ಪಿ.ಎಸ್.ಐ ಅಕ್ರಮ ನೇಮಕದ ರೂವಾರಿಗಳಿಗೆ ಶಿಕ್ಷೆ ಆಗಲಿ: ಹೆಚ್.ಡಿ.ಕೆ

201

Get real time updates directly on you device, subscribe now.

ತುಮಕೂರು: ಪಿ.ಎಸ್.ಐ ಅಕ್ರಮ ನೇಮಕದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು, ಆಯ್ಕೆ ಪಟ್ಟಿ ರದ್ದು ಮಾಡಿ ಹೊಸ ಪರೀಕ್ಷೆ ಮಾಡಿಸಬೇಕು, ಸರ್ಕಾರ ಅದೇನು ಪಾರದರ್ಶಕ ತನಿಕೆ ನಡೆಸುತ್ತೋ ಗೊತ್ತಿಲ್ಲ, ಆರೋಪಿ ಟಾಟಾ ಮಾಡಿಕೊಂಡು ಹೋಗ್ತಾನೆ, ನಾನು ಬಂದು ಎಲ್ಲಾ ಬಿಚ್ಚಿಡ್ತೀನಿ ಎಂದು ಹೇಳ್ತಾನೆ ಅಂದ್ರೆ ಈ ಅಕ್ರಮ ಎಂತದ್ದು ಯೋಚಿಸಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತುಮಕೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ನಂತರ ಮಾತನಾಡಿ, ಪಿಎಸ್ಐ ನೇಮಕದಲ್ಲಿ ಯಾರೇ ಅಧಿಕಾರಿ ತಪ್ಪು ಮಾಡಿದ್ದರು ಅವರನ್ನು ಅಮಾನತು ಮಾಡದೇ ಡಿಸ್ಮಿಸ್ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ತುಮಕೂರಿನ ಗುಬ್ಬಿ ತಾಲ್ಲೂಕಲ್ಲಿ ನಡೆದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ತಿಯಿಸಿ ಈ ಘಟನೆ ನಡೆಯಬಾರದಿತ್ತು, ಹತ್ಯೆ ಬಗ್ಗೆ ಎಸ್ಪಿಯವರಿಂದ ಮಾಹಿತಿ ಪಡೆದೆ, ಇವರು ಮೋಟರ್ ಪಂಪ್, ಅಡಿಕೆ ಬೆಳೆ ಕದಿಯುತ್ತಿದ್ದರು, ಇದರಿಂದ ಕೋಪಗೊಂಡು ಈ ಘಟನೆ ನಡೆದಿದೆ ಎಂಬ ಮಾಹಿತಿ ನೀಡಿದರು, ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯಲ್ಲ, ಈ ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ ಎಂದರು.
ಮೈಸೂರು ಭಾಗದಲ್ಲಿ ಜೆಡಿಎಸ್ ಒಂದು ಸೀಟು ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಮೊದಲು ಅವರು ಗೆಲ್ತಾರಾ ನೋಡಿಕೊಳ್ಳಲಿ, ಇನ್ನು ಕ್ಷೇತ್ರ ಹುಡುಕಿಕೊಂಡು ಕುಳಿತಿದ್ದಾರೆ, ನನ್ನ ಪಕ್ಷ ಒಂದು ಸೀಟು ಗೆಲ್ಲಲ್ಲ ಎಂಬುದು ಬಾಲಿಷವಾದ ಹೇಳಿಕೆ, ರಾಜಕೀಯ ಗೊತ್ತಿಲ್ಲದವು ಇಂಥ ಮಾತನಾಡಲ್ಲ ಎಂದು ತಿರುಗೇಟು ನೀಡಿದರು.
ಜನತಾ ಜಲಧಾರೆ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಈ ಕಾರ್ಯಕ್ರಮಕ್ಕೆ ಒಂದು ವರ್ಷದ ಮುಂಚೆ ಚಾಲನೆ ನೀಡಲಾಗಿತ್ತು,
ನಮ್ಮ ರಾಜ್ಯದ 51 ಉಪ ನದಿ ನೀರು ಒಳಗೊಂಡಂತೆ ಇದಕ್ಕೆ ಜನತೆ ಧ್ವನಿಯಾಗಯತ್ತಾರೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಹಂಚಿಕೆ ಮಾಡುವ ಹಣದಿಂದ ಮುಂದಿನ 100 ವರ್ಷಗಳಾದರೂ ನೀರಾವರಿ ಯೋಜನೆಗಳು ಪೂರ್ಣವಾಗಲ್ಲ ಎಂದರು.
ಇನ್ನು ತೆಲಂಗಾಣದಲ್ಲಿ ಕಾಳೇಶ್ವರ ನೀರಾವರಿ ಯೋಜನೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ ಖರ್ಚು ಮಾಡಿ 13 ಜಿಲ್ಲೆಗೆ 2 ವರ್ಷದಲ್ಲಿ ನೀರು ಕೊಟ್ಟಿದ್ದಾರೆ, ಇದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ, ರಾಜ್ಯದಲ್ಲಿ ನೀರಾವರಿ ಯೋಜನೆ ಮಾಡಲು ಕಳಕಳಿ, ಬದ್ಧತೆ ಮುಖ್ಯ, ಎತ್ತಿನ ಹೊಳೆ ಯೋಜನೆ ವಿಷಯದಲ್ಲಿ ಸರಿಯಾದ ಮಾರ್ಗ ಅನುಸರಿಸಲಿಲ್ಲ, ರೈತರಿಗೆ ಸರಿಯಾಗಿ ಪರಿಹಾರ ನೀಡಲಿಲ್ಲ, ಗುತ್ತಿಗೆದಾರರಿಗೆ ಮಾತ್ರ ಯಥೇಚ್ಚವಾಗಿ ಹಣ ನೀಡುತ್ತಾರೆ ಎಂದು ಆರೋಪಿಸಿದರು, ಎತ್ತಿನ ಹೊಳೆ, ಮಹದಾಯಿ, ಅಪ್ಪರ್ ಭದ್ರ ಯೋಜನೆಗಾಗಿಯೋ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!