ಶಾಂತಿ ಕದಡುವವರನ್ನು ಸಮಾಜ ಎಂದಿಗೂ ಕ್ಷಮಿಸದು

205

Get real time updates directly on you device, subscribe now.

ಮಧುಗಿರಿ: ಹಿಜಾಬ್, ಹಲಾಲ್ ವಿಷಯಗಳನ್ನು ವಿವಾದವಾಗಿ ಸೃಷ್ಟಿಸಿ ಜಾತಿ ಜಾತಿಗಳ ಮಧ್ಯೆ ಶಾಂತಿ ಕದಡುವವರನ್ನು ಈ ಸಮಾಜ ಎಂದಿಗೂ ಕ್ಷಮಿಸದು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ವಕ್ಕಲಿಗರ ಸಮುದಾಯ ಭವನದಲ್ಲಿ ಕಂಚಿಟಿಗ, ರೆಡ್ಡಿ, ಗಂಗಟಕಾರ, ಉತ್ತಮಕೊಳಗ, ಹಳ್ಳಿಕಾರ, ರೊದ್ದಗಾರ ವಕ್ಕಲಿಗರ ಬಳಗ ಮತ್ತು ಸಮಾಜದ ಬಂಧುಗಳು ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಂದ ನೂತನ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂ‘ದ ಸಾನಿಧ್ಯ ವಹಿಸಿ ಮಾತನಾಡಿ, ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡುವುದನ್ನೆ ಕೆಲವರು ಕಾಯಕ ಮಾಡಿಕೊಂಡಿದ್ದು ದೇಶದಲ್ಲಿರುವ ಬಡತನ, ನಿರುದ್ಯೋಗ ಸಮಸ್ಯೆ ನಿವಾರಿಸಲು ಮುಂದಾಗಬೇಕು ಎಂದ ಅವರು, ರೋಗಿಗಳಿಗೆ ಅಗತ್ಯವಿರುವ ರಕ್ತವು ಅದು ಯಾವ ಜಾತಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಯಿಂದ ಪಡೆದಿದೆ ಎಂಬುದನ್ನು ಪರಿಗಣಿಸದೆ ಜೀವ ಉಳಿಸಲು ಮುಂದಾಗುತ್ತಾರೆ, ನಮಗೀಗ ಅಗತ್ಯವಾಗಿ ಬೇಕಾಗಿರುವುದು ಪ್ರೀತಿ ವಿಶ್ವಾಸವೆ ಹೊರೆತು ರಾಗ ದ್ವೇಷಗಳಲ್ಲ ಎಂದರು.
ಮಾಜಿ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಆ ಚುನಾವಣೆಯಲ್ಲಿ ನಮ್ಮ ಸಮಾಜದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೆ ತುಮಕೂರು ಕ್ಷೇತ್ರಕ್ಕೆ ತಂದು ನಿಲ್ಲಿಸಿ ನನಗೆ ಟಿಕೆಟ್ ತಪ್ಪಿಸಿದ್ದು ಅಂತಹ ನಾಯಕರನ್ನೆ ಈ ಜಿಲ್ಲೆಯ ಮಾತದಾರರು ಸೋಲಿಸಿ ಕಳುಹಿಸಿದರು, ಇದು ಸಹ ನನಗೆ ಬೇಸರದ ಸಂಗತಿ ಎಂದ ಅವರು, ವಕ್ಕಲಿಗ ಸಮಾಜದ ಪರ ದ್ವನಿಯಾಗಿ ರಾಜೇಂದ್ರ ನಿಲ್ಲಬೇಕು, ಸ್ವಂತಿಕೆ ಬೆಳೆಸಿಕೊಂಡು ರಾಜಕೀಯವಾಗಿ ಬೆಳೆಯಬೇಕಾಗಿದೆ, ನಮ್ಮ ಸಮಾಜದ ನಾಯಕರುಗಳಿಂದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ನನ್ನ ಪರ ರಾಜ್ಯ ಮತ್ತು ಜಿಲ್ಲೆಯಲ್ಲಿ ನಮ್ಮ ಸಮಾಜದ ಯಾರೊಬ್ಬ ನಾಯಕರು ದ್ವನಿ ಎತ್ತಲಿಲ್ಲ ಇದು ನನಗೆ ನೋವಿನ ಸಂಗತಿಯಾಗಿದ್ದು, ಈ ಸಂದ‘ರ್ದಲ್ಲಿ ಕೆ.ಎನ್.ರಾಜಣ್ಣ ದ್ವನಿಯಾಗಿ ಮತ್ತು ಶಕ್ತಿಯಾಗಿ ನಿಂತು ಬೆಂಬಲ ಸೂಚಿಸಿದರು ಎಂದರು.
ಮಾಜಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಇಂದಿನ ರಾಜಕಾರಣ ಬದಲಾಗುತ್ತಿದ್ದು ರಾಜೇಂದ್ರ ರಂತಹ ಯುವಕರು ಭವಿಷ್ಯದ ನಾಯಕರಾಗಲಿದ್ದಾರೆ, ನಮ್ಮ ಜಿಲ್ಲೆ ನಮ್ಮ ತಾಲೂಕು ನಮ್ಮ ಜನತೆಯ ಭವಿಷ್ಯಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದ ಅವರು, ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ತೊಡೆದು ಹಾಕಲು ಶಾಂತಿವೀರ ಸ್ವಾಮೀಜಿ ಮುಂದಾಳತ್ವ ವಹಿಸಬೇಕು ಎಂದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಈಗಿನ ಸರಕಾರದಿಂದ ಎತ್ತಿನ ಹೊಳೆ ಜಾರಿ ಅಸಾಧ್ಯ, ತಾಲೂಕಿನ 54 ಕೆರೆಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ, ಸುಳ್ಳಿನ ಸರಕಾರದಿಂದ ನಮ್ಮ ಭಾಗದ ಕೆರೆಗಳು ತುಂಬುವುದಿಲ್ಲ ಎಂದ ಅವರು, ರ್ಆ.ರಾಜೇಂದ್ರ ಕೊರೋನ ಸಂದರ್ಭಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ನೊಂದವರ, ಬಡವರ, ರೈತರ ಪರವಾಗಿ ನಿಂತು ಅಸಹಾಯಕರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಗೆಲುವು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ನಾನು ಟಿ.ಬಿ.ಜಯಚಂದ್ರ ಒಂದೇ ತಾಯಿಯ ಮಕ್ಕಳಂತೆ ಇರುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಜನತೆ ಪಕ್ಷಾತೀತವಾಗಿ ಜಾತ್ಯತೀತವಾಗಿ ಬೆಂಬಲ ನೀಡಿದ್ದರಿಂದ ಹಾಗೂ ಜಿಲ್ಲೆಯ ಮುಖಂಡರಾದ ಡಾ. ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಹಾಗೂ ಟಿ.ಬಿ.ಜಯಚಂದ್ರ ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ, ರೈತರ, ಶೋಷಿತರ, ದೀನದಲಿತರ ಪರ ಧ್ವನಿಯಾಗಿ ಹೋರಾಟದಲ್ಲಿ ಭಾಗಿಯಾಗುತ್ತೇನೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅಭ್ಯರ್ಥಿಯಾಗಲಿದ್ದಾರೆ ಅವರ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಜಿಲ್ಲೆ ಮತ್ತು ತಾಲೂಕುಗಳು ಅಭಿವೃದ್ಧಿ ಆಗಬೇಕಾದರೆ ಟಿ.ಬಿ.ಜೆ ಮತ್ತು ಕೆಎನ್ಆರ್ ಗೆಲ್ಲಬೇಕು ಎಂದರು.
ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ರಾಜಕಾರಣಿಯಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ರಾಜೇಂದ್ರ ಮಾಡಲಿ ಎಂದರು.
ಐಐಎಸ್ಸಿ ನಿವೃತ್ತ ಪ್ರಾಧ್ಯಪಕ ಕೆ.ಪಿ.ಜೆ.ರೆಡ್ಡಿ, ರಾಷ್ತ್ರೀಯ ಕುಂಚಿಟಿಗ ಸಮಿತಿ ಅಧ್ಯಕ್ಷ ರವಿಕುಮಾರ್, ರಾಜ್ಯ ಉತ್ತಮ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತರಾದ ಮಂಗಳಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಸಮುದಾಯದ ಮುಖಂಡರಾದ ಸಿದ್ದಲಿಂಗೇಗೌಡ, ಎಸ್.ಆರ್.ರಾಜ ಗೋಪಾಲ್, ಲಾಲಪೇಟೆ ಮಂಜುನಾಥ್, ನಟರಾಜ್, ಸುವರ್ಣಮ್ಮ, ಮಂಜುಳಾ ಆದಿನಾರಾಯಣರೆಡ್ಡಿ, ಕಲ್ಲಹಳ್ಳಿ ದೇವರಾಜು, ಶ್ರೀನಿವಾಸ್ ರೆಡ್ಡಿ, ಪಿ.ಟಿ.ಗೋವಿಂದಪ್ಪ, ನಾರಾಯಣ್ಗೌಡ, ಮಹಾಲಿಂಗಯ್ಯ, ಟಿ.ಪಿ.ಎಸ್.ರಾಜು, ಪಿ.ಸಿ.ಕೆ.ರೆಡ್ಡಿ, ಬಂದ್ರೇಹಳ್ಳಿ ನಾಗಾರ್ಜುನ, ದೀಪು ಹೊನ್ನಾಪುರ, ಸಿ.ಕುಮಾರ್, ರಘು ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!