ಹಿಂದುಳಿದವರಿಗೆ ಅಧಿಕಾರ ಕೊಡಿಸಲು ಶ್ರಮಿಸಿರುವೆ

ತುಮಕೂರಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಹೆಚ್.ಡಿ.ಡಿ ಹೇಳಿಕೆ

180

Get real time updates directly on you device, subscribe now.

ತುಮಕೂರು: ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರಕಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ನಗರದ ಗಾಜಿನಮನೆಯಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2018ರಲ್ಲಿ ಚುನಾವಣೆಗೆ ನಿಲ್ಲೋದಿಲ್ಲ ಎಂದರು, ಪಕ್ಷದ ಮುಖಂಡರ ಒತ್ತಾಯಕ್ಕೆ ಸ್ಪರ್ಧಿಸಬೇಕಾಯಿತು, ರಾಜ್ಯಸಭೆ ಸದಸ್ಯನಾಗಬೇಕಾದರೂ ಸೋನಿಯಾಗಾಂಧಿ ಮತ್ತು ಬಿಜೆಪಿ ಮುಖಂಡರ ಒತ್ತಾಯವೇ ಕಾರಣ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ನಾನು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಲ್ಪಿಸಿದ್ದೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 150 ಕೋಟಿ ಅನುದಾನ ನೀಡಿದ್ದೆ, ಸರ್ಕಾರ ಅದನ್ನು ವಾಪಾಸ್ ಪಡೆದಿದೆ, ಬಿಜೆಪಿ ಶಾಸಕರಿದ್ದರು ಸಹ ಅನುದಾನ ಹಿಂಪಡೆದಿರುವುದು ಏಕೆ ಎಂದರು.
ಪಕ್ಷದಲ್ಲಿನ ಗೊಂದಲದಿಂದಾಗಿ ಎರಡು ಬಾರಿ ಸೋತರು ಸಹ ಗೋವಿಂದರಾಜು ಅವರು, ಸಮಾಜಸೇವೆ ನಿಲ್ಲಿಸಲಿಲ್ಲ, ಕುಡಿಯುವ ನೀರು, ಕೋವಿಡ್ ಸಂದರ್ಭಗಳಲ್ಲಿ ಜನರ ಕೈ ಬಿಡಲಿಲ್ಲ ಎನ್ನಿವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು.
ದೇವೇಗೌಡರು ಹೋರಾಟ ಮಾಡದೆ ಇದ್ದದ್ದರೆ, ತುಮಕೂರು ಜಿಲ್ಲೆ ಶಾಶ್ವತ ಬರಗಾಲಕ್ಕೆ ತುತ್ತಾಗಬೇಕಿತ್ತು, ಅವರ ಹೋರಾಟ ಮಾಡಿದ್ದರಿಂದಲೇ ಖಾಸಗಿ ಬಿಲ್ ಮಂಡನೆ ಮಾಡಿ ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಸಾಧ್ಯವಾಯಿತು ಎನ್ನುವುದು ವಿಧಾನಸಭಾ ಕಲಾಪದ ದಾಖಲೆಗಳಲ್ಲಿವೆ, ಹಾರಂಗಿ ಜಲಾಶಯ ನಿರ್ಮಾಣಕ್ಕೆ ದೇವೇಗೌಡರ ಹೋರಾಟ ಕಾರಣ ಎನ್ನುವುದನ್ನು ಜನರು ಮರೆಯಬಾರದು ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ, ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡುತ್ತೇನೆ, ತುಮಕೂರು ಜಿಲ್ಲೆಗೆ ನೀರು ಹರಿಸಲು ದೇವೇಗೌಡರ ಕುಟುಂಬ ತೊಂದರೆ ಮಾಡಿಲ್ಲ, ಇಂತಹ ಅಪಪ್ರಚಾರಕ್ಕೆ ತೆರೆ ಎಳೆಯಬೇಕಾಗಿದೆ ಎಂದು ಮನವಿ ಮಾಡಿದರು.
ಎತ್ತಿನಹೊಳೆ ಪ್ರಾರಂಭವಾದರೂ ಅದು ಸಕಲೇಶಪುರದಲ್ಲಿಯೇ ಇದೆ, ಜನರ ದುಡ್ಡು ಮಾತ್ರ ಸಾರಾಗವಾಗಿ ಎರಡು ಸರ್ಕಾರಗಳು ಹರಿಸಿವೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯನ್ನು ಜಾರಿಗೆ ತಂದು ಗುಣಾತ್ಮಕ ಉಚಿತ ಶಿಕ್ಷಣ, ಸುಸಜ್ಜಿತ ಆಸ್ಪತ್ರೆ, ಉಚಿತ ವೈದ್ಯಕೀಯ ಶಿಕ್ಷಣ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಲೂಟಿ ಹೂಡೆದು ರಾಜಕಾರಣ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಗೆ ಮತ ನೀಡುವುದಿಲ್ಲ ಎಂದು ಬಡಾವಣೆಗಳಲ್ಲಿ ಬೋರ್ಡ್ ಹಾಕಬೇಕು ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ ಹಳೇ ಜೆಡಿಎಸ್ ಮುಖಂಡರನ್ನು ಸಂಘಟಿಸಿ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಗೊಳಿಸುತ್ತೇನೆ, ಎಲ್ಲಾ ಸಮುದಾಯಗಳ ಜನರು ಜೆಡಿಎಸ್ ಬೆಂಬಲಿಸಿದ್ದಾರೆ, ಜೆಡಿಎಸ್ ಬಲ ಹಾಗೆ ಇದೆ, ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಬಿಡಲಿಲ್ಲ, ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ, ನಮ್ಮ ಹತ್ರ ಹಣ ಇಲ್ಲ, ಆದರೆ ಜನ ಬಲ ಇದೆ, ಮುದ್ದಹನುಮೇಗೌಡ ಬಿಜೆಪಿಗೆ ಹೋಗುತ್ತಿದ್ದಾರೆ, ಮೂಲ ನಿವಾಸಕ್ಕೆ ಹೋಗಿತ್ತಿದ್ದಾರೆ, ಬಸವರಾಜು ಕೇಶವ ಕೃಪಕ್ಕೆ ಹೋಗುತ್ತಾರೋ, ಬಸವಕೃಪವಾಗಿರುವ ಜೆಡಿಎಸ್ಗೆ ಬರುತ್ತಾರೋ ನಿರ್ಧಾರಿಸಬೇಕಿದೆ ಎಂದರು.
ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಕುಮಾರಣ್ಣ ಅವರನ್ನು ಮುಖ್ಯಮಂತ್ರಿಮಾಡಲು ಅವಕಾಶ ನೀಡಬೇಕು, ತುಮಕೂರು ನಗರದಲ್ಲಿ ನಡೆದಿರುವ ಐತಿಹಾಸಿಕ ಕಾರ್ಯಕ್ರಮವನ್ನು ಜೆಡಿಎಸ್ ನಡೆಸುವ ಮೂಲಕ ಮುಂದಿನ ಬಾರಿ ಜೆಡಿಎಸ್ ಆಯ್ಕೆಯಾಗಲಿದೆ ಎನ್ನುವುದನ್ನು ಸಾಬೀತುಪಡಿಸಲಾಗಿದೆ ಎಂದರು.
ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಿದ ಏಕೈಕ ರಾಜಕಾರಣಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿರುವ ನದಿ ಮೂಲಗಳ ಮೂಲಕ ರೈತರಿಗೆ, ಕುಡಿಯುವ ನೀರಿಗಾಗಿ ನೀರಾವರಿ ಯೋಜನೆ ರೂಪಿಸಲು ಜನತಾ ಜಲಧಾರೆ ರಥಯಾತ್ರೆ ನಡೆಯುತ್ತಿದೆ ಎಂದರು.
ಮೂರು ತಿಂಗಳಲ್ಲಿ ಕಳೆಯಲಿ ಜಿಲ್ಲೆಯಲ್ಲಿ ಜೆಡಿಎಸ್ ಬಲ ಏನು ಎನ್ನುವುದನ್ನು ತೋರಿಸುತ್ತೇವೆ, ಜಿಲ್ಲೆಯಿಂದ ಕನಿಷ್ಠ ಎಂಟು ಶಾಸಕರನ್ನು ಆಯ್ಕೆ ಮಾಡುವ ಭರವಸೆಯನ್ನು ಜಿಲ್ಲೆಯ ಪರವಾಗಿ ನೀಡುತ್ತೇವೆ, ಜಲಧಾರೆ ಯಾತ್ರೆಗೆ ಸಾವಿರಾರು ರೈತರು ಸ್ವಯಂ ಪ್ರೇರಿತರಾಗಿ ಭಾಗಿಯಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಇಸ್ಮಾಯಿಲ್, ನರಸಿಂಹರಾಜು, ಬೆಳ್ಳಿಲೋಕೇಶ್, ಟಿ.ಆರ್.ನಾಗರಾಜು, ಧರಣೇಂದ್ರ ಕುಮಾರ್, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ರವೀಶ್ ಜಾಂಗೀರ್, ಗಂಗಣ್ಣ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!