ಮಳೆ ಗಾಳಿಗೆ ನೆಲ ಕಚ್ಚಿದ ಬಾಳೆ

169

Get real time updates directly on you device, subscribe now.

ಕುಣಿಗಲ್: ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನವರೆಗೂ ಗಾಲಿ ಸಮೇತ ಸುರಿದ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಇಡೀ ರಾತ್ರಿ ವಿದ್ಯುತ್ ಸರಬರಾಜು ಕೈ ಕೊಟ್ಟ ಕಾರಣ ಜನರು ಹೈರಾಣಾದರು, ಎಡೆಯೂರು ಹೋಬಳಿಯಲ್ಲಿ ಗಾಳಿ, ಮಳೆಗೆ ಬಾಳೆ ಬೆಳೆ ನೆಲಕಚ್ಚಿದ್ದು ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸೋಮವಾರ ಸಂಜೆ ವೇಳೆಗೆ ಗುಡುಗು ಸಿಡಿಲಿನ ಆಭರ್ಟದ ಜೊತೆ ಗಾಳಿಯಿಂದ ಕೂಡಿದ ಮಳೆ ಆರಂಭವಾಗಿ ರಾತ್ರಿ ಎಂಟು ಗಂಟೆ ವೇಳೆಗೆ ವಿದ್ಯುತ್ ಸರಬರಾಜು ಸ್ಥಬ್ದವಾಗಿ ಇಡೀ ರಾತ್ರಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳು ಕತ್ತಲಿನಲ್ಲಿ ಮುಳುಗಿದವು, ದಿತೀಯ ಪಿಯುಸಿ ಪರೀಕ್ಷೆ ಸೇರಿದಂತೆ ಹಲವು ಪದವಿ ಪರೀಕ್ಷೆಗೆ ಸಿದ್ಧವಾಗುತ್ತಿದ್ದ ವಿದ್ಯಾರ್ಥಿಗಳು ಹೈರಾಣಾದರು, ಹೋಟೆಲ್ ಮಾಲೀಕರು ಮಂಗಳವಾರ ಬೆಳಗ್ಗೆ ಸಿದ್ಧತೆ ಮಾಡಿಕೊಳ್ಳಲು ಪರದಾಡಿದರೆ, ಜನರು ಮನೆಗಳಲ್ಲಿ ಸಂಪ್ ನೀರು ಎತ್ತಲು ಕರೆಂಟ್ ಇಲ್ಲದೆ ಮೂಲೆ ಸೇರಿದ್ದ ಬಿಂದಿಗೆಗಳಿಗೆ ಹಗ್ಗಕಟ್ಟಿ ಸಂಪ್ ನಿಂದ ನೀರು ತೆಗೆದು ಬಳಸುವುದು ಸಾಮಾನ್ಯವಾಗಿತ್ತು, ಮಂಗಳವಾರ ಮಕ್ಕಳನ್ನು, ಕೆಲಸಕ್ಕೆ ಹೋಗುವವರನ್ನು ಅಣಿಗೊಳಿಸಲು ಗೃಹಿಣಿಯರು ಬೆಸ್ಕಾಂಗೆ ಹಿಡಿಶಾಪ ಹಾಕಿಕೊಂಡು ಗೃಹ ಕಾರ್ಯದಲ್ಲಿ ತೊಡಗಿದರು, ಸೋಮವಾರ ರಾತ್ರಿ ಎಂಟು ಗಂಟೆಗೆ ಕೈಕೊಟ್ಟ ವಿದ್ಯುತ್ ಮಂಗಳವಾರ ಬೆಳಗ್ಗೆ ಒಂಬತ್ತು ಗಂಟೆಗೆ ಬಂದರೂ ಕಣ್ಣಾಮುಚ್ಚಾಲೆ ಮುಂದುವರೆದಿತ್ತು, 66 ಕೆವಿ ಮುಖ್ಯ ಸರಬರಾಜು ಮಾರ್ಗದಲ್ಲೆ ವ್ಯತ್ಯಯವಾಗಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ಎಡೆಯೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿನ ಹತ್ತಾರು ಎಕರೆಯಲ್ಲಿ ಬೆಳೆದ್ದಿ ಬಾಳೆ ಬೆಳೆ ಧರೆಗುರುಳಿ ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ಪಟ್ಟಣದಲ್ಲಿ 36, ಹುಲಿಯೂರುದುರ್ಗದಲ್ಲಿ ಮಳೆ ಇಲ್ಲ, ಸಂತೇಪೇಟೆ- 33.2, ಮಾರ್ಕೊನಹಳ್ಳಿ- 7.4,ಅಮೃತೂರು- 11.2, ಕೆ.ಹೊನ್ನಮಾಚನಹಳ್ಳಿ- 12, ನಿಡಸಾಲೆಯಲ್ಲಿ 9.8 ಮಿ.ಮೀ ಮಳೆಯಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!