ಗುಬ್ಬಿ: ನಾಡಿನಲ್ಲಿ ಲಕ್ಷಾಂತರ ಸ್ವಾಮೀಜಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸೇವೆ ಮಾಡುತ್ತಿದ್ದಾರೆ, ಅಂಥವರನ್ನು ಗೌರವಿಸೋಣ, ಆದರೆ ಕೆಲವು ಚಿಲ್ಲರೆ ಸ್ವಾಮಿಗಳು ಸರಕಾರ ಕೊಡುವ ಹಣಕ್ಕೆ ಹಿಂದೆ ಬಿದ್ದು ಶಾಂತಿ ಕದಕುವ ಕೆಲಸ ಮಾಡುತ್ತಿದ್ದಾರೆ, ಇಂಥವರ ವಿರುದ್ಧ ಸರಕಾರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ಜೈನಬಸದಿ ಬೀದಿಯ ೨೬ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸ್ವಾಮೀಜಿ ಆಗಿರುವವರಿಗೆ ತನ್ನದೆ ಆದಂತಹ ವ್ಯಕ್ತಿತ್ವ ಗೌರವ ಧಾರ್ಮಿಕ ಭಾವನೆಗಳು ಇರಬೇಕು, ಆದರೆ ಕಾಳಿ ಅಂತಹ ಸ್ವಾಮೀಜಿಗಳು ಇಲ್ಲಸಲ್ಲದ ಮಾತುಗಳನ್ನು ಹೇಳುವ ಮೂಲಕ ಸ್ವಾಮೀಜಿಗಳ ಘನತೆಯನ್ನೇ ಹಾಳು ಮಾಡುತ್ತಿದ್ದಾರೆ, ಶಾಂತಿ ಸಾಮರಸ್ಯ ಕದಡುವಂತಹ ಸ್ವಾಮೀಜಿಗಳಿಗೆ ಅದಕ್ಕೆಲ್ಲ ಈ ಸ್ವಾಮೀಜಿ ಪ್ರತಿಕ್ರಿಯೆ ಕೊಡುತ್ತಾರೆ ಎಂದರೆ ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ ಅವರು ರಾಜ್ಯದಲ್ಲಿ ಕೆಲವು ಚಿಲ್ಲರೆ ಸ್ವಾಮೀಜಿಗಳು ಶಾಂತಿ ಕದಡುವಂತಹ ಹೇಳಿಕೆ ನೀಡಿ ಸಮಾಜದಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಿರುವುದನ್ನು ಯಾರೂ ಸಹಿಸುವುದಿಲ್ಲ, ಇದು ಹೀಗೆ ಮುಂದುವರಿದರೆ ಸಮಾಜ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಂತಿ ಕದಡುವ ಕೆಲಸ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ, ನಂತರ ಮುಖ್ಯಮಂತ್ರಿಯವರು ಸಹ ಈ ಮಾತನ್ನು ಆಡಿದ್ದಾರೆ, ಇದನ್ನು ಸ್ವಾಗತಿಸುತ್ತೇನೆ, ಯಡಿಯೂರಪ್ಪನವರು ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದು ಹೋರಾಟದಿಂದ ಪಕ್ಷವನ್ನು ಕಟ್ಟಿದ್ದಾರೆ, ಇಂತಹ ಲೀಡರ್ ಇರಬೇಕು ಹೊರತು ಸಾಮರಸ್ಯ ಕೆಡಿಸುವಂತಹ ಚಿಲ್ಲರೆ ಸ್ವಾಮೀಜಿಗಳಲ್ಲ ಯಡಿಯೂರಪ್ಪನವರೇ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ ಎಂದ ಮೇಲೆ ಬಾಲ ಬಿಚ್ಚಿ ಕುಣಿಯುತ್ತಿರುವ ಸ್ವಾಮೀಜಿಗಳು ಸುಮ್ಮನಾಗುತ್ತಾರೆ, ಸರಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೊರೋನಾ ಅಲೆ ಮತ್ತೊಮ್ಮೆ ಬರುತ್ತಿದೆ ಎಂದು ಮಾಹಿತಿಗಳು ಬರುತ್ತಿವೆ, ಹಾಗಾಗಿ ಅತ್ಯಂತ ಹೆಚ್ಚು ಜನರು ಗುಂಪು ಕೂಡುತ್ತಿದ್ದಾರೆ, ಮಾಸ್ಕ್ ಬಿಟ್ಟಿದ್ದಾರೆ, ಒಂದಷ್ಟು ಸುರಕ್ಷತಾ ಕ್ರಮ ಅನುಸರಿಸಿದರೆ ಮಾತ್ರ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಭಾಗ್ಯಮ್ಮ, ತಿಮ್ಮಪ್ಪಸ್ವಾಮಿ, ಹಸೀನಾತಾಜ್, ಪುರುಷೋತ್ತಮ, ಅಭಿವೃದ್ಧಿ ಅಧಿಕಾರಿ ಉಮೇಶ್, ಕಂದಾಯ ಅಧಿಕಾರಿ ನಾರಾಯಣ್, ಮುಖಂಡರಾದ ಮುಕುಂದ್ರಾಜ್, ಚನ್ನಿಗಪ್ಪ, ಮಲ್ಲೇಶ್ ಬಸವರಾಜು ಜೈನ ಬಸದಿಯ ಜೈನ ಬಸದಿಯ ಕಾರ್ಯದರ್ಶಿ ಸತ್ಯೇಂದ್ರ ಕುಮಾರ್, ಮಹಾವೀರ ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಶಾಂತಿ ಕದಡುವ ಸ್ವಾಮೀಜಿಗಳ ವಿರುದ್ಧ ಕ್ರಮ ಕೈಗೊಳ್ಳಿ
Get real time updates directly on you device, subscribe now.
Prev Post
Next Post
Comments are closed.