ತುಮಕೂರು: ತುಮಕೂರು ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಅವರ 62ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ, ಕನ್ನಡ ಸೇನೆಯ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಉದ್ಯಮಿಗಳಾದ ಎನ್.ಎಸ್.ಜಯಕುಮಾರ್ ಕಳೆದ ಎರಡು ವರ್ಷಗಳ ಕೊರೊನ ಸಂದರ್ಭದಲ್ಲಿ ಅವರು ಮಾಡಿದ ಸಮಾಜ ಸೇವೆ ಮರೆಯಲು ಸಾಧ್ಯವೇ ಇಲ್ಲ, ನಗರ ಪಾಲಿಕೆಯ 800ಕ್ಕು ಹೆಚ್ಚು ಜನ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಿದ್ದಲ್ಲದೆ, ತಮ್ಮ ಗೆಳೆಯರ ಜೊತೆ ಸೇರಿ 750 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಜಿಲ್ಲಾಡಳಿತ ಆಮ್ಲಜನಕಕ್ಕಾಗಿ ಪರದಾಡುವುದನ್ನು ತಪ್ಪಿಸಿದ್ದಾರೆ, ಅಲ್ಲದೆ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಮಹಿಳಾ ಪದವಿ ಕಾಲೇಜಿನ ಮಕ್ಕಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.
ಕೋವಿಡ್ ಸಂದರ್ಭಲ್ಲಿ ನಗರದ ಹಲವು ಸ್ಮಶಾನಗಳನ್ನು ಶುಚಿಗೊಳಿಸಿ, ಶವಸಂಸ್ಕಾರಕ್ಕೆ ಅಗತ್ಯ ಮಾಡಿದಲ್ಲದೆ, ನಗರದಲ್ಲಿ ಯಾವುದೇ ಕ್ರೀಡಾಕೂಟ ನಡೆದರು ತಮ್ಮ ಕೈಲಾದ ಸಹಕಾರ ನೀಡುವ ಎನ್.ಎಸ್.ಜಯಕುಮಾರ್, ಜಿಲ್ಲೆಯಿಂದ ಬೇರೆ ಊರುಗಳಿಗೆ ಕ್ರೀಡಾಕೂಟಕ್ಕಾಗಿ ತೆರಳುವ ಮಕ್ಕಳಿಗೂ ಊಟ, ವಸತಿ ಭತ್ಯ ಒದಗಿಸುವ ಜೊತೆ, ಸಮವಸ್ತ್ರ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು.
ಈ ವೇಳೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಾಸು, ಮುಖಂಡರಾದ ಕೆ.ಹೆಚ್.ಜಯರಾಮ್, ಕೃಷ್ಣಮೂರ್ತಿ, ವಾಲೆ ಚಂದ್ರು, ವಿಠಲ್, ಅನಿಲ್, ಕುಚ್ಚಂಗಿ ಪ್ರಸನ್ನ ಮತ್ತಿತರರು ಇದ್ದರು.
ಎನ್.ಎಸ್.ಜೆಗೆ ಹುಟ್ಟುಹಬ್ಬದ ಸಂಭ್ರಮ
Get real time updates directly on you device, subscribe now.
Prev Post
Next Post
Comments are closed.