈತುಂಬ ಕೆಲಸ ಮಾಡಿ ನಿದ್ದೆ ಮಾಡುವವ ಹೆಚ್ಚು ಆರೋಗ್ಯವಂತ. ಸಿದ್ದಗಂಗೆ ಆಸ್ಪತ್ರೆಯಿಂದ ಕ್ರಿಟಿಕಲ್ ಕೇರ್ ಬಗ್ಗೆ ಅನೇಕ ಯೋಜನೆಗಳನ್ನು ಸೇವೆಗಳನ್ನು ಬಡಜನರ ಅರೋಗ್ಯಕ್ಕಾಗಿ
ವೇದಿಕೆಯಲ್ಲಿ ಇದ್ದ ಗಣ್ಯರು ಹೆಚ್ಚು ತೆಲುಗು ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದೆ ಕನ್ನಡ ಮಾತನಾಡಿ ಕನ್ನಡ ಉಳಿಸಿ ಎಂದು ಸಲಹೆ ನೀಡಿದ ಸ್ವಾಮಿಗಳು ಈ ಭಾಗದ ಜನತೆಗೆ ಹೆಚ್ಚು ಆರೋಗ್ಯ ಸೇವೆ ಹಾಗೂ ಅರಿವು ಮೂಡಿಸುವ ಕೆಲಸ ಹೆಚ್ಚು ಮಾಡಲು ಸೇವಾ ಸಂಸ್ಥೆಗಳು ಹೆಚ್ಚು ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಅಸರೆ ತಾಲ್ಲೂಕಿನ ಜನತೆಗೆ ಆರೋಗ್ಯದ ಆಸರೆಯಾಗಿ ನಿಲ್ಲಲಿ ಎಂದರು.
ಆಸರೆ ಸಂಸ್ಥೆಯ ಡಾ.ಲೋಕೇಶ್ ಚೌದರಿ ಮಾತನಾಡಿ, ಸಂಸ್ಥೆ ಕಳೆದ ೨ವರ್ಷಗಳಿಂದ ಕೊವಿಡ್ ಸಂಕಷ್ಟದ ಸಂದರ್ಭದಲ್ಲೂ ಹೆಚ್ಚು ಕೆಲಸ ಮಾಡಿದೆ ಇದೇ ತಾಲ್ಲೂಕಿನವರಾದ ನಮಗೆ ಎಲ್ಲರ ಪ್ರೀತಿಯ ಹಾರೈಕೆ ಆಶೀರ್ವಾದ ಬೇಕಿದೆ ಗುರುಗಳ ಆಶೀರ್ವಾದ ಇದ್ದರೆ ಏನ್ನಾದರೂ ಸಾಧಿಸುವಷ್ಠು ಶಕ್ತಿ ನಮಗೆ ಬರಲಿದೆ ಎಂದರು.
ಶಾಸಕ ವೆಂಕಟರಮಣಪ್ಪ ಮಾತನಾಡಿ, ಡಾ.ಲೋಕೇಶ್ ಚೌದರಿ ಅವರು ಪ್ರಾರಂಭಿಸಿರುವ ಆಸರೆ ಸಂಸ್ಥೆ ಹೆಚ್ಚು ಹೆಚ್ಚು ಆರೋಗ್ಯ ಸೇವೆಯನ್ನುಸಿಗುವಂತೆ ನೋಡಿಕೊಳ್ಳ ಬೇಕಿದೆ ಎಂದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಹಲವು ವರ್ಷಗಳಿಂದ ಆರೋಗ್ಯ, ಔಷದೋಪಚಾರ ಸೇವೆ ಮಾಡುತ್ತಿದ್ದು ಕೊರೊನ ವೇಳೆ ಗ್ರಾಮಗಳಿಗೆ ಆಕ್ಸಿಜನ್ ಕಿಟ್ ಹಾಗೂ ಔಷಧಿ ಹಾಗು ಇತರೆ ಸಲಕರಣೆ ನೀಡಿ ಹಲವು ಮಂದಿಗೆ ನೆರವಾಗಿರುವುದು ಶ್ಲಾಘನೀಯ ಎಂದರು.
ವಿಕಲ ಚೇತನರಿಗೆ ಟ್ರೈಸಿಕಲ್ ವಿತರಣೆ ಜೊತೆಗೆ ಕೊರೊನಾ ವಾರಿಯರ್ಸ್ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಪ್ರಮುಖ ಹೃದ್ರೋಗ ವೈದ್ಯ ನಿಪುಣ ಡಾ.ಭಾನುಪ್ರಸಾದ್, ಎಸ್ಎಸ್ ಕೆ ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಡಿಸಿಸಿಬ್ಯಾಂಕ್ ನಿರ್ದೇಶಕ ತಾಳೆಮರದಳ್ಳಿ ನರಸಿಂಹಯ್ಯ, ಬೆಂಗಳೂರು ದಕ್ಷಿಣ ಉಪವಿಭಾಧಿಕಾರಿ ರಘುನಂದನ್ ಉಪಸ್ಥಿತರಿದ್ದರು.
ಸಂಕಷ್ಟದಲ್ಲಿ ನೆರವಾದ `ಆಸರೆ ಸೇವೆ’ ಸ್ಮರಣೀಯ: ಸಿದ್ಧಲಿಂಗಶ್ರೀ
ಕೊರೊನಾ ವಾರಿಯರ್ಸ್ ಗೆ ಗೌರವ, ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ
Get real time updates directly on you device, subscribe now.
Prev Post
Comments are closed.