ಎಎಪಿ ಸದಸ್ಯತ್ವ ಅಭಿಯಾನ ಆರಂಭ

160

Get real time updates directly on you device, subscribe now.

ಶಿರಾ: ದೇಶದಲ್ಲಿ ಕಳೆದ 75 ವರ್ಷಗಳಿಂದ ಇದುವರೆಗೂ ಆಡಳಿತ ಮಾಡಿರುವ ಪಕ್ಷಗಳು ಜನರಿಗೆ ಬೇಕಾದ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೊಡಲು ಸಾಧ್ಯವಾಗಿಲ್ಲ ಎಂದು ಎಎಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಶಶಿಕುಮಾರ್.ಆರ್ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಮ್ ಆದ್ಮಿ ಪಾರ್ಟಿ(ಜನ ಸಾಮಾನ್ಯರ ಪಕ್ಷ)ಯ ವತಿಯಿಂದ ನಡೆದ ಪತ್ರಿಕಾಗ್ಠೋಯಲ್ಲಿ ಮಾತನಾಡಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹೋರಾಟ ಮಾಡಿ ಅಮ್ ಆದ್ಮಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಎಎಪಿಯಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ. ಪಾರದರ್ಶಕ ಆಡಳಿತ ನೀಡಲಾಗುತ್ತಿದೆ. ಎಎಪಿ ಉದ್ದೇಶ ಜನರ ಸಮಸ್ಯೆಗಳನ್ನು ಪರಿಹರಿಸುವುದು. ದೆಹಲಿಯಲ್ಲಿ ಅಭಿವೃದ್ಧಿಯಾದಂತೆ ಕರ್ನಾಟಕದಲ್ಲೂ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಎಎಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದೇವೆ. ಬೇರೆ ಪಕ್ಷದವರು ಸದಸ್ಯತ್ವಕ್ಕಾಗಿ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಆದರೆ ಎಎಪಿ ಪಕ್ಷ ಸೇರ್ಪಡೆಗೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ ಎಂದರು.
ಎಎಪಿ ಪಕ್ಷದ ಶಿರಾ ವಿಧಾನಸಭಾ ಕ್ಷೇತ್ರದ ಅಂಕಸಂದ್ರ ಪ್ರೇಮ ಕುಮಾರ್ ಮಾತನಾಡಿ ದೇಶದಲ್ಲಿ ಇಂದಿನ ಪರಿಸ್ಥಿತಿ ನೋಡಿದರೆ ನಾವು ಯಾವ ಸನ್ನಿವೇಶದಲ್ಲಿದ್ದೇವೆ ಎಂಬ ಬಗ್ಗೆ ಗೊಂದಲದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಆಶಾಕಿರಣ ಅಮ್ ಆದ್ಮಿ ಪಕ್ಷವಾಗಿದೆ. ಎಎಪಿ ಪಕ್ಷದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಈಗಾಗಲೇ ಅಭಿವೃದ್ದಿ ಮಾಡಿ ತೋರಿಸಿದ್ದಾರೆ. ವಿಶ್ವದರ್ಜೆಯ ಶಾಲೆಗಳು, ವಿಶ್ವದರ್ಜೆಯ ಆಸ್ಪತ್ರೆಗಳು. ವಿಶ್ವದ ಅತ್ಯುನ್ನತ ನಗರಗಳಲ್ಲಿ ಭಾರತದ ದೆಹಲಿ ಮಾತ್ರ ಸೇರ್ಪಡೆಗೊಂಡಿದೆ ಎಂದರೆ ಅಭಿವೃದ್ಧಿಯು ಯಾವ ಮಟ್ಟದಲ್ಲಿ ಆಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಮ್ ಆದ್ಮಿ ಪಕ್ಷ ಎಂದರೆ ಜನಸಾಮಾನ್ಯರ ಪಕ್ಷ. ಎಎಪಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಅಭೂತಪೂರ್ವ ಬದಲಾವಣೆ ತಂದಿದೆ. ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬರುವ ಮುಂದೆ 18 ಸಾವಿರ ಕೋಟಿ ಬಜೆಟ್ ಇತ್ತು. ಇಂದು 67 ಸಾವಿರ ಕೋಟಿಗೆ ತೆಗೆದುಕೊಂಡು ಹೋಗಿದ್ದಾರೆ. ಮುಂಗಡಪತ್ರದಲ್ಲಿ ಮಂಡಿಸಿದ ಎಲ್ಲಾ ಕೆಲಸಗಳನ್ನ ಮಾಡಿ ಇನ್ನೂ 1601 ಕೋಟಿ ರೂ.ಗಳನ್ನು ಉಳಿಕೆ ಮಾಡಿದ್ದಾರೆ. ಈ ರೀತಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಪತ್ರಿಕಾಗ್ಠೋಯಲ್ಲಿ ಎಎಪಿ ಪಕ್ಷದ ಜಿಲ್ಲಾ ಮಾಧ್ಯಮ ಸಂಯೋಜಕ ನಾಗೇಶ್ ಮಾತನಾಡಿ ಎಎಪಿ ಪಕ್ಷವು ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ. ಆದ್ದರಿಂದ ಪಕ್ಷವನ್ನು ಬಲಪಡಿಸಲು ಶಿರಾ ತಾಲ್ಲೂಕಿನಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದೇವೆ. ಎಎಪಿ ಪಕ್ಷ ಸೇರ್ಪಡೆಗೊಳ್ಳಲು 7669400410 ಈ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ ಅಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಬಹುದು ಎಂದರು.
ಕಾರ್ಯದರ್ಶಿ ಸಾಜೀರ್, ಮಾಧ್ಯಮ ಸಂಯೋಜಕ ಗೋಮಾರದಹಳ್ಳಿ ಪಿ ಮಂಜುನಾಥ್, ಮುಬಾರಕ್, ನೂರುಲ್ಲಾ, ಆಸೀಸ್ ಪಾಷ, ಉತ್ಪುಲ್ಲಾ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!