ತುಮಕೂರು: ಪ್ರಕರಣವೊಂದರಲ್ಲಿ ನ್ಯಾಯ ಕೊಡಿಸದೆ ಕಿರುಕುಳ ನೀಡುತ್ತಿದ್ದಾರೆ ಎಂದು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್ ವಿರುದ್ಧ ದೂರಿರುವ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿ ಎಸ್ಪಿ ವಿರುದ್ಧ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಲಕ್ಷ್ಮಿಕಾಂತ್ ಅಲಿಯಾಸ್ ಚಂದು ಎಂಬಾತ ತಾನು ಡಾ.ಜಿ.ಪರಮೇಶ್ವರ್ ಅಳಿಯ ಎಂದು ಹೇಳಿಕೊಂಡು ಪೊಲೀಸರ ಬಳಿಯೇ ರೋಲ್ ಕಾಲ್ ಇವನ ಕಸುಬಾಗಿದೆ, ಪೊಲೀಸರಿಗೆ ವರ್ಗಾವಣೆ ಮಾಡ್ಸಿ ಕೊಡ್ತೇನೆ ಎಂದು ಸುಳ್ಳು ಹೇಳಿಕೊಂಡು ವಂಚಿಸುವುದೇ ಇವನ ಹಣ ಮಾಡುವ ದಂಧೆಯಾಗಿದೆ, ಯಾರದ್ದೋ ಜಮೀನಿಗೆ ನಕಲಿ ವಾರಸುದಾರರನ್ನು ಸೃಷ್ಟಿಸಿ, ಇನ್ಯಾರಿಗೋ ಜಮೀನು ಮಾರಾಟ ಮಾಡಿ ಹಣ ಪಡೆದಿದ್ದಾನೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು, ಹಾಗೇ ನಕಲಿ ವಾರಸುದಾರರನ್ನ ಬಂಧಿಸಲಾಗಿತ್ತು, ಈ ವೇಳೆ ಚಂದು ತಲೆ ಮರೆಸಿಕೊಂಡು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಮತ್ತೆ ಕಾಣಿಸಿಕೊಂಡ ಎನ್ನಲಾಗಿದೆ.
ಇಷ್ಟೇ ಅಲ್ಲದೆ ಸುಮಿಯಬಾನು ಎಂಬ ಮಹಿಳೆ ಪರಿಚಯಿಸಿಕೊಂಡು ಸಹಾಯ ಮಾಡುವ ನೆಪದಲ್ಲಿ ತಾನು ವಿಶೇಷ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಈ ಸಂಬಂಧ ಆಗಸ್ಟ್ 4, 2021 ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ಕೂಡ ದಾಖಲಾಗಿತ್ತು.
ಸ್ವಲ್ಪ ದಿನಗಳ ನಂತರ ಇದೇ ಮಹಿಳೆಗೆ ಮತ್ತೆ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ, ಏಪ್ರಿಲ್ 13, 2022 ರಂದು ಈತನ ವಿರುದ್ಧ ಮತ್ತೆ ಕೇಸ್ ದಾಖಲಾಯಿತು, ಪ್ರಕರಣ ದಾಖಲಾದ ನಂತರ ತುಮಕೂರು ಎಸ್ಪಿ ಸೇರಿದಂತೆ ಇತರರ ವಿರುದ್ಧ ವಿಡಿಯೋ ಹೇಳಿಕೆ ಹರಿಬಿಡುವ ಮೂಲಕ ಇಡೀ ಜಿಲ್ಲಾ ಪೊಲೀಸ್ ಇಲಾಖೆಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ ಎನ್ನಲಾಗಿದೆ. ನ್ಯಾಯ ಕೊಡಿಸಲು ಸದಾ ಮುಂದಿರುವ, ಬಡವರ ಕಷ್ಟ ಆಲಿಸುವ ಎಸ್ಪಿ ರಾಹುಲ್ ಕುಮಾರ್ ಗೆ ಈತನ ವರ್ತನ ಸವಾಲ್ ಆಗಿ ಪರಿಣಮಿಸಿದೆ. ಇಂತಹ ಪ್ರಕರಣಗಳನ್ನು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬ್ಲಾಕ್ಮೇಲ್ ಗಿರಾಕಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮುಲಾಜಿಲ್ಲದೆ ಕ್ರಮವಾಗಲಿ
ಎಸ್ಪಿ ರಾಹುಲ್ ಕುಮಾರ್ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಎನಿಸಿಕೊಂಡವರು, ಬಡವರ ಪರ ಹಾಗೂ ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಲು ಮುಂದಾದವರು, ತಮ್ಮ ಪೊಲೀಸ್ ಇಲಾಖೆಯಲ್ಲಿ ಅನ್ಯಾಯ ನಡೆದರೆ ಮುಲಾಜಿಲ್ಲದೆ ಕ್ರಮ ಕೈಗೊಂಡವರು, ಇಂಥಹ ದಕ್ಷ ಅಧಿಕಾರಿಯನ್ನೇ ಬ್ಲಾಕ್ ಮೇಲ್ ಮಾಡಲು ಮುಂದಾಗಿರುವ ಗಿರಾಕಿಗೆ ತಕ್ಕ ಶಾಸ್ತಿ ಆಗಬೇಕು, ಉನ್ನತ ಅಧಿಕಾರಿಗೆ ಬ್ಲಾಕ್ ಮೇಲ್ ಮಾಡುವ ಈ ಆಸಾಮಿ ಸಾಮಾನ್ಯ ಜನರನ್ನು ಕಾಡದೇ ಇರುತ್ತಾನಾ? ಎಸ್ಪಿ ಅವರು ಈತನ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಿದೆ.
Comments are closed.