ಮಾರಮ್ಮ ದುರ್ಗಮ್ಮ ದೇವಸ್ಥಾನಕ್ಕೆ ಅಡಿಗಲ್ಲು ಪೂಜೆ

196

Get real time updates directly on you device, subscribe now.

ತುಮಕೂರು: ನಗರದ 6ನೇ ವಾರ್ಡ್ ದಿಬ್ಬೂರು ದೇವರಾಜ್ ಅರಸು ಬಡಾವಣೆಯಲ್ಲಿ ದಂಡಿನ ಮಾರಮ್ಮ ಮತ್ತು ಶ್ರೀದುರ್ಗಮ್ಮ ದೇವಸ್ಥಾನ ಅಡಿಗಲ್ಲು ಪೂಜೆಯನ್ನು ಪಾಲಿಕೆ ಸದಸ್ಯರಾದ ವೀಣಾ ಮನೋಹರ್ ಗೌಡ ನೆರವೇರಿಸಿದರು.

ಈ ವೇಳೆ ವೀಣಾ ಮನೋಹರ್ ಗೌಡ ಮಾತನಾಡಿ, ದೇವಸ್ಥಾನ ಮುಂದಿನ ಪೀಳಿಗೆಗೆ ಪಳೆಯುಳಿಕೆಯಾಗಲಿದೆ, ಶುಭಾ ಕಾರ್ಯ ಮತ್ತು ಜನರ ಮನಶಾಂತಿಗೆ ಗುಡಿ ಅವಶ್ಯಕ, ದೇವಸ್ಥಾನದ ನಿರ್ಮಾಣಕ್ಕೆ ಪಾಲಿಕೆಯಿಂದ ಮತ್ತು ಸ್ವಯಂ ಪ್ರೇರಿತ ಸಲಕರಣೆಗಳನ್ನು ಪ್ರಾಮಾಣಿಕವಾಗಿ ತಲುಪಿಸಿ ಉಸ್ತುವಾರಿಯಲ್ಲಿ ನಾನು ಸಮುದಾಯದೊಟ್ಟಿಗೆ ಕೈಜೋಡಿಸುತ್ತೇನೆ, ನಗರ ಪಾಲಿಕೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನನ್ನ ಪತಿ ಎಲ್ಲರ ಸಹಕಾರ ಪಡೆದು ಇಲ್ಲಿರುವ ದಲಿತ ಕುಟುಂಬಗಳ ಆರಾಧ್ಯ ದೇವತೆಗಳನ್ನು ಪ್ರತಿಷ್ಠಾಪಿಸಿ ಇಲ್ಲಿನ ಮಕ್ಕಳ ಭವಿಷ್ಯ ಕಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕಿದೆ, ಈ ನಗರ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣಕ್ಕೆ ನಾನು ಶ್ರಮಿಸುವೆ ಎಂದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ದಿಬ್ಬೂರು ದೇವರಾಜ್ ಅರಸು ಬಡಾವಣೆಯಲ್ಲಿ ದಂಡಿನ ಮಾರಮ್ಮನ ಮತ್ತು ದುರ್ಗಮ್ಮ ದೇವಸ್ಥಾನ ಗುದ್ದಲಿ ಪೂಜೆ ಹೋರಾಟದ ಪ್ರತಿಲವಾಗಿದೆ, ಅಂದಿನ ವಸತಿ ಸಚಿವ ಎಂ.ಕೃಷ್ಣಪ್ಪ ಮತ್ತು ಆರ್.ವಿ.ದೇವರಾಜ್ ಅವರಿಗೆ ಇಲ್ಲಿನ ನಿವಾಸಿಗಳಿಗೆ ದೇವಸ್ಥಾನದ ನಿರ್ಮಾಣಕ್ಕೆ ಜಾಗ ನೀಡುವಂತೆ ಒತ್ತಾಯಿಸಿದ ಪರಿಣಾಮವಾಗಿ ಸ್ಥಳೀಯ ಪಾಲಿಕೆ ಸದಸ್ಯರು ಈ ಜಾಗದಲ್ಲಿ ಕಟ್ಟಿಕೊಂಡಿರುವ ಬಯಲು ದೇವಾಲಯ ಅಭಿವೃದ್ಧಿಗೊಳಿಸಲು ಮುಂದೆ ಬಂದಿದ್ದಾರೆ, ನಮ್ಮ ಜನರು ಮೂಲ ಸಂಸ್ಕೃತಿ ಆಚರಿಸಿಕೊಂಡು ಬರುತ್ತಿದ್ದು, ಮೂಲ ನಿವಾಸಿಗಳ ಪ್ರತೀಕವಾದ ಮಹಿಳಾ ಪ್ರಾಧಾನ್ಯತೆ ದೇವತೆಗಳನ್ನು ಆರಾಧಿಸುತ್ತಿದ್ದಾರೆ, ಈ ಜಾಗದಲ್ಲಿ ಈಗಾಗಲೇ ಸ್ಟಾರ್ಟ್ಸಿಟಿ ಯಿಂದ 3 ಅಂಗನವಾಡಿಗಳ ನಿರ್ಮಾಣ ಅಂತಿಮ ಹಂತದಲ್ಲಿದ್ದು ಶಿಕ್ಷಣಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ, ಪಾಲಿಕೆ ಸದಸ್ಯರಾದ ವೀಣಾ ಮನೋಹರ್ ಗೌಡರವರಿಗೆ ಅಭಿನಂದನೆ ಸಲ್ಲಿಸುತ್ತ ಈ ಬಡಾವಣೆಯನ್ನು ಪಾಲಿಕೆ ಹಸ್ತಾಂತರಕ್ಕೆ ಪಡೆದು ಇಲ್ಲಿನ ಮೂಲಭೂತ ಸಮಸ್ಯೆಗಳಿಗೆ ದ್ವನಿಯಾಗಿ ನಿಲ್ಲಬೇಕುಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸಿದ್ದಪ್ಪ ಮಾತನಾಡಿ, ಸುಮಾರು 10 ವರ್ಷಗಳಿಂದ ದಂಡಿನ ಮಾರಮ್ಮ ಮತ್ತುದುರ್ಗಮ್ಮ ದೇವರಗಳನ್ನು ಪೂಜಿಸುತ್ತ ಬರುತ್ತಿದ್ದು ದಿಬ್ಬೂರಿನ ದೇವರಾಜ್ಅರಸು ಬಡಾವಣೆಯಲ್ಲಿ ನೆಲೆಯೂರಲಾಗಿದೆ 10 ವರ್ಷಗಳ ನಂತರ ಪಾಲಿಕೆ ಸದಸ್ಯರಾದ ವೀಣಾ ಮನೋಹರ್ಗೌಡ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಉಸ್ತುವಾರಿ ವಹಿಸಿ ಇಲ್ಲಿನ ನಾಗರಿಕರ ಸಹಕಾರದೊಂದಿಗೆ ದೇವಸ್ಥಾನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ದೇವಸ್ಥಾನದ ಜವಾಬ್ದಾರಿ ವಹಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವೀಳ್ಯದೆಲೆ ರಾಜಣ್ಣ, ಮನೋಹರ್ ಗೌಡ್ರು, ದೊಡ್ಡಾದಪ್ಪ, ಬಸವರಾಜ್, ನರಸಿಂಹಮೂರ್ತಿ, ಹನುಮಂತ ಹಾಗೂ ಸ್ಲಂ ಸಮಿತಿಯ ಅರುಣ್, ಅನುಪಮಾ, ಚಕ್ರಪಾಣಿ ಮತ್ತು ಮಾದಿಗ ದಂಡೋರದ ಆಟೋ ಶಿವರಾಜ್, ಜಗದೀಶ್, ಜ್ಯೋತಿ ಬಾಪುಲೆ ಸಂಘದ ಗೋವಿಂದ, ರಾಜು, ಚಿರಂಜೀವಿ, ರವಿ, ವೆಂಕಟೇಶ್, ಸುರೇಶ್, ಜ್ಯೋತಿ, ಸ್ಥಳೀಯರಾದ ಆನಂದ್ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!