ಕುಣಿಗಲ್: ಮಂಗಳವಾರ ರಾತ್ರಿ ಪಟ್ಟಣದಲ್ಲಿ ಭಾರಿ ಗಾಳಿಯೊಂದಿಗೆ ಸುರಿದ ಮಳೆಗೆ 15ನೇ ವಾರ್ಡ್ ಪ್ರದೇಶದಲ್ಲಿ ಮರ ಒಂದು ಧರೆಗೆ ಉರುಳಿ ರಸ್ತೆ ಸಂಚಾರ ಬಂದ್ ಆದರೆ ಕೆಲವಾರು ಮನೆಗಳ ವಿದ್ಯುತ್ ಸರಬರಾಜು ನಿಂತು ನಾಗರಿಕರು ಪರದಾಡಿದರು.
ಮಂಗಳವಾರ ರಾತ್ರಿ ಎಂಟುಗಂಟೆ ವೇಳೆಗೆ ಮಿಂಚು, ಗುಡುಗಿನ ಜೊತೆಯಲ್ಲಿ ಭಾರಿ ಗಾಳಿಯಿಂದ ಕೂಡಿದ ಮಳೆ ಆರಂಭವಾಗಿದ್ದು, ದೈನಂದಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನಾಗರಿಕರು ಪರದಾಡಿದರು. ಗಾಳಿಯ ರಭಸಕ್ಕೆ ಕೆಲ ಅಂಗಡಿಗಳ ಮುಂದೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ಹಾಳೆ, ಶೀಟ್ಗಳು ತೂರಿ ಹೋದವು, ಕೊತ್ತಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಯಿ ಕಟ್ಟುತ್ತಿದ್ದ ಅಡಿಕೆ ಉದುರಿ ಬೆಳಗಾರನಿಗೆ ನಷ್ಟ ಉಂಟಾಯಿತು, ಪಟ್ಟಣದ 15ನೇ ವಾರ್ಡ್ನ ಕೆ.ರಮೇಶ್ರವರ ಮನೆ ಸಮೀಪದ ತಿರುವಿನಲ್ಲಿ ರಸ್ತೆ ಬದಿಯ ಮರ ದಿಡೀರ್ ಉರುಳಿದ ಪರಿಣಾಮ ಕೆಲ ಮನೆಗಳ ವಿದ್ಯುತ್ ವೈರ್ ತುಂಡಾಗಿ ಮನೆಗಳ ವಿದ್ಯುತ್ ಸರಬರಾಜು ನಿಂತು ನಾಗರಿಕರು ಪರದಾಡಿದರು. ಅದೃಷ್ಟವಶಾತ್ ದಿನಾಲೂ ಜನನಿಬಿಡದ ರಸ್ತೆಯಲ್ಲಿ ಮರ ಉರುಳಿಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬುಧವಾರ ಸಂತೇ ದಿನವಾದ್ದರಿಂದ ಈ ರಸ್ತೆ ಬಳಸಿ ಸಂತೆಗೆ ಹೋಗುವವರು ಪರದಾಡುವಂತಾಯಿತು. ಪುರಸಭೆ ಸದಸ್ಯ ಕೋಟೆ ನಾಗಣ್ಣ, ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಮರ ತರವುಗೊಳಿಸಲಾಯಿತು. ಮಂಗಳವಾರ ರಾತ್ರಿ ಪಟ್ಟಣದ 14 ಮಿ.ಮೀ, ಅಮೃತೂರಿನಲ್ಲಿ 7 ಮಿ.ಮೀ ಮಳೆಯಾಗಿದೆ.
ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ
Get real time updates directly on you device, subscribe now.
Comments are closed.