ವೈ.ಎ.ನಾರಾಯಣಸ್ವಾಮಿಗೆ ಅಭಿನಂದನೆ ಸಲ್ಲಿಕೆ

181

Get real time updates directly on you device, subscribe now.

ತುಮಕೂರು: ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ವೈ.ಎ.ಎನ್.ಅಭಿಮಾನಿ ಬಳಗ ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘಟನೆಗಳ ವತಿಯಿಂದ ವಿಧಾನಪರಿಷತ್ ಸದಸ್ಯ ಹಾಗೂ ಸರಕಾರದ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ, ವಿಧಾನಪರಿಷತ್ ಸದಸ್ಯರಿಗು ವಿಧಾನಸಭೆಗೆ ಇರುವಷ್ಟೇ ಜವಾಬ್ದಾರಿ ಇರುತ್ತೆ, ಕೆಳಮನೆಯ ತೀರ್ಮಾನಗಳು, ಮೇಲ್ಮೆನೆಯಲ್ಲಿ ವಿಸ್ತೃತ ಚರ್ಚೆಗಳಾಗಿ, ನಂತರ ಕಾಯ್ದೆಗಳಾಗಿ ಜಾರಿ ಬರುತ್ತದೆ, ಹಾಗಾಗಿ ವಿಧಾನಪರಿಷತ್ತಿನ ಚರ್ಚೆಗಳನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕ ಮಾಡುವ ಕೆಲ ತಪ್ಪುಗಳು ಇಡೀ ಇಲಾಖೆಯನ್ನೇ ಗೊಂದಲದ ಗುಡಾಗಿದೆ, ಶಿಕ್ಷಣ ಇಲಾಖೆ ಮತ್ತು ಕಾನೂನು ಇಲಾಖೆಯ ಮಂತ್ರಿಗಳ ಸಹಕಾರ ಪಡೆದು ಈ ಗೊಂದಲಗಳಿಗೆ ಪರಿಹಾರ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ, ಹಳೆ ಪಿಂಚಿಣಿ ವ್ಯವಸ್ಥೆ ಜಾರಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಡಾ.ವೈಎ.ಎನ್ ಮುಖ್ಯ ಸಚೇತಕರಾಗಿರುವ ಕಾಲದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಸದಾ ನಗುಮುಖದ ವೈಎಎನ್ ಅವರು ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಮುಖ್ಯಸಚೇತಕರಾಗಿ ನೇಮಕಗೊಂಡಿದ್ದಾರೆ, ಆ ಹುದ್ದೆಗೆ ಗೌರವ ತಂದುಕೊಡಲಿದ್ದಾರೆ ಎಂಬುದು ನಮ್ಮ ಅಭಿಮತ, ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಎನ್ಇಪಿನಲ್ಲಿ ಅವಕಾಶವಿದೆ, ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಭಾರತ ಇಡೀ ವಿಶ್ವದಲ್ಲಿಯೇ ಅತ್ಯುನ್ನತ ಗೌರವ ಪಡೆದಿದೆ, ಶಿಕ್ಷಕರು ಸಹ ತಮ್ಮ ಕ್ಷೇತ್ರದಲ್ಲಿ ವೈಎಎನ್ ಅವರನ್ನು ಆಯ್ಕೆ ಮಾಡಿಕೊಂಡು ತಮ್ಮ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವಲ್ಲಿ ಯಶಸ್ವಿ ಯಾಗುತ್ತಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸರಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಶಿಕ್ಷಕರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಬೇಕೆಂಬುದು ನನ್ನ ಮನದ ಇಂಗಿತವಾಗಿದೆ, ನನ್ನಿಂದ ಯಾರಿಗೂ ಅನ್ಯಾಯವಾಗಬಾರದು, ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕೆಂಬ ಅಬ್ದುಲ್ ಕಲಾಂ ಅವರ ಮಾತು ಸದಾ ನನ್ನ ಮನಸ್ಸಿನಲ್ಲಿದೆ, ಯುವಕರಿಗೆ ಹೆಚ್ಚು ಅಧಿಕಾರ ಸಿಗಬೇಕೆಂಬುದು ನಮ್ಮ ಆಶಯ, ನಿಮ್ಮೆಲ್ಲರ ಸೇವೆಗೆ ನಾವೆಲ್ಲರೂ ಟೊಂಕ ಕಟ್ಟಿ ನಿಂತಿದ್ದೇವೆ, ನನ್ನ ಉಸಿರಿರವರೆಗೂ ಶಿಕ್ಷಕರನ್ನು ಮರೆಯಲ ಸಾಧ್ಯವೇ ಇಲ್ಲ, ಅನುದಾನ ದೊಡ್ಡದಿರುವ ಇಲಾಖೆ ಮಂತ್ರಿಯಾದರೆ ಮಾತ್ರ ಪವರ್ ಅಲ್ಲ, ಯಾವುದೇ ಇಲಾಖೆ ನೀಡಿದರೂ ಆ ಇಲಾಖೆಗೆ ಗೌರವ ತಂದುಕೊಡುವವನೇ ನಿಜವಾಗಿಯೂ ಪವರ್ ಮಂತ್ರಿ, ಹಾಗಾಗಿ ಸಿಕ್ಕಿರುವ ಅವಕಾಶದಲ್ಲಿಯೇ ನಿಮ್ಮಗಳ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಿಕ್ಷಕರು ಮೊದಲು ಸಂವಿಧಾನವನ್ನು ಓದಬೇಕು, ಹೊಸ ಶಿಕ್ಷಣ ಕಾಯ್ದೆಯ ಬಗ್ಗೆ ನಿಮ್ಮಗೆ ಎಷ್ಟು ಗೊತ್ತು ಎಂದು ಪ್ರಶ್ನಿಸಿದ ವೈಎಎನ್ ಅವರು, ಈ ನೆಲದ ಕಾನೂನು ಎಲ್ಲರಿಗೂ ಗೊತ್ತಿದ್ದರೆ ಯಾರು ನಿಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ, ಹಾಗಾಗಿ ಶಿಕ್ಷಕರು ಸಂವಿಧಾನದ ರಥಕ್ಕೆ ಸಾರಥಿಗಳಾಗಬೇಕು, ಇನ್ನು ಮುಂದೆ ಯಾವ ಶಾಲೆಯ ಶಿಕ್ಷಕರು ವೇತನವಿಲ್ಲದೆ ಪರದಾಡುವಂತಹ ಸ್ಥಿತಿಗೆ ಅವಕಾಶ ನೀಡಲ್ಲ, ಆದರೆ ನೀವುಗಳು ಸಹ ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ವೈ.ಎ.ಎನ್.ಅಭಿಮಾನಿ ಬಳಗದ ಸಂಚಾಲಕ ಶ್ರೀನಿವಾಸರೆಡ್ಡಿ ಮಾತನಾಡಿ, ವೈಎಎನ್ ಅವರದ್ದು ವಿಶೇಷ ವ್ಯಕ್ತಿತ್ವ, ಕ್ಷೇತ್ರದ ಜನರ ಸಮಸ್ಯೆ ಅರಿತು, ಅವುಗಳ ಪರಿಹಾರಕ್ಕೆ ನಿರಂತರ ಕೆಲಸ ಮಾಡುತಿದ್ದಾರೆ, ಅತ್ಯುನ್ನತ ಪದವಿ ಪಡೆದು ಶಿಕ್ಷಣ ಕ್ಷೇತ್ರದ ಆಳ ಅಗಲ ಅರಿತಿದ್ದು, ಅವರು ವಿಧಾನ ಪರಿಷತ್ತಿನಲ್ಲಿ ಕೇಳಿರುವ ಪ್ರಶ್ನೆಗಳು ಮತ್ತು ಅದಕ್ಕೆ ಬಂದಿರುವ ಉತ್ತರಗಳೇ ಉದಾಹರಣೆ, ಇಂತಹ ವ್ಯಕ್ತಿಯ ಹೆಸರಿನಲ್ಲಿ ಬಳಗ ರಚಿಸಿಕೊಂಡು, ಕೊರೊನ ಸಂದರ್ಭದಲ್ಲಿ ಸುಮಾರು 3 ಲಕ್ಷ ರೂ. ಸಂಗ್ರಹಿಸಿ, 700 ಪುಡ್ ಕಿಟ್ ಗಳನ್ನು ಸಂಕಷ್ಟದಲ್ಲಿದ್ದ ಶಿಕ್ಷಕರಿಗೆ ವಿತರಿಸಲಾಯಿತು. ಇದನ್ನು ಮಾದರಿಯಾಗಿ ತೆಗೆದುಕೊಂಡ ನಮ್ಮ ನಾಯಕರಾದ ವೈ.ಎ.ನಾರಾಯಣಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ ಅವರು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಷ್ಟೂ ಜಿಲ್ಲೆಗಳ ಸುಮಾರು 10 ಸಾವಿರ ಜನ ಶಿಕ್ಷಕರಿಗೆ ಫುಡ್ ಕಿಟ್ ವಿತರಿಸಿ ನೆರವು ನೀಡಿದ್ದಾರೆ. ಇಂತಹ ಜನ ನಾಯಕರನ್ನು ಪಡೆದಿರುವುದೇ ನಮ್ಮ ಭಾಗ್ಯ ಎಂದರು.
ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ವೈ.ಎ.ಎನ್.ಅಭಿಮಾನಿ ಬಳಗದ ಸಂಚಾಲಕ ಶ್ರೀನಿವಾಸರೆಡ್ಡಿ, ಡಿಡಿಪಿಐ ನಂಜಯ್ಯ, ಬಿಇಓ ಹನುಮಾನಾಯ್ಕ್, ರಂಗಪ್ಪ, ಅಕ್ಕಮ್ಮ, ಲಿಂಗದೇವರು, ಕಮಲಾಕ್ಷಿ, ಉಮಮಹೇಶ, ಸಿದ್ದೇಶ್, ನಾರಾಯಣಪ್ಪ, ರಾಜಕುಮಾರ್, ಅಭಿಮಾನಿ ಬಳಗದ ರವಿಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!