ಕುಣಿಗಲ್: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದನ್ನು ಖಂಡಿಸಿ ಹೇರೂರು ಸುತ್ತಮುತ್ತಲ ಗ್ರಾಮಸ್ಥರು ಬೆಸ್ಕಾಂ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಸಮರ್ಪಕ ವಿದ್ಯುತ್ ನೀಡದೆ ಇದ್ದಲ್ಲಿ ಬಿಲ್ಪಾವತಿ ನಿರಾಕರಣೆ ಚಳವಳಿ ನಡೆಸುವ ಎಚ್ಚರಿಕೆ ನೀಡಿದರು.
ಕುಣಿಗಲ್ ಪಟ್ಟಣದಲ್ಲಿ ಕೇವಲ ಐದು ಕಿ.ಮೀ ದೂರದ ಹೇರೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ದಿನಕ್ಕೆ ಕನಿಷ್ಟ ಮೂರು ಗಂಟೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ನಿರಂತರ ಜ್ಯೋತಿಯ ಮನೆಗಳಿಗೂ ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ, ಕರೆಂಟ್ ಇಲ್ಲದೆ ಕುಡಿಯುವ ನೀರು ಸೇರಿದಂತೆ ಯಾವುದೇ ಹಲವು ಸೇವೆಗಳಿಗೆ ತೊಂದರೆಯಾಗುತ್ತಿದೆ, ಈ ಹಿಂದೆ ಹಲವಾರು ಬಾರಿ ಮನವಿ ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ, ವಿದ್ಯುತ್ ಸಮರ್ಪಕ ಪೂರೈಕೆ ಬಗ್ಗೆ ಇಲಾಖೆ ಸಿಬ್ಬಂದಿ, ಲೈನ್ ಮನ್ ಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಸಮರ್ಪಕ ಉತ್ತರ ನೀಡುವುದಿಲ್ಲ, ಪರಿಸ್ಥಿತಿ ಹೀಗೆ ಮುಂದುವರೆದರೆ ವಿದ್ಯುತ್ ಬಿಲ್ ಪಾವತಿ ಮಾಡದೆ ನಿರಾಕರಣೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ, ಇಲಾಖೆ ಅಸಮರ್ಪಕ ಕಾರ್ಯ ವೈಖರಿ ವಿರುದ್ಧ ಶೆಟ್ಟಿಗೆಹಳ್ಳಿ, ಮುದ್ದಹನುಮನ ಪಾಳ್ಯ, ಗಾಳಿಹನುಮನ ಪಾಳ್ಯ, ಹನುಮಪುರ, ಗವಿಮಠ, ಕೊತ್ತಿಪುರ, ಲಾಳಾಪುರ, ಈಚಲುಪಾಳ್ಯ ಕುಳ್ಳಿನಂಜನಪಾಳ್ಯದ ಗ್ರಾಮದ ಪ್ರಮುಖರಾದ ಶಂಕರ, ಉಮೇಶ, ಶಿವಶಂಕರ ಇತರರು ಅಕ್ರೋಶ ವ್ಯಕ್ತಪಡಿಸಿದರು. ಬೆಸ್ಕಾಂ ಇಇ ಪರಮೇಶ್ವರ್ ರೈತರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಕರೆಂಟ್ ಕಣ್ಣಾಮುಚ್ಚಾಲೆಗೆ ಗ್ರಾಮಸ್ಥರ ಆಕ್ರೋಶ
Get real time updates directly on you device, subscribe now.
Prev Post
Next Post
Comments are closed.