ತುಮಕೂರು: ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಲಾಕ್ ಡೌನ್ ವಿಧಿಸಲಾಗಿದ್ದು, ಇದರಿಂದಾಗಿ ಎಷ್ಟೊ ಮಂದಿ ಬಡವರು ಆಹಾರ ಸಾಮಗ್ರಿ ಇಲ್ಲದೆ ಪರದಾಡುತಿದ್ದಾರೆ. ಇದೇ ಸಂದರ್ಭದಲ್ಲಿ ಅಶಕ್ತ ಬ್ರಾಹ್ಮಣರನ್ನು ಗುರುತಿಸಿ ಒಂದು ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ನೀಡುವ ಕೆಲಸ ಜಿಲ್ಲಾ ಬ್ರಾಹ್ಮಣ ಸಭಾ ಮಾಡುತ್ತಿದೆ.
ದೇಶವೇ ಲಾಕ್‌ಡೌನ್ ಆಗಿದೆ. ಈ ಬಿಸಿ ಎಲ್ಲರನ್ನೂ ಮುಟ್ಟಿದೆ. ಹೀಗಾಗಿ ದಿನಸಿ ಕೊಳ್ಳಲು ಸಾಧ್ಯವಾಗದ ಬ್ರಾಹ್ಮಣ ಅಶಕ್ತ 60 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎನ್.ಆರ್.ನಾಗರಾಜರಾವ್ ತಿಳಿಸಿದರು. ಆಹಾರ ಸಾಮಗ್ರಿ ತಲುಪದವರು ಸೋಮವಾರ ಸಂಜೆ 6 ಗಂಟೆಗೆ ವಿಪ್ರಭವನದಲ್ಲಿ ದಿನಸಿ ಸಾಮಗ್ರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣಸಭಾ ಪ್ರಧಾನ ಕಾರ್ಯದರ್ಶಿ ಸುರೇಶ್‌ಹೊಳ್ಳ, ಸಹ ಕಾರ್ಯದರ್ಶಿ ಚಂದ್ರಶೇಖರ್, ಡಾ.ಹೆಚ್.ಹರೀಶ್, ಸನತ್, ಪಣೀಶ ಬಿ.ಆರ್. ಮತ್ತಿತರರು ಇದ್ದರು.
ಅಶಕ್ತ ವಿಪ್ರರಿಗೆ ದಿನಸಿ ವಿತರಣೆ
Get real time updates directly on you device, subscribe now.
Next Post
Comments are closed.