ತುಮಕೂರು:ಮನೆಯಲ್ಲಿನ ವಿದ್ಯುತ್ ಬಂದ್ ಮಾಡಿ ನಾಲ್ಕು ದಿಕ್ಕಿನತ್ತ ದೀಪ ಬೆಳಗಿಸಿ ಆ ಮೂಲಕ ನಾವು ಒಂದಾಗಿದ್ದೇವೆ.
ದೇಶದೊಂದಿಗೆ ಇದ್ದೇವೆ ಎಂದು ಹೇಳುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದ ದೀಪ ಬೆಳಗಿಸುವ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಗೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟದ ಸಹುದ್ಯೋಗಿಗಳು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ದೀಪ ಬೆಳಗಿಸಿ ಆ ಮೂಲಕ ಲಾಕ್ ಡೌನ್ ಬೆಂಬಲಿಸಿದ್ದಾರೆ.
ದೇಶದ ಜನತೆ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿದ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ಸಾಥ್ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕಾವೇರಿ ನಿವಾಸದಲ್ಲಿ ಕುಟುಂಬದ ಸದಸ್ಯರೊಡನೆ 9 ಗಂಟೆಗೆ ಸರಿಯಾಗಿ 9 ನಿಮಿಷಗಳ ಕಾಲ ದೀಪ ಬೆಳಗಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ ಎಸ್ ಯಡಿಯೂರಪ್ಪ, ದೀಪ ಬೆಳಗುವಂತೆ ಪ್ರಧಾನಿಗಳು ನೀಡಿದ ಕರೆಗೆ ನಮ್ಮ ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ. ಇದೇ ಅಲ್ಲವೇ ಒಗ್ಗಟ್ಟೆಂದರೆ, ಇದೇ ಅಲ್ಲವೇ ಸಾಮರಸ್ಯವೆಂದರೆ? ಎಂದು ಬಣ್ಣಿಸಿದ್ದಾರೆ.
ಬಾಲಿವುಡ್ ನಟ ಅಕ್ಷಯಕುಮಾರ್, ಅನಿಲ್ ಕಪೂರ್ ಸ್ಯಾಂಡಲ್ ವುಡ್ ಸ್ಟಾರ್ ಪುನೀತ್ ರಾಜಕುಮಾರ್, ನಟಿ ಪ್ರಣೀತಾ ಸೇರಿದಂತೆ ಹೀಗೆ ವಿವಿಧ ಕ್ಷೇತ್ರದ ಗಣ್ಯರು ನವೋ ಕರೆಗೆ ಸ್ಪಂದಿಸಿ ದೀಪ ಬೆಳಗಿಸಿ ದೇಶದ ಕತ್ತಲು ಓಡಿಸಲು ಕೈ ಜೋಡಿಸಿದರು.
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಗೃಹ ಸಚಿವ ಅಮಿತ್ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಹೀಗೆ ಗಣ್ಯರು ಈ ದೀಪ ಬೆಳಗಿಸುವಅಭಿಯಾನಕ್ಕೆ ಮೆರಗು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ, ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಂಕೇತವಾದ ದೀಪ ನಮ್ಮನ್ನು ಸುರಕ್ಷತೆಯಡೆಗೆ ಕರೆದೊಯಲಿ ಎಂದು ನಾವು ಹಾರೈಸೋಣ.
Comments are closed.