ಡಾ.ರಾಜ್ ಬೆಳ್ಳಿ ಪುತ್ಥಳಿ, ಪುನೀತ್ ಭಾವಚಿತ್ರ ಮೆರವಣಿಗೆ

154

Get real time updates directly on you device, subscribe now.

ತುಮಕೂರು: ನಗರದ ಹೊರಪೇಟೆಯ ಶತಶೃಂಗ ಡಾ.ರಾಜಕುಮಾರ್ ಕನ್ನಡ ಅಭಿಮಾನಿಗಳ ಸಂಘ ಮತ್ತು ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಡಾ.ರಾಜ್ ಕುಮಾರ್ ಅವರ 94ನೇ ಹುಟ್ಟು ಹಬ್ಬದ ಅಂಗವಾಗಿ ಹೊರಪೇಟೆಯ ಡಾ.ರಾಜ್ಕುಮಾರ್ ರಸ್ತೆ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಡಾ.ರಾಜಕುಮಾರ್ ಅವರ ಬೆಳ್ಳಿ ಪುತ್ಥಳಿ ಹಾಗೂ ಪುನಿತ್ ರಾಜಕುಮಾರ್ ಅವರ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಡಾ.ರಾಜಕುಮಾರ್ ಅವರ ಬೆಳ್ಳಿ ಪುತ್ಥಳಿ ಹಾಗೂ ಪುನಿತ್ ರಾಜಕುಮಾರ್ ಅವರ ಭಾವಚಿತ್ರ ಮೆರವಣಿಗೆಗೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಕಲಾ ತಂಡಗಳಾದ ಸೇವನ್ ಬ್ರದರ್ ಅವರ ನಾಸಿಕ್ ಡೋಲ್,ತಮಿಳುನಾಡಿನ ತಮಟೆ, ಕೇರಳದ ಚಂಡೆ, ಮೈಸೂರಿನ ನಗಾರಿ, ದಕ್ಷಿಣ ಕನ್ನಡದ ಗೊಂಬೆ, ಚಿಟ್ಟಿಮೇಳ, ಅಭಿನವ ವೀರಭದ್ರ ವೀರೇಶ ಅವರ ವೀರಗಾಸೆ, ಬೆಳ್ತಂಗಡಿ ಕೀಲುಕುದುರೆ, ಪೂಜಾಕುಣಿತ ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿ, ಪ್ರದರ್ಶನ ನೀಡಿದವು.
ಈ ವೇಳೆ ಶತಶೃಂಗ ಡಾ.ರಾಜಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಜಿ.ಶಿವಕುಮಾರ್ ಹರಳೂರು, ಟಿ.ಜಿ.ಬಸವರಾಜು,ಮನುಹರಳೂರು,ಟಿ.ಸಿ.ದಯಾನಂದ್,ರಾಜಣ್ಣ, ನಿಶ್ಚಯ್, ಎನ್.ರಾಜ್, ಜೀವನ್ ವಿ,ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!