ಪ್ರವಾಸಿ ಮಂದಿರದ ಸರದಾರ ಈ ಶಂಭುಕುಮಾರ!

ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ವಿರುದ್ಧ ಎಫ್.ಐ.ಆರ್

596

Get real time updates directly on you device, subscribe now.


ತುಮಕೂರು: ಇಲ್ಲಿನ ಲೋಕೋಪಯೋಗಿ ಉಪವಿಭಾಗದ ಪ್ರಭಾರ ಸಹಾಯಕ ಇಂಜಿನಿಯರ್ ಶಂಭು ಕುಮಾರ್ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪದ ಮೇಲೆ ಕೇಸು ದಾಖಲಾಗಿದೆ.

ಈ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿ ಶಂಭು ಕುಮಾರ್, ಎರಡನೇ ಆರೋಪಿಯಾಗಿ ಅಶ್ವಿನಿ, ಮೂರನೇ ಆರೋಪಿಯಾಗಿ ಲಕ್ಷ್ಮೀ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅನೈತಿಕ ಸಂಬAಧವೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ, ಅಶ್ವಿನಿ ಪತಿಯ ಮೇಲೆ ಈ ಶಂಭುಕುಮಾರ್ ಕಾರು ಹತ್ತಿಸಲು ಹೋಗಿದ್ದಾನೆ, ಅಲ್ಲದೆ ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ, ಈ ಹಿನ್ನೆಲೆಯಲ್ಲಿ ಅಶ್ವಿನಿ ಪತಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಯಾರು ಈ ಶಂಭು ಕುಮಾರ್?
ಶಂಭು ಕುಮಾರ್ ಲೋಕೋಪಯೋಗಿ ಉಪವಿಭಾಗದ ಪ್ರಭಾರ ಸಹಾಯಕ ಇಂಜಿನಿಯರ್, ಈತ ಇಂಜಿನಿಯರ್ ಕೆಲಸ ಒಂದನ್ನು ಬಿಟ್ಟು ಮಿಕ್ಕ ಎಲ್ಲಾ ಕೆಲಸವನ್ನು ಮಾಡಿದ್ದಾನೆ, ಶಿವಮೊಗ್ಗ ಕಡೆಯನು ಎನ್ನಲಾದ ಶಂಭುಕುಮಾರ್ ತುಮಕೂರಿಗೆ ವಕ್ಕರಿಸಿಕೊಂಡು ಇಲ್ಲಿ ಮಾಡಬಾರದ ಕೆಲಸವನ್ನೆಲ್ಲಾ ಮಾಡಿದ್ದಾನೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಹಲವು ಇಂಜಿನಿಯರ್ಗಳು.
ಈ ಶಂಭುಕುಮಾರ್ ಗೆ ತುಮಕೂರಿನ ಪ್ರವಾಸಿ ಮಂದಿರ ನೋಡಿಕೊಳ್ಳುವ ಜವಾಬ್ದಾರಿ ಬೇರೆ ನೀಡಲಾಗಿದೆ, ಇಲ್ಲಿ ಅತಿಥಿಗಳಿಗೆ ರೂಮು ನೀಡಿದ್ದೇ ಕಮ್ಮಿ, ಬದಲಾಗಿ ಈತನಿಗೆ ಬೇಕಾದವರಿಗೆ ರೂಮುಗಳನ್ನು ನೀಡಿ ಮಜಾ ಮಾಡಲು ಅವಕಾಶ ಕಲ್ಪಿಸಿದ್ದೇ ಹೆಚ್ಚು, ಅಷ್ಟೇ ಏಕೆ ಸ್ವತಃ ತಾನೇ ರಾತ್ರಿ ವೇಳೆ ಹೆಣ್ಣು ಮಕ್ಕಳನ್ನು ಇಲ್ಲಿಗೆ ಕರೆಸಿಕೊಂಡು ಬಂದು ಮಗ್ಗುಲು ಬದಲಿಸುತ್ತಾನೆ ಎಂಬುದು ಈತನ ಗೆಳೆಯರೇ ಹೇಳುವ ನಗ್ನ ಸತ್ಯ, ಈತ ಲೋಕೋಪಯೋಗಿ ಇಲಾಖೆಯಲ್ಲಿ ಅದೇನು ಕೆಲಸ ಮಾಡಿದ್ದಾನೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ, ಆದರೆ ಈತನ ಲೀಲೆಗಳು ಮಾತ್ರ ಅಪಾರ, ಈತನ ವಿರುದ್ಧ ಯಾರಾದ್ರು ಮಾತನಾಡಿದ್ರೆ ನನಗೆ ಎಂಎಲ್ಎ, ಎಂಪಿ ಗೊತ್ತು, ವಿಜಯೇಂದ್ರ, ಯಡಿಯೂರಪ್ಪಗೆ ಈಗಲೇ ಫೋನ್ ಮಾಡ್ತೀನಿ ಎಂದು ಎದುರಿಸುತ್ತಾ ತಾನು ಮಾಡಿದ್ದೇ ಕೆಲಸ, ಹೋಗಿದ್ದೇ ದಾರಿ ಎಂಬAತೆ ವರ್ತಿಸುವ ಈ ಶಂಭುಕುಮಾರ್ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ, ಈ ಮಹಾನುಭಾವ ಇಂಜಿನಿಯರ್ಗೆ ಕಡಿವಾಣ ಹಾಕಬೇಕು, ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು, ಇಲ್ಲವಾದಲ್ಲಿ ಶಂಭುಕುಮಾರ್ ಎಂಬ ಮಹಾಶಯ ಲೋಕೋಪಯೋಗಿ ಇಲಾಖೆಗೆ ಮಸಿ ಬಳಿಯುತ್ತಾನೆ, ಪ್ರವಾಸಿ ಮಂದಿರವನ್ನು ಹೊಲಸು ಮಾಡುತ್ತಾನೆ, ಹೀಗಾಗುವ ಮುನ್ನಾ ಈತನ ಆಟಾಟೋಪಕ್ಕೆ ಕಡಿವಾಣ ಹಾಕಬೇಕು ಎಂಬುದು ಹಲವು ಇಂಜಿನಿಯರ್ಗಳು ಮತ್ತು ನಾಗರಿಕರ ಒತ್ತಾಯವಾಗಿದೆ.

ಕಳೆದ ಒಂದುವರೆ ವರ್ಷದಿಂದ ಲೋಕೋಪಯೋಗಿ ಉಪ ವಿಭಾಗದಲ್ಲಿ ಪ್ರಭಾರ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೇ ವಿಭಾಗದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ ಜೊತೆಗೆ ಸ್ನೇಹ ಬೆಳೆಸಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ, ಆಕೆಗೆ ಬೆದರಿಕೆ ಹಾಕಿ ಬಲವಂತವಾಗಿ ಅನೈತಿಕ ಸಂಬಂಧ ಹೊಂದಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಅಶ್ವಿನಿ ಪತಿಗೆ ತಿಳಿದು ಈ ಹಿಂದೆ ಪಿಡಬ್ಲೂöಡಿಯಡಿ ಕಚೇರಿಗೆ ಬಂದು ಎಇಇ ಶಂಭುಗೆ ವಾರ್ನಿಂಗ್ ನೀಡಿ ತನ್ನ ಮಡದಿಗೆ ಕಿರುಕುಳ ನೀಡದಂತೆ ಎಚ್ಚರಿಸಿದ್ದರು ಎನ್ನಲಾಗಿದೆ. ಕೆಲದಿನಗಳ ನಂತರ ಆತನ ವರ್ತನೆ ಮಿತಿ ಮೀರಿ ಅಶ್ವಿನಿ ಜೊತೆಗೆ ಅಕ್ರಮ ಸಂಬಂಧ ಹೊಂದಲು ಮತ್ತೆ ಮತ್ತೆ ಯತ್ನಿಸುತ್ತಿದ್ದ ಎನ್ನಲಾಗಿದೆ.
ಬೆಂಗಳೂರಿನ ಅಶ್ವಿನಿ ನಿವಾಸದ ಮುಂದೆ ಏಕಾಏಕಿ ಶಂಭು ಕಾಣಿಸಿಕೊಂಡಿದ್ದು ಒಮ್ಮೆ ಸಿಕ್ಕಿಬಿದ್ದಾಗ ರೊಚ್ಚಿಗೆದ್ದ ಪತಿ ಶಂಭು ಮೇಲೆ ಎರಗಿದಾಗ, ಅಶ್ವಿನಿ, ಲಕ್ಷ್ಮೀ ತಡೆಯಲು ಮುಂದಾದರು ಎನ್ನಲಾಗಿದೆ. ಅಶ್ವಿನಿ ಪತಿ ಮೇಲೆ ಶಂಭು ಕಾರು ಚಲಾಯಿಸಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಅಶ್ವಿನಿ ಪತಿ ದೂರು ನೀಡಿದ್ದಾರೆ.
ಎಇಇ ಶಂಭುರಷ್ಟ ಅಧಿಕಾರಿಯಾಗಿದ್ದು, ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅನೇಕ ಮಹಿಳೆಯರಿಗೆ ಹಣದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ, ಬೆದರಿಕೆ ಹಾಕಿ ಆಗಾಗ್ಗೆ ಹಿಂಸಿಸುತ್ತಿದ್ದ ಎನ್ನಲಾಗಿದೆ, ಅಶ್ವಿನಿ ಜೊತೆಗೆ ಶಂಭು ಅನೈತಿಕ ಸಂಬAಧ ಹೊಂದಿದ್ದನಾ? ಅಸಲಿ ವಿಚಾರ ಏನು? ಕೊಲೆ ಯತ್ನದ ಹಿಂದೆ ಯಾವ ಮಸಲತ್ತು ಅಡಗಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

Get real time updates directly on you device, subscribe now.

Comments are closed.

error: Content is protected !!