ರಾಜಕಾರಣಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬಹಳ ಮುಖ್ಯ: ಬರಗೂರು ರಾಮಚಂದ್ರಪ್ಪ

378

Get real time updates directly on you device, subscribe now.

ಶಿರಾ: ರಾಜಕಾರಣಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಬಹಳ ಮುಖ್ಯ, ಯಾವ್ಯಾವ ರಾಜಕಾರಣಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಇರುತ್ತದೆ, ಅವರಿಗೆ ಒಳನೋಟ ಮತ್ತು ಒಳ ವಿವೇಕ ಇರುತ್ತದೆ. ಹಾಗಾಗಿ ಕೃಷ್ಣಯ್ಯ ಅವರ ಮಹತ್ವ ಇರುವುದೇನೆ ಅವರಲ್ಲಿದ್ದ ಸಾಂಸ್ಕೃತಿಕ ತಿಳುವಳಿಕೆಯ ನೆಲೆಯಿಂದ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ದಿವಂಗತ ಎಸ್.ಎನ್.ಕೃಷ್ಣಯ್ಯ ಅವರ ಮನೆಗೆ ಭೇಟಿ ನೀಡಿ, ಹುಟ್ಟು ಹಬ್ಬದ ಪ್ರಯುಕ್ತ ಎಸ್.ಎನ್.ಕೃಷ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಎಸ್.ಎನ್.ಕೃಷ್ಣಯ್ಯ ಅವರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬಹಳ ಇತ್ತು, ಅವರು ಶಿರಾದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ದಿವಂಗತ ಎಸ್.ಎನ್.ಕೃಷ್ಣಯ್ಯ ಅವರು ಯಾವುದೇ ಬಲಾಡ್ಯ ರಾಜಕೀಯ ನಾಯಕರ ವಲಯದಲ್ಲಿಲ್ಲದಿದ್ದರೂ ಸಹ ಜನಾನುರಾಗಿಯಾಗಿ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವುದು ಶಿರಾ ತಾಲ್ಲೂಕಿನ ಹೆಮ್ಮೆ, ಎಂದ ಅವರು ನಾನು ಶಿರಾಕ್ಕೆ ಬಂದರೆ ಅಲ್ಲಿ ಕೃಷ್ಣಯ್ಯನವರು ತಪ್ಪದೆ ಬರುತ್ತಿದ್ದರು. ಅಷ್ಟರಮಟ್ಟಿಗೆ ಆತ್ಮೀಯ ಸ್ನೇಹ ಇತ್ತು. ರಾಜಕಾರಣಿಗೆ ಸಜ್ಜನಿಕೆ ಮತ್ತು ಸಭ್ಯ ನಡವಳಿಕೆ ಬಹಳ ಮುಖ್ಯ. ಇತ್ತೀಚಿನ ರಾಜಕೀಯ ನಾಯಕರ ನಡವಳಿಕೆ ನೋಡಿದರೆ. ಎಸ್.ಎನ್.ಕೃಷ್ಣಯ್ಯನವರಂತಹ ಸಜ್ಜನಿಕೆಯ ರಾಜಕಾರಣಿಗಳ ಮಹತ್ವ ಗೊತ್ತಾಗುತ್ತದೆ. ಯಾವತ್ತೂ ಅವರು ಎಲ್ಲೆ ಮೀರಿದ ಮಾತುಗಳನ್ನಾಡುತ್ತಿರಲಿಲ್ಲ, ಎಲ್ಲರ ಜೊತೆ ಸೌಜನ್ಯದಿಂದ ಮಾತನಾಡುತ್ತಿದ್ದರು ಎಂದರು.
ಈ ಸಂದರ್ಭಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಮಾಜಿ ಅಧ್ಯಕ್ಷ ವೈ.ನರೇಶ್ ಬಾಬು, ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿ ಡಾ.ಪಿ.ಹೆಚ್.ಮಹೇಂದ್ರಪ್ಪ, ಶಿರಾ ತಾಲ್ಲೂಕು ರಂಗಭೂಮಿ ಕಲಾವಿಧರ ಸಂಘದ ಅಧ್ಯಕ್ಷ ವಿ.ಎಸ್.ಚಲಪತಿ, ನಿವೃತ್ತ ಪ್ರಾಂಶುಪಾಲ ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಕಸಬಾ ಕಸಾಪ ಅಧ್ಯಕ್ಷ ಎನ್.ದೇವರಾಜು, ಕಳುವರಹಳ್ಳಿ ಕೃಷ್ಣಮೂರ್ತಿ, ಜ್ಞಾನಜ್ಯೋತಿ ಪಪೂ ಕಾಲೇಜಿನ ಅಧ್ಯಕ್ಷ ಪರಮೇಶ್ ಗೌಡ, ಉಪನ್ಯಾಸಕರಾದ ಹೆಂದೊರೆ ಶಿವಣ್ಣ, ಸಾಹಿತಿಗಳಾದ ಸಕ್ಕರ ನಾಗರಾಜು, ಮಹಮ್ಮದ್ ಅಲಿ, ಎಸ್.ಎನ್.ಕೃಷ್ಣಯ್ಯ ಫೌಂಡೇಷನ್ ನ ರೂಪೇಶ್ ಕೃಷ್ಣಯ್ಯ, ಜಯಕುಮಾರ್, ಶಿಕ್ಷಕ ಪ.ನಾ.ಹಳ್ಳಿ ಹರೀಶ್ಕುಮಾರ್, ಭಾನುಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!