ಕುಣಿಗಲ್: ಪಟ್ಟಣದಲ್ಲಿ ಹನುಮಜಯಂತಿ ಕಾರ್ಯಕ್ರಮದ ಅಂಗವಾಗಿ ಹನುಮ ಶೋಭಾಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಿಂದ ಶನಿವಾರ ಮದ್ಯಾಹ್ನ ನಡೆಸಲಾಯಿತು.
ಶನಿವಾರ ಪುರಸಭೆ ಬಸ್ನಿಲ್ದಾಣದಲ್ಲಿರುವ ಪರ್ವತಾಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದ ವಿಶೇಷ ಪೂಜೆ, ದಾರ್ಮಿಕ ಕಾರ್ಯಕ್ರಮ ಹ್ಮುಕೊಳ್ಳಲಾಗಿತ್ತು, ಮದ್ಯಾಹ್ನ ಪಟ್ಟಣದ ರಾಜಬೀದಿಗಳಲ್ಲಿ ಹನುಮನ ಉತ್ಸವಮೂರ್ತಿಯ ಶೋಭಾಯಾತ್ರೆ ಜಾನಪದ ವಾದ್ಯ, ಮಂಗಳ ವಾದ್ಯಗಳೊಂದಿಗೆ ನಾಸಿಕ್ಡೋಲ್, ಡೊಳ್ಳುಕುಣಿತ ಇತರೆ ಕುಣಿಗಳೊಂದಿಗೆ ನೆರವೇರಿತು. ಪಟ್ಟಣದ ಚಿನ್ನಬೆಳ್ಳಿ ವರ್ತಕರು ಸೇರಿದಂತೆ ವಿವಿಧ ವರ್ತಕರುಗಳು ಸ್ವಯಂಪ್ರೇರಣೆಯಿಂದ ಅಂಗಡಿಬಾಗಿಲು ಮುಚ್ಚಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಭಜರಂಗಿಯ ಭಜನೆಗೆ ಹೆಜ್ಜೆಹಾಕುತ್ತಾ ನಡೆದರು.
ಅದ್ಧೂರಿಯಾಗಿ ನಡೆದ ಹನುಮ ಶೋಭಾಯಾತ್ರೆ
Get real time updates directly on you device, subscribe now.
Comments are closed.