ರಾಜ್ಯದ ಕಲಾವಿದರಿಗೆ ಸೌಲಭ್ಯಕ್ಕೆ ಒತ್ತಾಯ

92

Get real time updates directly on you device, subscribe now.

ತುಮಕೂರು: ಕರ್ನಾಟಕ ರಾಜ್ಯದಲ್ಲಿ ಜಾನಪದ ಸೇರಿದಂತೆ ವಾದ್ಯ ಪರಿಕರಗಳನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಸಂಸ್ಕೃತಿ ಬಿಂಬಿಸುವ ಕಲಾವಿದರ ಬದುಕು ಅವನತಿಯತ್ತ ಸಾಗುತ್ತಿದೆ, ರಾಜ್ಯ ಸರ್ಕಾರ ಕಲಾವಿದರನ್ನು ಗುರುತಿಸಿ ವಸತಿ ಯೋಜನೆ ಸೇರಿದಂತೆ ಮೂಲಭೂತ ಸೌಕರ್ಯ ಮತ್ತು ಸಾಲ ಸೌಲಭ್ಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ ಸಂಘದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಗುಬ್ಬಿವೀರಣ್ಣ ಆಗ್ರಹಿಸಿದರು.

ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎದುರಿಗೆ ಕಲಾವಿದರಿಂದ ಕಲಾವಿದರಿಗಾಗಿ ಹೋರಾಟ ಎಂಬ ಪರಿಕಲ್ಪನೆಯಲ್ಲಿ ಪ್ರತಿ‘ಟನೆ ನಡೆಸಿ ಕನ್ನಡ ಸಂಸ್ಕೃತಿ ಇಲಾಖೆಗೆ ಸರ್ಕಾರ ನೀಡುತ್ತಿಿರುವ ಅನುದಾನ ಸಾಲುತ್ತಿಲ್ಲ, ಅನುದಾನವನ್ನು 800 ಕೋಟಿಗೆ ಹೆಚ್ಚಳ ಮಾಡಬೇಕು, ಆನ್ಲೈನ್ ಮುಖಾಂತರ ಅರ್ಜಿಗಳನ್ನು ಪಡೆಯುವುದನ್ನು ರದ್ದುಪಡಿಸಿ ಮೊದಲಿನಂತೆ ಪ್ರತಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಬೇಕು ಪ್ರತಿ ವರ್ಷ ಒಂದು ಜಿಲ್ಲೆಗೆ ಅನುದಾನ ನೀಡಿ ಕಲಾವಿದರಿಗೆ ಮಾಸಾಶನ ನೀಡಬೇಕು ಎಂದರು.
ಎಸ್ಸಿಎಸ್ಟಿ ಎಸಿಪಿ ಎಸ್ಟಿಪಿ ಯೋಜನೆಯಂತೆ ಪರಿಪೂರ್ಣ ಅನುದಾನ ಮಂಜೂರು ಮಾಡಬೇಕು, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಅಧಿಕೃತವಾಗಿ ನೀಡಲು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಆದೇಶ ನೀಡಬೇಕು, ಯೋಜನೆಯಲ್ಲಿ ಪರಿಗಣಿಸಬೇಕು, ಕಲಾವಿದರಿಗೆ ವಸತಿ ಯೋಜನೆಯಡಿ ವಿಶೇಷ ಘಟಕಕ್ಕೆ ಸೇರಿಸಿ ಸೌಕರ್ಯ ಒದಗಿಸಬೇಕು, ವಾದ್ಯಪರಿಕರ ಹಾಗೂ ವೇಷಭೂಷಣ ಖರೀದಿಗೆ ಧನ ಸಹಾಯ ನಿಗದಿಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ರಾಜ್ಯದಲ್ಲಿರುವ ನೈಜ ಕಲಾವಿದರನ್ನು ಮತ್ತು ಕಲಾಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಪ್ರೋತ್ಸಾಹಿಸಬೇಕಾಗಿ ಇರುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.
ತುಮಕೂರು ಕಲಾವಿದರ ಜಿಲ್ಲಾಧ್ಯಕ್ಷ ಹೋರಾಟದಲ್ಲಿ ಚೆಲುವರಾಜು, ತಾಲೂಕ ಅಧ್ಯಕ್ಷೆ ಮಂಜುಳಮ್ಮ, ಸ್ವಾಮಿ, ರಕ್ಷಿತ ಕರೆಮನೆ, ಅರುಣ್ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!