ಶಾಲಾವರಣದಲ್ಲಿ ಅಕ್ರಮ ಚಟುವಟಿಕೆ ತಪ್ಪಿಸಿ

420

Get real time updates directly on you device, subscribe now.

ಕುಣಿಗಲ್: ತಂಬಾಕು, ಮದ್ಯಪಾನ ಮುಕ್ತ ಪ್ರದೇಶವಾದ ಶಾಲೆಗಳ ಆವರಣದಲ್ಲಿ ನಿಯಮ ಬಾಹಿರ ಚಟುವಟಿಕೆ ನಡೆಯುತ್ತಿದ್ದು ಪುರಸಭೆ, ಅಬಕಾರಿ, ಪೊಲೀಸ್, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಿ ಶಾಲಾವರಣದಲ್ಲಿ ನಿಷೇಧಿತ ಚಟುವಟಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ನಿಖಿಲ್ ಸೈನ್ಯ ಸಮಿತಿ ತಾಲೂಕು ಅಧ್ಯಕ್ಷ ನಿಖಿಲ್ ಗೌಡ ಆಗ್ರಹಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಜಿಕೆಬಿಎಂಎಸ್ ಶಾಲೆ, ಇದಕ್ಕೆ ಹೊಂದಿಕೊಂಡಂತೆ ಇರುವ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಶಾಲಾ ಮೈದಾನ ಪ್ರದೇಶದಲ್ಲಿ ನಿಖಿಲ್ ಸೈನ್ಯ ಸಮಿತಿ ಪದಾಧಿಕಾರಿಗಳಿಂದ ಸ್ವಚ್ಛತೆ ಕಾರ್ಯ ಕೈಗೊಂಡು, ಶಾಲಾವರಣದಲ್ಲಿ ಮದ್ಯಾಪಾನಿಗಳು ಎಲ್ಲೆಂದರಲ್ಲಿ ಎಸೆದಿದ್ದ ಮದ್ಯದ ಬಾಟಲಿ, ಇತರೆ ನಿಷಿದ್ದ ವಸ್ತುಗಳ ಸಂಗ್ರಹಿಸಿ ಸ್ವಚ್ಛಗೊಳಿಸಿದ, ಪುರಸಭೆ ಸಹಾಯದ ಮೂಲಕ ಎರಡು ಮೂಟೆ ಮದ್ಯಪಾನದ ಬಾಟಲಿ ಸಾಗಿಸಿ, ಸಂಬಂಧ ಇಲಾಖಾಧಿಕಾರಿಗಳಿಗೆ ಮನವಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾವರಣದ ಸುತ್ತಲೂ ನೂರು ಮೀಟರ್ ತಂಬಾಕು ಮುಕ್ತ ಪ್ರದೇಶ ಎಂದು ಘೋಷಣೆಯಾಗಿದೆ, ಈ ಪ್ರದೇಶದಲ್ಲಿ ತಂಬಾಕು ಸೇರಿದಂತೆ ಮಾದಕ ವಸ್ತುಗಳ ಬಳಕೆ ಅವುಗಳಿಗೆ ಸಂಬಂಧಿಸಿದಂತೆ ಯಾವುದೆ ಚಟುವಟಿಕೆ ನಡೆಸಬಾರದು. ಈ ನಿಟ್ಟಿನಲ್ಲಿ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯ, ಉಚ್ಛನ್ಯಾಯಾಲಯಗಳು ಹಲವು ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಕೆಲ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲೆಗಳ ಆವರಣದಲ್ಲಿ ನಿಷೇಧಿತ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿರುವುದು ಖೇದಕರವಾಗಿದೆ, ಎಳೆಯ ವಯಸ್ಸಿನ ಮಕ್ಕಳ ಮನಸಿನ ಮೇಲೆ ಈ ವಸ್ತುಗಳು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಶಾಲಾವರಣದಲ್ಲಿ ಇವುಗಳ ಬಳಕೆ ನಿಷೇಧಿಸಲು ಕ್ರಮ ಕೈಗೊಳ್ಳಬೇಕಿದೆ, ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಸಂಜೆ ವೇಳೆ ಗಸ್ತು ನಡೆಸಿ ಶಾಲಾವರಣದಲ್ಲಿ ನಿಷೇಧಿತ ಚಟುವಟಿಕೆ ನಡೆಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು, ಪುರಸಭೆಯವರು ದಿನಾಲೂ ಸ್ವಚ್ಛತೆ ಕಾಪಾಡುವ ಹಿನ್ನೆಲೆಯಲ್ಲಿ ಶಾಲಾವರಣದ ಸ್ವಚ್ಛತೆ ಕಾಪಾಡಬೇಕು, ಶಿಕ್ಷಣ ಇಲಾಖಾಧಿಕಾರಿಗಳು ಶಾಲಾ ಪ್ರದೇಶದ ರಕ್ಷಣೆಗೆ ಸೂಕ್ತ ಕ್ರಮ ಜರುಗಿಸಿಬೇಕೆಂದರು.
ಸ್ವಚ್ಛತೆ ಕಾರ್ಯದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಂಜಿತ್, ಹರೀಶ, ನರಸಿಂಹಮೂರ್ತಿ, ಸಂಜಯ, ವಿವೇಕ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!