ಮಹಿಳೆಯರ ಮೇಲಿನ ಶೋಷಣೆ ಸಲ್ಲದು: ಪುಷ್ಪಲತಾ

178

Get real time updates directly on you device, subscribe now.

ತುಮಕೂರು: ಲೈಂಗಿಕ ವೃತ್ತಿ ನಿರತ ಮಹಿಳೆಯರನ್ನು ಉದ್ಯಮಶೀಲರನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಇದೊಂದು ಮಾದರಿ ಯೋಜನೆಯಾಗಲಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಯುಎನ್ಡಿಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸಾಯಿ ಗ್ರಾಮ ಮತ್ತು ಮದ್ರಾಸ್ ಕೆ ಸಂಸ್ಥೆಯ ಸಹಯೋಗದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಕೋಕೋಪಿಟ್ ಉತ್ಪಾದನಾ ಘಟಕಗಳ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ವಿವಿಧ ಸಂಸ್ಥೆಗಳ ಸಹಕಾರದ ಜೊತೆಗೆ, ಸಿಡ್ಬಿ ಸೇರಿ, ಜಿಲ್ಲೆಯ ಆಸಕ್ತ ಲೈಂಗಿಕ ಕಾರ್ಯಕರ್ತರು ಆರಂಭಿಸಲು ಹೊರಟಿರುವ ಕೋಕೋಪಿಟ್ ಉತ್ಪಾದನಾ ಘಟಕಕ್ಕೆ ಅಗತ್ಯವಿರುವ ತಾಂತ್ರಿಕ ಮತ್ತು ಹಣಕಾಸಿನ ನೆರವು ನೀಡಲು ಮುಂದೆ ಬಂದಿದೆ, ಇಲ್ಲಿ ಉತ್ಪಾದನೆಯಾಗುವ ವಸ್ತುಗಳ ಮಾರುಕಟ್ಟೆಯ ಜವಾಬ್ದಾರಿಯನ್ನು ಸಾಯಿ ಗ್ರಾಮ ಸ್ವಯಂ ಸೇವಾ ಸಂಸ್ಥೆ ವಹಿಸಿಕೊಂಡಿದ್ದು, ಇದು ಒಂದು ಯಶಸ್ವಿ ಕಾರ್ಯಕ್ರಮವಾಗಲಿದೆ ಎಂದರು.
ರಾಜ್ಯದಲ್ಲಿ ಯಾವುದೇ ಸ್ತರದ ಮಹಿಳೆಯರು ಶೋಷಣೆಗೆ ಒಳಗಾಗುವುದನ್ನು ಮಹಿಳಾ ಅಭಿವೃದ್ಧಿ ನಿಗಮ ಒಪ್ಪುವುದಿಲ್ಲ. ಹಾಗಾಗಿ ಪ್ರತಿನಿತ್ಯ ಶೋಷಣೆಗೆ ಒಳಗಾಗುವ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ, ಉದ್ಯಮಶೀಲರನ್ನಾಗಿಸಿ ಆರ್ಥಿಕವಾಗಿ ಸದೃಢರನ್ನಾಗಿಸುವ ಕೆಲಸಕ್ಕೆ ಮುಂದಾಗಿದ್ದೇವೆ, ಇಲ್ಲಿ ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಇಂತಹ ವರ್ಗದ ಮಹಿಳೆಯರನ್ನು ಗುರುತಿಸಿ, ಅವರಿಗೆ ಪುನರ್ ವಸತಿ ಕಲ್ಪಿಸುವ ಕೆಲಸವನ್ನು ಮಹಿಳಾ ಅಭಿವೃದ್ಧಿ ನಿಗಮ ಮಾಡಲಿದೆ ಎಂದು ಪುಷ್ಪಲತಾ ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮುಖ್ಯ ವ್ಯವಸ್ಥಾಪಲಿ ಎಂ.ಪಿ.ಇಂದಿರಾ ಮಾತನಾಡಿ, ತುಮಕೂರು ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರನ್ನು ಸರ್ವೆ ನಡೆಸಿ, ಅವರಲ್ಲಿ ತಾವು ಮಾಡುತ್ತಿರುವ ವೃತ್ತಿ ಬಿಟ್ಟು, ಉದ್ಯಮಶೀಲರಾಗಲು ಉತ್ಸುಕತೆ ತೋರಿದ ಸುಮಾರು ೧೦ ಜನರನ್ನು ಮದ್ರಾಸ್-ಕೆ ಸಂಸ್ಥೆಯೊAದಿಗೆ ಸೇರಿ ಗುರುತಿಸಿ, ಅವರೊಂದಿಗೆ ಕಲ್ಪತರು ನಾಡು ಎಂದು ಕರೆಯುವ ತಿಪಟೂರಿನಲ್ಲಿ ಒಂದು ಪೂರ್ವ ಭಾವಿ ಸಬೆ ನಡೆಸಿ ಸ್ಥಳೀಯವಾಗಿ ದೊರೆಯುವ ತೆಂಗಿನ ಕಾಯಿ ಸಿಪ್ಪೆಯನ್ನೇ ಬಳಸಿಕೊಂಡು ಕೋಕೋಪಿಟ್ ತಯಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಆಸಕ್ತರನ್ನು ನಾಲ್ಕು ದಿನಗಳ ಕಾಲ ಕೋಯಮತ್ತೂರಿನಲ್ಲಿ ತೆಂಗಿನ ಸಿಪ್ಪೆಯ ಹುಡಿ ತಯಾರಿಸುವ ಬಗ್ಗೆ ಅಗತ್ಯ ತರಬೇತಿ ನೀಡಿ, ಮಿಷನರಿಗಳಲ್ಲಿ ಕೆಲಸ ಮಾಡುವ ಕುಶಲತೆ ಕಲಿಸಿ, ನಂತರ ಅವರಿಗೆ ಸಿಡ್ಬಿ ಸಹಾಯದಲ್ಲಿ ಯಂತ್ರಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮದ್ರಾಸ್-ಕೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಹುಲಿಗೇಶ್ ಮಾತನಾಡಿ, ಮದ್ರಾಸ್-ಕೆ ಸಂಸ್ಥೆ ಕಳೆದ ೨೦ ವರ್ಷಗಳಿಂದ ಮಹಿಳೆಯರ ಸಬಲೀಕರಣಕ್ಕೆ ದುಡಿಯುತ್ತಾ ಬಂದಿದ್ದು, ತುಮಕೂರು ಜಿಲ್ಲೆಯಲ್ಲಿ ಸುಮಾರು ೧೭೪೭ ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ, ಅವರಲ್ಲಿ ಆಸಕ್ತರಿರುವ ತಲಾ ಹತ್ತು ಜನರ ೧೦ ಗುಂಪುಗಳನ್ನು ಮಾಡಿ, ಅವರಿಗೆ ಅಗತ್ಯ ತರಬೇತಿ ನೀಡಿ ಕೋಕೋಪಿಟ್ ತಯಾರಿಸುವ ಉದ್ಯಮ ಸ್ಥಾಪಿಸಿ ಕೊಡುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ, ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ, ಸಾಯಿ ಗ್ರಾಮ ಸ್ವಯಂ ಸೇವಾ ಸಂಸ್ಥೆ ನಮ್ಮ ಜೊತೆ ಕೈಜೋಡಿಸಿವೆ, ಶೀಘ್ರದಲ್ಲಿಯೇ ಸ್ಥಳೀಯವಾಗಿ ದೊರೆಯುವ ತೆಂಗಿನ ಕಾಯಿ ಸಿಪ್ಪೆ ಬಳಸಿಕೊಂಡು ಕೋಕೋಪಿಟ್ ಉತ್ಪಾದನಾ ಘಟಕಗಳನ್ನು ಆರಂಭಿಸಿ, ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರನ್ನು ಉದ್ಯಮಶೀಲರನ್ನಾಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಡ್ಬಿಯ ಪ್ರಾದೇಶಿಕ ನಿರ್ದೇಶಕ ಸಾತ್ಯೇಕ ರಸ್ಟೋಗಿ, ಜನರಲ್ ಮ್ಯಾನೇಜರ್ ಚಂದ್ರಮೌಳಿ, ಹಿರಿಯ ವ್ಯವಸ್ಥಾಪಕಿ ಪದ್ಮಜಾ, ಸಾಯಿ ಗ್ರಾಮ ಚಾರಿಟಬಲ್ ಟ್ರಸ್ಟ್ನ ಪದ್ಮಕಿರಣ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಮೋಹನಕುಮಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಜಾಹ್ನವಿ ಇದ್ದರು. ಒಂದು ನೂರಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!