ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

330

Get real time updates directly on you device, subscribe now.

ಕುಣಿಗಲ್: ಗ್ರಾಮದ ಕೆರೆಯ ಒತ್ತುವರಿ ತೆರವುಗೊಳಿಸುವಂತೆ ಹಲವಾರು ಬಾರಿ ಮನವಿ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸೊಂದಲಗೆರೆ ಗ್ರಾಮಸ್ಥರು ಕೆರೆ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡ ಸೊಂದಲಗೆರೆ ಗ್ರಾಮಸ್ಥರು, ೧೯೭೮ರಲ್ಲಿ ಸೊಂದಲಗೆರೆ ಗ್ರಾಮದಲ್ಲಿ ಕಾವೇಮ್ಮನಕಟ್ಟೆ ಕೆರೆ ಅಭಿವೃದ್ಧಿಗಾಗಿ ಕೆಲ ಸರ್ವೇ ನಂಬರ್ ಗಳಲ್ಲಿ ಭೂಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಿ ಕೆರೆ ನಿರ್ಮಾಣ ಮಾಡಲಾಗಿದೆ, ಸದರಿ ಕೆರೆಯು ೧೪೮ಎಕರೆ ವಿಸ್ತೀರ್ಣ ಇದೆ, ಕೆರೆಯಲ್ಲಿ ನೀರು ತುಂಬಿಕೊಂಡು ಗ್ರಾಮಸ್ಥರಿಗೆ ಅನುಕೂಲವಾಗಿತ್ತು, ಇದೀಗ ಕೆರೆಯ ಹೂಳು ತೆಗೆಯಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೨೦ಲಕ್ಷ ರೂ. ವೆಚ್ಚದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವಾಗ ಬೇರೊಂದು ಗ್ರಾಮದ ಒಬ್ಬ ವ್ಯಕ್ತಿ ಕೆರೆ ಜಮೀನನ್ನು ಅತಿಕ್ರಮಿಸಿ ಹೂಳು ತೆಗೆಯಲು ಬಿಡುತ್ತಿಲ್ಲ, ಈಗಾಗಲೆ ಮಳೆಗಾಲ ಪ್ರಾರಂಭವಾಗಿರುವುದರಿಂದ ಹೂಳು ತೆಗೆದಲ್ಲಿ ನೀರು ಸಂಗ್ರಹಣೆ ಪ್ರಮಾಣ ಹೆಚ್ಚಳಗೊಂಡು ನಮ್ಮ ಗ್ರಾಮದ ಜನತೆಗೆ ಅನುಕೂಲವಾಗಲಿದೆ, ಕೆರೆ ಒತ್ತುವರಿ ತೆರವುಗೊಳಿಸುವಂತೆ ಈಗಾಗಲೆ ಕಂದಾಯ ಇಲಾಖಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದ ಮುಖಂಡರಾದ ಶ್ರೀನಿವಾಸ ಇತರರು, ಸದರಿ ಕೆರೆಗೆ ಸಂಬಂಧಿಸಿದ ಸಂಪೂರ್ಣ ಕಡತವನ್ನು ಉಪ ವಿಭಾಗಾಧಿಕಾರಿಯವರಿಂದ ತಹಶೀಲ್ದಾರ್ ಕಚೇರಿಗೆ ಬಂದಿದ್ದರೂ ಇನ್ನು ಯಾವುದೇ ಕ್ರಮವಾಗದೆ ಇರುವುದು ಖಂಡನೀಯ, ಇನ್ನಾದರೂ ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮ ವಹಿಸಿ ಒತ್ತುವರಿ ತೆರವುಗೊಳಿಸಿ ಹೂಳು ತೆಗೆಯುವ ಕಾಮಗಾರಿಗೆ ಸಹಕಾರ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು. ಜಿಪಂ ಮಾಜಿ ಅಧ್ಯಕ್ಷ ಡಾ.ರವಿಬಾಬು ಸಹ ಗ್ರಾಮಸ್ಥರ ಹೋರಾಟ ಬೆಂಬಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಮುಖರಾದ ಹೊನ್ನಚಾರ್, ವಿನಯ್, ದಯಾನಂದ, ರಘು, ವೆಂಕಟೇಶ, ಸುರೇಶ, ಗಂಗಾಧರ, ಸುರೇಶ, ವೆಂಕಟೇಶ, ಶ್ರೀನಿವಾಸ, ದಿನೇಶ, ನಿತಿನ್, ನರಸಿಂಹಯ್ಯ, ದೇವರಾಜು, ರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!